ತುಮಕೂರು:

ರಾಜ್ಯ ಸರಕಾರ ಮಹತ್ವದ ಬಿಸಿಯೂಟ ಯೋಜನೆಗೆ ಪೂಜ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರ ಹೆಸರಿಡುವುದಾಗಿ ಸಿ.ಎಂ ಬಸವರಾಜ ಬೊಮ್ಮಾಯಿ ಮಹತ್ವದ ಘೋಷಣೆ ಮಾಡಿದರು. ಶ್ರೀಗಳ ಹೆಸರು ಘೋಷಿಸಬೇಕೆಂದು ಮುಖ್ಯಮಂತ್ರಿಗಳಲ್ಲಿ ಪ್ರಾಸ್ತಾವಿಕ ಭಾಷಣದಲ್ಲಿ ಮನವಿ ಮಾಡಿದ ಗುರುವಂದನಾ ಸ್ವಾಗತ ಸಮಿತಿಯ ಅಧ್ಯಕ್ಷ ಬಿ. ವೈ. ವಿಜಯೇಂದ್ರ. ಈಗಾಗಲೇ ಶ್ರೀಗಳ ಪುಣ್ಯ ಸ್ಮರಣೆಯ ದಿನವನ್ನು ದಾಸೋಹ ದಿನವಾಗಿ ಘೋಷಿಸಿದ್ದು ಶ್ರೀಗಳ ಜನ್ಮದಿನದ ಸಂದರ್ಭದಲ್ಲಿ ಅವರ ಹೆಸರನ್ನು ಚಿರಸ್ಥಾಯಿಯಾಗಿಸಲು ಬಿಸಿಯೂಟದ ಯೋಜನೆಗೆ ಶ್ರೀಗಳ ಹೆಸರಿಡುವ ಸರಕಾರಿ ಆದೇಶವನ್ನು ಶೀಘ್ರವೇ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

(Visited 13 times, 1 visits today)