ತುಮಕೂರು:

      ಮಾನವ ಕುಲದ ಶ್ರೇಷ್ಠ ಮಾರ್ಗದರ್ಶಕ ಪ್ರವಾದಿ ಮಹಮದ್(ಸ) ಅವರ ಜೀವನ ಮತ್ತು ಸಂದೇಶಗಳನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಜಮಾಆತೆ-ಇಸ್ಲಾಮಿ ಹಿಂದ್ ರಾಜ್ಯದಾದ್ಯಂತ ನವೆಂಬರ್ 16ರಿಂದ 30ರ ತನಕ ಹಮ್ಮಿಕೊಂಡಿದ್ದ ಸೀರತ್ ಅಭಿಯಾನಕ್ಕೆ ಇತ್ತೀಚಗೆ ಹಿರೇಮಠದ ಡಾ.ಶ್ರೀ ಶಿವಾನಂದಶಿವಾಚಾರ್ಯ ಮಹಾಸ್ವಾಮೀಜಿ ಚಾಲನೆ ನೀಡಿದರು.

      ಪ್ರವಾದಿ ಮಹಮ್ಮದರ ಜೀವನ ಮತ್ತು ಸಂದೇಶಗಳಿರುವ ಪುಸ್ತಕಗಳನ್ನು ಸ್ವೀಕರಿಸುವ ಮೂಲಕ ಸೀರತ್ ಅಭಿಯಾನಕ್ಕೆ ಚಾಲನೆ ನೀಡಿದ ಹಿರೇಮಠ ಶ್ರೀಗಳು ಮಾತನಾಡಿ,ಇದೊಂದು ಉತ್ತಮ ಬೆಳವಣಿಗೆ, ಇದು ಧರ್ಮ, ಧರ್ಮಗಳ ನಡುವೆ ಇರುವ ಕಂದಕಗಳನ್ನು ತೊಡೆದು ಹಾಕಿ,ಎಲ್ಲರೂ ಸಹೋದರತೆಯಿಂದ ಬಾಳಲು ಸಹಕಾರಿಯಾಗಲಿದೆ.ಎಲ್ಲ ಧರ್ಮಗಳ ಲ್ಲಿಯೂ ಮೂಲಭೂತವಾದಿಗಳಿದ್ದಾರೆ.ದಾರ್ಶಾನಿಕರ ಸಂದೇಶಗಳನ್ನು ತಮ್ಮ ಸ್ವಾರ್ಥಕ್ಕೆ ತಕ್ಕಂತೆ ಅರ್ಥೈಸಿಕೊಂಡು ಮನುಷ್ಯ, ಮನುಷ್ಯರ ನಡುವೆ ಕಂದಕ ಸೃಷ್ಟಿ ಮಾಡುವ ಜನರಿದ್ದಾರೆ.ಇದರ ಬಗ್ಗೆ ಎಲ್ಲ ಧರ್ಮಗಳ ಪ್ರಜ್ಞಾವಂತ ಜನತೆ ಎಚ್ಚೆತ್ತು ಕೊಳ್ಳಬೇಕಿದೆ. ಧರ್ಮ ಗ್ರಂಥಗಳ ಅಪವ್ಯಾಖ್ಯಾನಕ್ಕೆ ಅವಕಾಶ ನೀಡದೆ, ಜನರಿಗೆ ಅಯಾಯ ಪ್ರಾದೇಶಿಕ ಭಾಷೆಗಳ ಮೂಲಕ ಧರ್ಮ ಗ್ರಂಥಗಳ ಸಾರಗಳನ್ನು ಅರ್ಥ ಮಾಡಿಸಿದ್ದೇ ಆದರೇ,ಹಲವು ಜಾತಿ, ಧರ್ಮ, ಭಾಷೆಗಳನ್ನು ಹೊಂದಿರುವ ಭಾರತ ದೇಶದಲ್ಲಿ ವಿವಿಧೆತೆಯಲ್ಲಿ ಏಕತೆ ಕಾಣಲು ಸಾಧ್ಯ ಎಂದು ಸ್ವಾಮೀಜಿ ನುಡಿದರು.

      ಈ ವೇಳೆ ಉದ್ಯಮಿ ಹಾಗೂ ಸಮಾಜ ಸೇವಕ ತಾಜುದ್ದೀನ್ ಷರೀಫ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಆಭಿಯಾನದ ಅಂಗವಾಗಿ ಜಮಾಆತೆ ಇಸ್ಲಾಮಿ ಹಿಂದ್ ವತಿಯಿಂದ ನಗರದ ವಿವಿಧ ಬಡಾವಣೆಗಳಿಗೆ ಭೇಟಿ ನೀಡಿ, ಪ್ರವಾದಿ ಮಹಮ್ಮದ್ ಅವರ ದಿವ್ಯ ಸಂದೇಶಗಳುಳ್ಳ ಕಿರು ಹೊತ್ತಿಗೆಯನ್ನು ಹಂಚುವುದರ ಜೊತೆಗೆ,ಪ್ರಜ್ಞಾರಿಂದ ಪ್ರವಚನ ಗಳನ್ನು ಏರ್ಪಡಿಸಿ, ಸೀರತ್ ಅಭಿಯಾನವನ್ನು ಯಶಸ್ವಿಗೊಳಿಸಲಾಯಿತು.

(Visited 25 times, 1 visits today)