ತುಮಕೂರು :
ನಗರದ ಎನ್.ಆರ್ ಕಾಲೋನಿಯ ಮಾದಿಗ ಜನಾಂಗದ ಕುಲ ದೇವತೆಯಾದ ಶ್ರೀ ದುರ್ಗಮ್ಮ ದೇವಿಯ ಮೂಲ ನೆಲೆಯಾದ ತುಮಕೂರು ಕಸಬಾ ಸರ್ವೇ ನಂ, 170 ಮತ್ತು 171ರ 1.29 ಎಕರೆ ಭೂಮಿಯನ್ನು ಮಂಜೂರಾತಿ ಮಾಡಿ ಮಾದಿಗ ಜನಾಂಗದ ಧಾರ್ಮಿಕ ನಂಬಿಕೆಯ ದೇವಸ್ಥಾನದ ಜಾಗಕ್ಕೆ ಮುಖ್ಯದ್ವಾರ ನಿರ್ಮಿಸಿ ಎನ್,ಆರ್ ಕಾಲೋನಿ, ಅಂಬೇಡ್ಕರ್ನಗರ, ನಿರ್ವಾಣಿಲೇಔಟ್(ಇಂದಿರಾ ನಗರ) ಹಕ್ಕುಪತ್ರಗಳಿಲ್ಲದ ಕುಟುಂಬಗಳಿಗೆ ಸರಳಖಾತೆ ಮಾಡಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ ಆಯ್ಕೆಯಾಗಿರುವ ಪಲಾನುಭವಿಗಳಿಗೆ ನಗರಪಾಲಿಕೆ ವಿಶೇಷ ಅನುದಾನದಲ್ಲಿ ಪಲಾನುಭವಿ ಶುಲ್ಕ ಪಾವತಿಸಲು ಒತ್ತಾಯಿಸಿ ಇಂದು ತುಮಕೂರು ಜಿಲ್ಲಾಧಿಕಾರಿಗಳ ಕಛೇರಿ ಎದುರು ಶ್ರೀ ದುರ್ಗಮ್ಮ ದೇವಸ್ಥಾನ ಜೀರ್ಣೋದ್ಧಾರ ಮತ್ತು ಎನ್,ಆರ್ ಕಾಲೋನಿ ಅಭಿವೃದ್ಧಿ ಸಂಘ (ರಿ) ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು.
ಪ್ರತಿಭಟನಾ ಧರಣಿಯನ್ನು ಉದ್ದೇಶಿಸಿ ಮಾತನಾಡಿದ ಜನಾಂಗದ ಹಿರಿಯ ಮುಖಂಡರಾದ ಪ್ರೋ ಕೆ.ದೊರೈರಾಜ್ ತುಮಕೂರು ನಗರದ ಅಸ್ತಿತ್ವಕ್ಕೆ ಹಾಗೂ ದಲಿತ ಚಳಿವಳಿಗೆ ತನ್ನದೇಯಾದ ಕೊಡುಗೆ ನೀಡಿರುವ ಎನ್,ಆರ್ ಕಾಲೋನಿಯ ಮಾದಿಗರ ಧಾರ್ಮಿಕ ಅಸ್ಮಿತೆಯ ಭಾಗವಾದ ದುರ್ಗಮ್ಮ ದೇವಸ್ಥಾನದ ಜಾಗವನ್ನು ಜಿಲ್ಲಾಡಳಿತ ಮಂಜೂರು ಮಾಡದೇ 1999ರಿಂದ ನಿರ್ಲಕ್ಷಿಸುತ್ತಿದ್ದು ಕೂಡಲೇ ಜಿಲ್ಲಾಡಳಿತ 1.29 ಎಕರೆ ಭೂಮಿಯನ್ನು ಮಂಜೂರು ಮಾಡಿ ಮಾದಿಗ ಜನಾಂಗದ ಧಾರ್ಮಿಕ ನಂಬಿಕೆಗಳು ಹಾಗೂ ಸಮುದಾಯದ ಶೈಕ್ಷಣೀಕ ಅಭಿವೃದ್ಧಿಗೆ ಮುಂದಾಗಬೇಕೆಂದು ಒತ್ತಾಯಿಸಿದರು. ಹಾಗೂ ಕೋತಿ ತೋಪಿನಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಾಂಸ್ಥಿಕವಾಗಿ ವರ್ಗಾಯಿಸಿ ಖಾಯಂ ವೈದ್ಯರು ಮತ್ತು ಸಿಬ್ಬಂಧಿಗಳನ್ನು ನೇಮಕ ಮಾಡಬೇಕು.
