ಮಧುಗಿರಿ :
ಪಟ್ಟಣದ ಇತಿಹಾಸ ಪ್ರಸಿದ್ಧ ದಂಡಿನ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಮಾ.23 ರಂದು ಮಾರಮ್ಮದೇವಿಯ ಬೆಳ್ಳಿ ಪಲ್ಲಕ್ಕಿ ಉತ್ಸವ ಹಾಗೂ ಮಾ.24 ರಂದು ಅಗ್ನಿಕುಂಡ ನಡೆಯುತ್ತದೆ ಎಂದು ಉಪವಿಭಾಗಾಧಿಕಾರಿ ಹಾಗೂ ದೇವಾಲಯದ ಆಡಳಿತಾಧಿಕಾರಿ ಸೋಮಪ್ಪ ಕಡಕೋಳ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಂಡಿನ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವ ಮಾ.15 ರಿಂದ 25 ರವರೆಗೂ ನಡೆಯುತ್ತದೆ. ಮಾರ್ಚ್ 15 ಮಂಗಳವಾರ ಜಾತ್ರೆ ಪ್ರಾರಂಭ, ಪಂಚ ಕಳಸ ಸ್ಥಾಪನೆ, 16 ಬುಧವಾರ ಗ್ರಾಮಸ್ಥರಿಂದ ಆರತಿ, 17 ಗುರುವಾರ ಗುಗ್ಗುರಿ ಗಾಡಿಗಳ ಸೇವೆ, 18 ಶುಕ್ರವಾರ ರಥೋತ್ಸವ, 19 ಶನಿವಾರ ಹಳ್ಳಿಕಾರ ರಿಂದ ಉಯ್ಯಾಲೋತ್ಸವ, 20 ರಂದು ಭಾನುವಾರ ಕುಂಚಿಟಿಗ ಒಕ್ಕಲಿಗರಿಂದ ಸಿಂಹವಾಹನ, 21 ಸೋಮವಾರ ಕುರುಬರ ಸಮುದಾಯ ವತಿಯಿಂದ ಚಂದ್ರಮಂಡಲ ವಾಹನ, 22 ಮಂಗಳವಾರ ಭಜಂತ್ರಿ ಅವರಿಂದ ನವಿಲು ವಾಹನ, 23 ಬುಧವಾರ ಬಂಡಾರ ಉತ್ಸವ ಮತ್ತು ಬೆಳ್ಳಿ ಪಲ್ಲಕ್ಕಿ, 24 ರಂದು ಅಗ್ನಿಕುಂಡ, 25 ರಂದು ಚಿನಕ ವಜ್ರ, ಕೆರೆಗಳಪಾಳ್ಯ, ಕವಾಡಿಗರ ಪಾಳ್ಯ ಗ್ರಾಮಸ್ಥರಿಂದ ಮಡಲಕ್ಕಿ ಸೇವೆ ಹಾಗೂ ದೇವಿಯನ್ನು ಗುಡಿ ತುಂಬಿಸಲಾಗುವುದು. ಸಾರ್ವಜನಿಕರು ಕೋವಿಡ್ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.