ಮಧುಗಿರಿ :

      ‘ಚಿರತೆಗಳು ಸರ್ ಚಿರತೆಗಳು, ಅರಣ್ಯ ಇಲಾಖಾಧಿಕಾರಿಗಳು ಎಲ್ಲಿ ಸರ್’’ ಎಂದು ಪಟ್ಟಣದ ಪುರಸಭೆ ವ್ಯಾಪ್ತಿಯ ಸೀಮೆಯಾದ ಬಾವಿ ಸಮೀಪ ವಾಸಿಸುತ್ತಿರುವ ಜನತೆಯ ಮಾತಾಗಿದೆ.
ಕಳೆದ ಒಂದು ವಾರದಿಂದ ರಾತ್ರಿಯಾಗುತ್ತಿದ್ದಂತೆ ವಿಶ್ವಪ್ರಸಿದ್ಧ ಏಕಶಿಲಾ ಬೆಟ್ಟದ ತಪ್ಪಲಿನಲ್ಲಿ 2 ಚಿರತೆಗಳು ಬೆಟ್ಟದ ಬುಡದಲ್ಲಿರುವ ಮನೆ ಹಿಂಬದಿಯಲ್ಲಿ ಆಹಾರಕ್ಕಾಗಿ ಹೊಂಚು ಹಾಕಿ ಕುಳಿತಿರುತ್ತದೆ. ನಾಯಿ, ಕುರಿ ,ದನಗಳನ್ನು ಚಿರತೆಗಳು ಕೊಂಡೊಯ್ಯುತ್ತಿವೆ. ಈ ವೇಳೆ ಪ್ರಾಣಿಗಳ ಚೀರಾಟ ಕಂಡು ಜನ ಭಯಭೀತರಾಗಿದ್ದಾರೆ.ಜನರು ತಮ್ಮ ಪ್ರಾಣ ರಕ್ಷಣೆಗಾಗಿ ಮನೆಗಳನ್ನು ಬಿಟ್ಟು ಹೊರಗಡೆ ಬರುತ್ತಿಲ್ಲ. ಕೆಲವು ಯುವಕರು ಪಟಾಕಿಗಳನ್ನು ಸಿಡಿಸಿದರೂ ಕೂಡ ಚಿರತೆಗಳನ್ನು ಜಗ್ಗುತ್ತಿಲ್ಲ.
ರಾತ್ರಿ 8ಆಗುತ್ತಿದ್ದಂತೆ ಚಿರತೆಗಳು ಕಾಣಿಸುತ್ತಿವೆ, ಬೆಳಗ್ಗೆ 9ಗಂಟೆಯ ವರೆಗೂ ಮನೆಯಿಂದ ಯಾರು ಹೊರ ಬರುವಂತಿಲ್ಲ. ಇತ್ತೀಚೆಗೆ ಆನಂದ ರಾಯನ ಗುಡ್ಡ (ಬಸವಣ್ಣನ ಗುಡ್ಡದ) ಬೆಟ್ಟದಲ್ಲಿ ಹಾಡುಹಗಳಿನಲ್ಲಿ ಚಿರತೆಗಳು ಕಂಡುಬಂದಿತ್ತು. ಸಾರ್ವಜನಿಕರು ಕಣ್ಣಾರೆ ಕಂಡಿದ್ದರು. ಈಗ ರಾತ್ರಿಯಾಗುತ್ತಿದ್ದಂತೆ ಚಿರತೆಗಳು ಕಾಣಿಸಿಕೊಂಡಿದ್ದು ಅರಣ್ಯ ಇಲಾಖೆ ಚಿರತೆ ಹಿಡಿಯುವ ಬೋನು ಇಡುವಂತೆ ನಾಗರಿಕರು ಆಗ್ರಹಿಸಿದ್ದಾರೆ. ಈ ಭಾಗದಲ್ಲಿ ವಾಸಿಸುತ್ತಿರುವ ಬಹುತೇಕರು ಎಲ್ಲರೂ ಕೂಲಿ ಕಾರ್ಮಿಕರಾಗಿದ್ದು ಕೂಲಿಗೆ ಹೋಗಿ ಮನೆಯಲ್ಲಿ ಮಹಿಳೆಯರು ಒಂಟಿ ಇರುತ್ತಾರೆ ಈ ವೇಳೆಯಲ್ಲಿ ಏನಾದರೂ ಹಗಲಿನ ವೇಳೆಯಲ್ಲಿ ಚಿರತೆಗಳು ಕಂಡರೆ ಚಿರತೆಗಳು ಬಂದರೆ ಏನು ಮಾಡುವುದು ಎನ್ನುವ ಸ್ಥಿತಿ ನಿರ್ಮಾಣವಾಗಿದೆ.
ಈ ಭಾಗದಲ್ಲಿ ಕರಡಿಗಳ ಕಾಟವು ಇದ್ದು ಸಾರ್ವಜನಿಕರು ಜೀವ ಭಯದಲ್ಲೆ ಬದುಕುವ ಸ್ಥಿತಿ ನಿರ್ಮಾಣವಾಗಿದೆ.

ಪುರಸಭೆ ವ್ಯಾಪ್ತಿಯ ಇಪ್ಪತ್ತೊಂ ದನೇ ವಾರ್ಡಿನ ಸಿಹಿನೀರು ಬಾವಿ ಸಮೀಪ ಚಿರತೆಗಳು ವಾರದಿಂದ ರಾತ್ರಿಯಾಗುತ್ತಿದ್ದಂತೆ ಬಂದು ಜನರಿಗೆ ಉಪಟಳ ನೀಡುವ ಪ್ರಯತ್ನ ನಡೆಸುತ್ತಿದೆ
ಚಿರತೆ ಬಂದ ತಕ್ಷಣ ನಾಯಿ ಬೊಗಳುವ ಶಬ್ದ ದಿಂದಾಗಿ ನಾಗರಿಕರು ಮನೆ ಬಿಟ್ಟು ಹೊರ ಬಾರದೆ ಮನೆ ಒಳಗೆ ಸೇರಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ ಕೂಡ ಯಾವುದೇ ಕ್ರಮ ಕೈಗೊಳ್ಳದ ಕಾರಣ ಜನರು ಅರಣ್ಯ ಇಲಾಖೆಯ ವಿರುದ್ಧ ಹರಿಹಾಯುತ್ತಿದ್ದಾರೆ
ಪುರಸಭಾ ವ್ಯಾಪ್ತಿಯ ವ್ಯಾಪ್ತಿಯೊಳಗೆ ಈ ಘಟನೆ ನಡೆದಿದ್ದು ಇತ್ತೀಚೆಗೆ ಬಸವಣ್ಣನ ಬೆಟ್ಟದ ಮೇಲೆ 4ಚಿರತೆಗಳು ಇದ್ದವು ಅದನ್ನು ಸಾರ್ವಜನಿಕರು ಕಣ್ಣಾರೆ ಕಂಡಿದ್ದರು ಇನ್ನಾದರೂ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಲಿ ಎಂದು ನಾಗರಿಕರು ಒತ್ತಾಯಿಸಿದ್ದಾರೆ.

(Visited 6 times, 1 visits today)