ಹಲವಾರು ಮೇಲ್ವರ್ಗದ ದೇವಸ್ಥಾನಗಳಿಗೆ ಮತ್ತು ಜನಾಂಗಕ್ಕೆ ಎಲ್ಲಾ ಕಾನೂನು ತೊಡಕುಗಳನ್ನು ಮೀರಿಸರ್ಕಾರಿ ಭೂಮಿಯನ್ನು ಮಂಜೂರಾತಿ ಮಾಡುತ್ತಿದ್ದು ಅಸ್ಪøಶ್ಯ ಜನಾಂಗದ ದುರ್ಗಮ್ಮ ದೇವಸ್ಥಾನದ ಜಾಗವನ್ನು ಮಂಜೂರು ಮಾಡದೇ ತಾರತಮ್ಯ ಎಸಗುತ್ತಿರುವುದು ಜಿಲ್ಲಾಡಳಿತಕ್ಕೆ ಮತ್ತು ಜನಪ್ರತಿನಿಧಿಗಳಿಗೆ ಶೋಭೆ ತರುವ ವಿಚಾರವಲ್ಲ ಹಾಗಾಗಿ ಈ ಸಮಸ್ಯೆಯನ್ನು ಪರಿಹರಿಸಲು ಜಿಲ್ಲಾಡಳಿತಕ್ಕೆ 45 ದಿನಗಳ ಗಡುವು ನೀಡಿದ್ದುಕ್ರಮ ಕೈಗೊಳ್ಳದಿದ್ದ ಪಕ್ಷದಲ್ಲಿ ಇಡೀ ಜಿಲ್ಲೆಯ ಮಾದಿಗ ಸಮುದಾಯವನ್ನು ಸಂಘಟಿಸಿ ಪ್ರತಿಭಟಿಸಲಾಗುವುದೆಂದು ಎಚ್ಚರಿಸಿದರು.
ಹಕ್ಕುಪತ್ರ ಮತ್ತು ವಸತಿ ಸಬ್ಸಿಡಿಯನ್ನು ಹಂಚಿಕೆ ಮಾಡಲು ನಗರಪಾಲಿಕೆ ಸದಸ್ಯರಿಂದ ಆಗ್ರಹ
19 ಮತ್ತು 20ನೇ ವಾರ್ಡ್ನ್ನು ಪ್ರತಿನಿಧಿಸುವ ಎನ್,ಆರ್ ಕಾಲೋನಿ ಮತ್ತು ಅಂಬೇಡ್ಕರ್ ನಗರದ ನಗರಪಾಲಿಕೆ ಸದಸ್ಯರುಗಳಾದ ರೂಪಶ್ರೀ ಶೆಟ್ಟಾಳಯ್ಯ ಮತ್ತು ಎ.ಶ್ರೀನಿವಾಸ್ ಮಾತನಾಡಿ ಬಹುತೇಕ ಬಡಜನರು ವಾಸಿಸುವ ಈ ಎರಡು ವಾರ್ಡ್ಗಳಲ್ಲಿ ಅವರತಾತಾ ಮುತ್ತಾಂದಿರ ಹೆಸರುಗಳಲ್ಲಿ ಖಾತೆಗಳಿದ್ದು ವಾರಸುದಾರರಿಗೆ ಹಕ್ಕು ವರ್ಗಾವಣೆಯಾಗಿರುವುದಿಲ್ಲ ಆದ್ದರಿಂದ ನಗರಪಾಲಿಕೆ ಮತ್ತು ಸ್ಲಂ ಬೋರ್ಡ್ಜೊತೆ ಸೇರಿ ಸ್ಥಳ ಪರಿಶೀಲನೆ ಮಾಡಿ ವಾಸಸ್ಥಳ, ವಂಶವೃಕ್ಷ ಇತರೆ ದಾಖಲೆಗಳ ಆಧಾರದಲ್ಲಿ ಖಾತೆ ಮಾಡಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ ಆಯ್ಕೆಯಾಗಿರುವ ಫಲಾನುಭವಿಗಳ ಶುಲ್ಕವನ್ನು ಪಾವತಿಸುವ ಜೊತೆಗೆ ಅಂಬೇಡ್ಕರ್ ನಗರವನ್ನು ಸ್ಲಂ ಕಾಯಿದೆ 17ರ ಪ್ರಕಾರ ಭೂ ಸ್ವಾಧೀನಗೊಳಿಸಬೇಕೆಂದು ಆಗ್ರಹಿಸಿದರು.
