ತುಮಕೂರು :

      ಉಕ್ರೇನ್‍ನಲ್ಲಿ ಮೃತಪಟ್ಟಿರುವ ಭಾರತೀಯರಿಗೆ ಪರಿಹಾರ ಕೊಡುವ ಸಂಬಂಧ ಕೇಂದ್ರ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಅರಗ ಜ್ಞಾನೇಂದ್ರ ಇಂದಿಲ್ಲಿ ತಿಳಿಸಿದರು.
ನಗರದ ಬಿ.ಹೆಚ್. ರಸ್ತೆಯಲ್ಲಿ ಹೊಸಬಡಾವಣೆ ಪೆÇಲೀಸ್ ಠಾಣೆ ನೂತನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸುವುದಕ್ಕೂ ಮುನ್ನ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಕ್ರೇನ್‍ನಲ್ಲಿ ಸಾವನ್ನಪ್ಪಿರುವ ಭಾರತೀಯರಿಗೆ ಪರಿಹಾರ ನೀಡುವ ಕುರಿತು ಕೇಂದ್ರ ಸರ್ಕಾರ ತೀರ್ಮಾನಿಸಲಿದೆ. ಹಾಗೆಯೇ ಮೃತಪಟ್ಟಿರುವ ರಾಜ್ಯದ ವಿದ್ಯಾರ್ಥಿ ಕುಟುಂಬದವರಿಗೆ ರಾಜ್ಯ ಸರ್ಕಾರದಿಂದ ಪರಿಹಾರ ಒದಗಿಸುವ ಬಗ್ಗೆಯೂ ಚರ್ಚೆ ಮಾಡಲಾಗತ್ತಿದೆ ಎಂದರು.
ನೀಟ್‍ನಿಂದ ರಾಜ್ಯದ ಮಕ್ಕಳಿಗೆ ಅನ್ಯಾಯವಾಗುತ್ತಿರುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಈಗಾಗಲೇ ಈ ವಿಚಾರದ ಕುರಿತು ಅನೇಕ ಚರ್ಚೆಗಳು ನಡೆಯುತ್ತಿವೆ. ಇದರ ಬಗ್ಗೆಯೂ ಕೇಂದ್ರ ಸರ್ಕಾರ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಉತ್ತರಿಸಿದರು.
2016 ರಲ್ಲಿ ಔರಾದ್ಕರ್ ಅವರು ವರದಿಯನ್ನು ಸಲ್ಲಿಸಿದಾಗ ಆ ಸರ್ಕಾರ ರಚನಾತ್ಮಕವಾಗಿ ತೀರ್ಮಾನ ಕೈಗೊಳ್ಳಲಿಲ್ಲ. ಅಂದಿನ ಸರ್ಕಾರ ರಚನಾತ್ಮಕವಾಗಿ ತೀರ್ಮಾನ ಕೈಗೊಂಡಿದ್ದರೆ ತೊಡಕು ಉಂಟಾಗುತ್ತಿರಲಿಲ್ಲ. ಆದರೆ ಈಗಿನ ಪೆÇಲೀಸರಿಗೆ ಇದರ ಲಾಭ ಸಿಕ್ಕಿದೆ. ಈ ಹಿಂದಿನ ಹಿರಿಯ ಅಧಿಕಾರಿಗಳಿಗೆ ತೊಂದರೆಯಾಗಿದೆ. ಹಾಗಾಗಿ ಅದನ್ನು ಸರಿದೂಗಿಸಲು ಭತ್ಯೆಗಳನ್ನು ನೀಡಲಾಗುತ್ತಿದೆ ಎಂದರು.
ಶಿವಮೊಗ್ಗದಲ್ಲಿ ಕೊಲೆಯಾದ ಹರ್ಷನ ಕುಟುಂಬಸ್ಥರಿಗೆ ಬಿಜೆಪಿ ಪಕ್ಷದಿಂದ ಟಿಕೆಟ್ ಕೊಡುವ ವಿಚಾರದ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ, ಸತ್ತವರ ಕುಟುಂಬದವರಿಗೆ ಯಾರೋ ಹೇಳುತ್ತಾರೆ ಎಂದು ಟಿಕೆಟ್ ಕೊಡುತ್ತಾರಾ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸತ್ತವರಿಗೆಲ್ಲ ಟಿಕೆಟ್ ಕೊಟ್ಟಿದ್ದಾರಾ ಎಂದು ಪ್ರಶ್ನಿಸಿದರು.
