ತುಮಕೂರು
ನಗರಕ್ಕೆ ಆಗಮಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ರಾಜ್ಯ ಬಿಜೆಪಿ ನಾಯಕರು ಅದ್ಧೂರಿ ಸ್ವಾಗತ ಕೋರಿದರು. ತುಮಕೂರು ವಿವಿ ಆವರಣದ ಹೆಲಿಪ್ಯಾಡ್‍ಗೆ ಅಮಿತ್ ಶಾ ಬಂದಿಳಿಯುತ್ತಿದ್ದಂತೆ ಹೆಲಿಪ್ಯಾಡ್‍ನಿಂದ ಮಠದವರೆಗೂ ಅಮಿತ್ ಶಾ ಅವರ ಕಾರಿನ ಮೇಲೆ ರಸ್ತೆಯುದ್ದಕ್ಕೂ ಸಾಲುಗಟ್ಟಿ ನಿಂತಿದ್ದ ಸಾರ್ವಜನಿಕರು ಪುಷ್ಪಾರ್ಚನೆ ಮಾಡಿದರು. . ಅಮಿತ್ ಶಾ ಅವರೊಂದಿಗೆ ಪ್ರಹ್ಲಾದ್ ಜೋಶಿ ಕೂಡ ಆಗಮಿಸಿದ್ದರು.
ಅಮಿತ್ ಶಾ ಅವರ ಸ್ವಾಗತಕ್ಕೆ ವಿವಿಧ ಕಲಾ ತಂಡಗಳು ಮೆರುಗು ನೀಡಿದವು. ವಿಶ್ವವಿದ್ಯಾಲಯದ ಮುಂಭಾಗ ಕಹಳೆ, ವೀರಗಾಸೆ, ಡೊಳ್ಳುಕುಣಿತ, ಡ್ರಮ್ ಸೆಟ್ ಕಲಾವಿದರು ಸಾಂಸ್ಕøತಿಕ ವೈಭವದ ಮೂಲಕ ಅಮಿತ್ ಶಾ ಅವರನ್ನು ಅದ್ದೂರಿ ಯಾಗಿ ಬರಮಾಡಿಕೊಂಡರು. ಶ್ರೀ ಶಿವಕುಮಾರ ಸ್ವಾಮೀಜಿ ಅವರ ಗದ್ದುಗೆಯ ದರ್ಶನ ಪಡೆದು ಪೂಜೆ ಸಲ್ಲಿಸಿ ನಂತರ ತ್ರಿವಿಧ ದಾಸೋಹಿ, ಪರಮಪೂಜ್ಯ ಡಾ.ಶಿವಕುಮಾರ ಸ್ವಾಮೀಜಿ ಅವರ 115ನೇ ಜಯಂತ್ಯುತ್ಸವ ಪ್ರಯುಕ್ತ ಸಿದ್ಧಗಂಗಾ ಕ್ಷೇತ್ರದಲ್ಲಿ ಆಯೋಜಿಸುರುವ `ನಡೆದಾಡುವ ದೇವರ ಬಸವ ಭಾರತ’ ಕಾರ್ಯಕ್ರಮವನ್ನು ಅಮಿತ್ ಶಾ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಗೃಹ ಸಚಿವ ಅಮಿತ್ ಶಾ, ಜೀವನದಲ್ಲಿ ಮೂರು ಬಾರಿ ಸಿದ್ಧಗಂಗಾ ಮಠಕ್ಕೆ ಬಂದಿದ್ದೇನೆ, ಇಲ್ಲಿಂದ ಒಳ್ಳೆಯ ಸಂಸ್ಕಾರಯುತ ವಿಚಾರ ಗಳನ್ನೆ ಕೊಂಡೊಯ್ದಿದ್ದೇನೆ. ಇಲ್ಲಿಗೆ ಬಂದಾಗಲೆಲ್ಲ ಉತ್ಸಾಹ ಹೆಚ್ಚಿಸಿಕೊಂಡು ಹೋಗುತ್ತೇನೆ ಎಂದು ಹೇಳಿದರು. ದೇಶ ಸಂಸ್ಕೃತಿಯ ತವರೂರು, ಜ್ಯೋತಿರ್ಲಿಂಗಗಳು, ಪುರಾಣಗಳು ಇವೆ, ಪುಣ್ಯ ಸ್ಥಳಗಳು ಇವೆ ಆದರೆ ಶಿವಕುಮಾರ ಸ್ವಾಮೀಜಿಗಳು ತಮ್ಮ ಸೇವೆಯಿಂದ ಪುಣ್ಯಕ್ಷೇತ್ರವನ್ನು ಮಾಡಿದರು ಎಂದು ಹೇಳಿದರು.