ಭೂ ಮಂಜೂರಾತಿ ಬಗ್ಗೆ ಕ್ರಮ ಅಪರಜಿಲ್ಲಾಧಿಕಾರಿ ಪ್ರತಿಭಟನೆ ಮನವಿ ಸ್ವೀಕರಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿಗಳಾದ ಕೆ.ಚೆನ್ನಬಸಪ್ಪ ತುಮಕೂರು ಕಸಬಾ ಗ್ರಾಮ ಸರ್ವೇ ನಂ, 170 ಮತ್ತು 171 ರಲ್ಲಿರುವ ಸರ್ಕಾರಿ ಪಡಾದ ಭೂಮಿಯ ಲಭ್ಯತೆಯನ್ನು ಸರ್ವೇ ಮಾಡಿಸಿ ದೇವಸ್ಥಾನಕ್ಕೆ ಮಂಜೂರು ಮಾಡುವ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಕ್ರಮ ವಹಿಸಲಾಗುವುದೆಂದರು.
ಖಾತೆ ಮತ್ತು ಸಬ್ಸಿಡಿ ನೀಡಲು ನಗರ ಪಾಲಿಕೆ ಬದ್ದ-ಆಯಕ್ತರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿ ಮಾತನಾಡಿದ ಮಹಾನಗರ ಪಾಲಿಕೆ ಆಯುಕ್ತರಾದ ರೇಣುಕಾ ನಾನು ಹಲವಾರು ಬಾರಿ ಎನ್.ಆರ್ ಕಾಲೋನಿ ಮತ್ತು ಅಂಬೇಡ್ಕರ್ ನಗರಕ್ಕೆ ಭೇಟಿ ನೀಡಿದ್ದು ಮನೆಗಳಿಗೆ ದಾಖಲೆಗಳಿಲ್ಲದಿರುವುದರಿಂದ ಖಾತೆ ಮಾಡಲು ಸಾಧ್ಯವಾಗುತ್ತಿಲ್ಲ ಈ ಎರಡು ಪ್ರದೇಶಗಳು ಸ್ಲಂ ಎಂದು ಘೋಷಣೆಯಾಗಿರುವುದರಿಂದ ಹಕ್ಕುಪತ್ರ ನೀಡುವ ಬಗ್ಗೆ ಕೊಳಗೇರಿ ಅಭಿವೃದ್ಧಿ ಮಂಡಳಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಖಾತೆ ಮಾಡಿಕೊಡಲಾಗುವುದು ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ ಆಯ್ಕೆಯಾಗುವ ಪಲಾನುಭವಿಗಳಿಗೆ ನಗರಪಾಲಿಕೆಯಿಂದ ಪಲಾನುಭವಿ ಶುಲ್ಕ ಪಾವತಿಸಲು ಈಗಾಗಲೇ ಕೌನ್ಸಿಲ್ ಸಭೆಯಲ್ಲಿ ಚರ್ಚಿಸಿದ್ದು ಜಿಲ್ಲಾಧಿಕಾರಿಗಳ ಅನುಮೋದನೆ ಪಡೆದು ಕ್ರಮ ಕೈಗೊಳ್ಳಲಾಗುವುದೆಂದರು.