ಬೇಸ್ ಲೆಸ್ ಟೀಕೆ ಮಾಡುವ ಕಾಂಗ್ರೆಸ್‍ನವರು ಮಾತುಗಳಿಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಹರ್ಷನ ಕುಟುಂಬಕ್ಕೆ ಎಲ್ಲ ರೀತಿಯ ಸಹಕಾರ ಕೊಡುತ್ತಿದ್ದೇವೆ. ಕಾಂಗ್ರೆಸ್ ಆಧಾರ ರಹಿತ ಟೀಕೆ ಮಾಡುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಹರ್ಷನ ತಾಯಿಗೆ ನನಗೆ ಹೇಳಿರುವಂತೆ ಮಗನ ಪ್ರಾಣ ತಂದುಕೊಡುವಂತೆ ಕೇಳಲ್ಲ, ಅವರ ಸಾವು ಅರ್ಥ ಹೀನ ಆಗಬಾರದು, ವ್ಯರ್ಥವೂ ಆಗಬಾರದು. ಹರ್ಷ ಒಂದು ಉದ್ದೇಶಕ್ಕೋಸ್ಕರ ಸತ್ತಿದ್ದಾನೆ. ಅದಕ್ಕೆ ನವ್ಯಾಯ ದೊರಕಿಸಿ ಕೊಡಿ ಎಂದು ಕೇಳದ್ದಾರೆ. ಆ ಕೆಲಸವನ್ನು ನಾವು ಮಾಡುತ್ತಾ ಇದ್ದೇವೆ ಎಂದರು.
ಶಿವಮೊಗ್ಗದ ಎರಡೂ ಠಾಣೆಯ ಪೆÇಲೀಸರ ವಿರುದ್ಧ ತನಿಖೆ ನಡೆಯುತ್ತಿದೆ. ಎರಡೂ ಠಾಣೆಯಲ್ಲಿ ಆರೋಪಿಗಳ ವಿರುದ್ಧ 10-15 ಪ್ರಕರಣಗಳು ಇವೆ. ಏಕೆ ಅದನ್ನು ಇಷ್ಟು ದಿನ ಬೆಳೆಸಿಕೊಂಡಿದ್ದರು. ನಮ್ಮ ಪೆÇಲೀಸರ ಕರ್ತವ್ಯದಲ್ಲಿ ಏನೊ ಎಡವಟ್ಟು ಆಗಿದೆ. ಹಾಗಾಗಿ ಸಮಾಜ ವಿದ್ರೋಹಿಗಳು ಬೆಳೆಯುವ ನಿಟ್ಟಿನಲ್ಲಿ ಪೆÇಲೀಸರ ಪಾತ್ರ ಏನಿದೆ ಎಂಬುದನ್ನು ತಿಳಿದುಕೊಳ್ಳುವ ಅವಶ್ಯಕತೆ ಇದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಇಲಾಖೆ ಮತ್ತು ಪೆÇಲೀಸರ ವೈಫಲ್ಯತೆ ಬಗ್ಗೆ ಜನ ಆರೋಪ ಮಾಡುತ್ತಾರೆ. ಹಾಗಂತ ಪೆÇಲೀಸರನ್ನು ನಾನು ಬಿಟ್ಟು ಕೊಡುತ್ತಿದ್ದೇನೆ ಎಂದಲ್ಲ. ಅನ್ಯಾಯ ಯಾರೂ ಮಾಡಿದರೂ ಒಂದೇ. ಸಾಮಾನ್ಯ ಜನರಿಗೆ, ಪೆÇಲೀಸರಿಗೆ ಹಾಗೂ ಗೃಹ ಸಚಿವರಿಗೆ ಎಂದು ಒಂದೊಂದು ಕಾಯ್ದೆಯಿಲ್ಲ. ಎಲ್ಲರಿಗೂ ಒಂದೇ ಕಾನೂನು. ಈಗಾಗಲೇ ಪೆÇಲೀಸರ ವಿರುದ್ಧ ತನಿಖೆ ಆರಂಭವಾಗಿದೆ. ಒಂದು ವಾರದಲ್ಲಿ ವರದಿ ನೀಡಲು ಸೂಚಿಸಿದ್ದೇನೆ. ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.ಈ ಸಂದರ್ಭದಲ್ಲಿ ಶಾಸಕ ಜ್ಯೋತಿಗಣೇಶ್, ಮುಖಂಡ ಬ್ಯಾಟರಂಗೇಗೌಡ ಮತ್ತಿತರರು ಉಪಸ್ಥಿತರಿದ್ದರು.

(Visited 9 times, 1 visits today)