ಅಟಲ್ ಜೀ ಇಲ್ಲಿಗೆ ಬಂದಾಗ ಉತ್ತರದಲ್ಲಿ ಗಂಗಾ ದಕ್ಷಿಣದಲ್ಲಿ ಸಿದ್ದಗಂಗಾ ಎಂದಿದ್ದರು. ಗಂಗಾದಲ್ಲಿ ಮುಳುಗಿದರೆ ಪಾಪ ಹೋಗುತ್ತದೆ, ಸಿದ್ಧಗಂಗೆಗೆ ಬಂದರೆ ಜನ್ಮಜನ್ಮಾಂತರದ ಪುಣ್ಯ ಜಾಗೃತವಾಗುತ್ತದೆ ಅದಕ್ಕಾಗಿಯೇ ಅಟಲ್ ಜೀ ಸಿದ್ದಗಂಗೆಗೆ ಪ್ರಾಶಸ್ತ್ಯ ನೀಡಿದ್ದರು. ಇಲ್ಲಿ ಅಂತಹ ಶಕ್ತಿ ಇದೆ, ಶಿವಕುಮಾರ ಸ್ವಾಮೀಜಿ ಅವರ ಕರ್ಮಸ್ಥಳ ಇದು ಎಂದರು. ಆಧುನಿಕ ಭಾರತದ ಬಸವಣ್ಣ. ಸಿದ್ದಗಂಗೆಯ ಡಾ. ಶಿವಕುಮಾರ ಸ್ವಾಮೀಜಿ ಅವರು ಹಾಕಿಕೊಟ್ಟ ಅನ್ನ, ಶಿಕ್ಷಣ, ಆಶ್ರಯದ ಮೂರು ತತ್ವಗಳಡಿಯಲ್ಲೇ ಪ್ರಧಾನಿ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಕಾರ್ಯ ನಿರ್ವಹಿಸುತ್ತಿದ್ದು, ಡಾ.ಶಿವಕುಮಾರ ಸ್ವಾಮೀಜಿಗಳ ಚೈತನ್ಯದ ಆತ್ಮ ಎಲ್ಲಿರುತ್ತದೆಯೋ ಅಲ್ಲಿ ಅಭಿವೃದ್ಧಿಯಾಗುತ್ತದೆ. 80 ವರ್ಷಗಳ ಕಾಲ ಮಠಾಧೀಶರಾಗಿ ಸಮಾಜಕ್ಕೆ ನೀಡಿರುವ ತತ್ವಗಳನ್ನು ನಾವೆಲ್ಲರೂ ಪಾಲಿಸುವ ಮೂಲಕ ಸಮಾಜದ ಅಭಿವೃದ್ಧಿಗೆ ಶ್ರಮಿಸೋಣ ಎಂದು ಕರೆ ನೀಡಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಯುಗಾದಿ ಶುಭ ಕೋರಿ ಭಾಷಣ ಆರಂಭಿಸಿದರು. ಶ್ರೀಗಳ ಗುರುವಂದನೆಗೆ ಅಮಿತ್ ಶಾ ಉಪಸ್ಥಿತಿ ಅರ್ಥಪೂರ್ಣವೆನ್ನುಸಿದ್ದು, ಡಾ. ಶಿವಕುಮಾರ ಸ್ವಾಮೀಜಿ ಅವರು ಭಕ್ತಿ ವಿರಕ್ತಿಯ ಪ್ರತಿರೂಪ ದಾನ್ಯವನ್ನು ಭಕ್ತರ ಮನೆಯಿಂದ ಬೇಡಿ ತಂದು ಮಕ್ಕಳನ್ನು ಪೆÇರೆಯುತ್ತಿದ್ದರು. ಅವರನ್ನು ಕಂಡಿರುವುದೇ ನಮ್ಮ ಪುಣ್ಯ. ದೇಶದ ಒಳಿತಿಗಾಗಿ ಮೋದಿ, ಅಮಿತ್ ಶಾ ನಡೆಯನ್ನು ನಾವೆಲ್ಲ ಬೆಂಬಲಿಸಬೇಕಿದೆ. ಕೃಷಿಕರಿಗೆ ಕಿಸಾನ್ ಸಮ್ಮಾನ್ ಯೋಜನೆ ಜಾರಿಗೆ ತಂದಿದ್ದಾರೆ. ಶ್ರೀಗಳ ಜೀವನ ಚರಿತ್ರೆಯನ್ನು ಪಠ್ಯಕ್ರಮಗಳಲ್ಲಿ ಅಳವಡಿಸಬೇಕೆಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು. ಸಂಸದ ಜಿ.ಎಸ್ ಬಸವರಾಜು, ಸಚಿವ ಮಾಧುಸ್ವಾಮಿ, ಶಾಸಕ ಜ್ಯೋತಿಗಣೇಶ್, ರಾಜೇಶ್ ಗೌಡ, ಮಸಾಲಾ ಜಯರಾಂ, ಮಾಜಿ ಶಾಸಕ ಸುರೇಶಗೌಡ, ಪರಮೇಶ್ವರ ಇದ್ದರು.