ಪ್ರತಿಭಟನಾ ನೇತೃತ್ವವನ್ನು ಎನ್,ಆರ್ ಕಾಲೋನಿ ಅಭಿವೃದ್ಧಿ ಸಂಘದ ಪದಾಧಿಕಾರಿಗಳಾದ ಎ.ನರಸಿಂಹಮೂರ್ತಿ, ವಾಲೇಚಂದ್ರಯ್ಯ, ಕೆ.ನರಸಿಂಹಮೂರ್ತಿ, ಶಾಂತಕುಮಾರ್, ಜೈಮೂರ್ತಿ, ಲಕ್ಷ್ಮೀನಾರಾಯಣ್, ಕಿರಣ್, ಸುನೀಲ್, ಅರುಣ್, ಮೋಹನ್ ,ತಿರುಮಲಯ್ಯ, ಚಂದ್ರು, ತೇಜಸ್ಕುಮಾರ್, ಅಂಬೇಡ್ಕರ್ನಗರ ಮುಖಂಡರಾದ ವಿ.ಗೋಪಾಲ್, ಅನ್ನಪೂರ್ಣ, ನಿರ್ವಾಣಿಲೇಔಟ್ ಮುಖಂಡರಾದ ಟಿ.ಎನ್ರಾಮು. ಲಕ್ಷ್ಮೀಪುತ್ರ, ನಂಜಮ್ಮ. ಭಾಗ್ಯಮ್ಮ, ಮಹಾದೇವಮ್ಮ, ಪಲ್ಟಿಕುಮಾರ್ ವಹಿಸಿದ್ದರು. ಜನಾಂಗದ ಮುಖಂಡರಾದ ದಸಂಸದ ನರಸಿಂಹಯ್ಯ. ಬಿಹೆಚ್ಗಂಗಾಧರ್, ನಗರಸಭೆ ಮಾಜಿ ಸದಸ್ಯರಾದ ನರಸೀಯಪ್ಪ. ಕಾಂಗ್ರೇಸ್ ಪಕ್ಷದ ಮುಖಂಡರಾದ ಕಿಶೋರ್, ಶೆಟ್ಟಾಳಯ್ಯ, ಬಿ.ಜೆ.ಪಿ ಪಕ್ಷದ ಮುಖಂಡರಾದ ರಾಜಣ್ಣ, ಬಿ,ಪಿ ಅಂಜನಮೂರ್ತಿ. ಗಂಗಾಧರ್, ಸುಶೀಲ್ಕುಮಾರ್. ಜೆಡಿಎಸ್ ಪಕ್ಷದ ಮುಖಂಡರಾದ ದೇವರಾಜಯ್ಯ.ದಲಿತ ನಾಯಕರಾದ ಪಿ.ಎನ್ರಾಮಯ್ಯ. ಬಂಡೆ ಕುಮಾರ.ಟಿ,ಸಿರಾಮಯ್ಯ. ರಂಜನ್, ಯುವ ಮುಖಂಡರುಗಳಾದ ಮಂಜುನಾಥ್, ದಯಾ, ಅಖಿಲೇಶ್, ಅನಂತ್ಕುಮಾರ್. ಮನೋಜ್. ಯೋಗಾನರಸಿಂಹ, ದಕ್ಷಿಣಮೂರ್ತಿ, ಮುಂತಾದವರು ಪಾಲ್ಗೊಂಡಿದ್ದರು.