ತುಮಕೂರು :
ಹಿಜಾಬ್ ಧರಿಸಿ ಕಾಲೇಜಿಗೆ ಬರಲು ಅವಕಾಶವಿಲ್ಲ, ಇದು ಸಂವಿಧಾನಕ್ಕೆ ವಿರೋಧ ಎಂದು ಪ್ರತಿಭಟಿಸಿ ಉಪನ್ಯಾಸಕಿಯೊಬ್ಬರು ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ.
ನಗರದ ಜೈನ್ ಪಿಯು ಕಾಲೇಜಿನ ಇಂಗ್ಲಿಷ್? ಉಪನ್ಯಾಸಕಿ ಚಾಂದಿನಿ ಹಿಜಾಬ್ ಧರಿಸಲು ಅವಕಾಶ ನೀಡದಿರುವುದನ್ನು ಖಂಡಿಸಿ ರಾಜೀನಾಮೆ ನೀಡುತ್ತಿದ್ದೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಹಿಂದಿನಿಂದಲೂ ಹಿಜಾಬ್ ಧರಿಸಿಯೇ ಕಾಲೇಜಿಗೆ ಚಾಂದಿನಿ ಹಾಜರಾಗುತ್ತಿದ್ದರು. ಇತ್ತೀಚೆಗೆ ಹಿಜಾಬ್-ಕೇಸರಿಶಾಲು ವಿವಾದ ತಾರಕ್ಕೇರಿದ ನಂತರ ಹಿಜಾಬ್ ಧರಿಸಿ ಕಾಲೇಜಿಗೆ ಹಾಜರಾಗದಂತೆ ಆಡಳಿತ ಮಂಡಳಿ ಸೂಚಿಸಿತ್ತು.
ಜೈನ್ ಪಿಯು ಕಾಲೇಜು, ವಿದ್ಯಾವಾಹಿನಿ ಕಾಲೇಜು ಸೇರಿದಂತೆ ತುಮಕೂರು ನಗರದ ಹಲವು ಕಡೆ ಚಾಂದಿನಿ ಅಥಿತಿ ಉಪನ್ಯಾಸಕಿಯಾಗಿ ಕೆಸಲ ಮಾಡುತ್ತಿದ್ದರು. ಗುರುವಾರ ಜೈನ್ ಪಿಯು ಕಾಲೇಜಿಗೆ ರಾಜೀನಾಮೆ ಕೊಟ್ಟಿದ್ದಾರೆ.
(Visited 4 times, 1 visits today)