ತುಮಕೂರು :
ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯ ಆಗಮನದ ವೇಳೆ ತುಮಕೂರಿನ ಕಾಂಗ್ರೆಸ್ ನ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡರು ಸ್ವಾಗತಕ್ಕೆ ಆಗಮಿಸದಿರುವುದು ಹಲವು ಅನುಮಾನಕ್ಕೆಡೆಮಾಡಿಕೊಡುತ್ತಿದೆ.
ಕಳೆದ ಬಾರಿ ಟಿಕೆಟ್ ಕೈ ತಪ್ಪುವುದಕ್ಕೆ ರಾಹುಲ್ ಗಾಂಧಿರವರ ನಿರ್ದೇಶನ ಬಹುಮುಖ್ಯ ಎಂಬ ಮಾತು ಕೇಳಿಬಂದಿತ್ತು. ಕಾಂಗ್ರೆಸ್ನಲ್ಲಿ ಎಲ್ಲವೂ ಸರಿಯಿಲ್ಲವೆಂಬ ಸ್ಪಷ್ಟ ಸಂದೇಶವನ್ನ ರವಾನಿಸಲು ಮುದ್ದಹನುಮೇಗೌಡರ ಗೈರು ಹಾಜರಿ ಎತ್ತಿ ತೋರಿಸುತ್ತಿತ್ತು. ರಾಷ್ಟ್ರೀಯ ಪಕ್ಷದ ವರಿಷ್ಠ ರಾಹುಲ್ ಗಾಂಧಿರವರ ತುಮಕೂರು ಭೇಟಿಯ ಸಂದರ್ಭದಲ್ಲಿ ಮಾಜಿ ಸಂಸದ ಮುದ್ದಹನುಮೇಗೌಡರು ಸನಿಹದಲ್ಲಿರಬೇಕಿತ್ತು ಆದರೆ, ಅವರ ಗೈರು ಹಾಜರಿಗೆ ಮುದ್ದಹನುಮೇಗೌಡರ ಮುನಿಸೇ ಕಾರಣ ಎಂದು ಕಾಂಗ್ರೆಸ್ ಪಕ್ಷದ ಮುಖಂಡರು ಗುಸುಗುಡುತ್ತಿದ್ದರು. ಜಿಲ್ಲಾ ಕಾಂಗ್ರೆಸ್ನಲ್ಲಿ ಒಗ್ಗಟ್ಟಿಲ್ಲವೆಂಬ ಸ್ಪಷ್ಟ ಸಂದೇಶ ಈ ಭೇಟಿಯ ಸಂದರ್ಭದಲ್ಲಿ ಎದ್ದುಕಾಣುತ್ತಿತ್ತು.
(Visited 301 times, 1 visits today)