ತುಮಕೂರು :
ದೇಶ ಕಂಡಂತಹ ಸಜ್ಜನ ರಾಜಕಾರಣಿ, ಪಕ್ಷದ
ನಿಷ್ಠಾವಂತ ನಾಯಕ, ಅಜಾತ ಶತ್ರು ಮಾನವೀಯ
ಮೌಲ್ಯಗಳುಳ್ಳ ಕರ್ನಾಟಕ ಸರ್ಕಾರದ ಮಾಜಿ
ಉಪ ಮುಖ್ಯಮಂತ್ರಿಗಳು, ಕೊರಟಗೆರೆ ಕ್ಷೇತ್ರದ
ಜನಪ್ರಿಯ ಅಭಿವೃದ್ಧಿ ಶಾಸಕರು, ಕೆ.ಪಿ.ಸಿ.ಸಿ. ಅಧ್ಯಕರ
ಅವಧಿಯಲ್ಲೇ ಅತೀ ಹೆಚ್ಚು ವರ್ಷಗಳ ಕಾಲ ಕಾಂಗ್ರೆಸ್
ಪಕ್ಷವನ್ನು ರಾಜ್ಯದಲ್ಲಿ ಮುನ್ನೆಡೆಸಿದವರು ರಾಷ್ಟ್ರೀಯ
ಕಾಂಗ್ರೆಸ್ ಪಕ್ಷದಲ್ಲಿ ಮತ್ತು ಹೈಕಮಾಂಡ್‍ನಲ್ಲಿ
ಹಲವು ಪ್ರಭಾವಿ ಹುದ್ದೆಗಳನ್ನು ಜವಾಬ್ದಾರಿಯಿಂದ
ಮತ್ತು ಸಮರ್ಥವಾಗಿ ನಿರ್ವಹಿಸಿದ ಕಲ್ಪತರು ನಾಡಿನ
ಜನರ ಆಶಾಕಿರಣ ಡಾ.ಜಿ.ಪರಮೇಶ್ವರ ರವರ
ಜೀವನದ “ಸವ್ಯಸಾಚಿ’’ ಗೌರವ ಗ್ರಂಥ ಬಿಡುಗಡೆ
ಸಮಾರಂಭವನ್ನು ಏಪ್ರಿಲ್.10ರ ಭಾನುವಾರದಂದು
ತುಮಕೂರಿನ ಸಿದ್ದಾರ್ಥ ವೈದ್ಯಕೀಯ ಕಾಲೇಜಿನ
ಆವರಣದಲ್ಲಿ ಸಾವಿರಾರು ಅಭಿಮಾನಿಗಳು, ಸ್ನೇಹಿತರು
ಮತ್ತು ಹಿರಿಯರೊಂದಿಗೆ ಬಿಡುಗಡೆಯಾಗುತ್ತಿದೆ.
ಡಾ.ಜಿ.ಪರಮೇಶ್ವರ್ ರವರು ಆಸ್ಟ್ರೇಲಿಯಾದ
ಹೆಸರಾಂತ ಅಡಿಲೈಡ್ ಕೃಷಿ ವಿಶ್ವವಿದ್ಯಾನಿಲಯದಲ್ಲಿ
ಪಿ.ಹೆಚ್.ಡಿ ಪದವಿಯನ್ನು ಮುಗಿಸಿಕೊಂಡು ಭಾರತಕ್ಕೆ
ಹಿಂದಿರುಗಿದಾಗ 1987 ರಲ್ಲಿ ಶಿಕ್ಷಣ ಭೀಷ್ಮರಾದ
ಶ್ರೀಯುತ.ಗಂಗಾಧರಯ್ಯ ರವರ ಆಹ್ವಾನದ ಮೇರೆಗೆ
ಸಿದ್ದಾರ್ಥ ವೈದ್ಯಕೀಯ ಸಂಸ್ಥೆಯ ಪ್ರಾರಂಭೋತ್ಸವಕ್ಕೆ
ಅಂದಿನ ಪ್ರಧಾನಿಗಳಾದ ರಾಜೀವ್‍ಗಾಂಧಿ ರವರು
ಆಗಮಿಸಿದ್ದರು. ಆ ಸಮಯದಲ್ಲಿ ರಾಜೀವ್ ಗಾಂಧಿ
ರವರು ಡಾ.ಜಿ.ಪರಮೇಶ್ವರ್ ರವರ ಪ್ರತಿಭೆಯನ್ನು
ಮತ್ತು ರಾಜಕೀಯ ತೇಜಸ್ಸನ್ನು ಗುರುತಿಸಿ ಅವರನ್ನು
ಪಕ್ಷಕ್ಕೆ ಬರಮಾಡಿ ಕೊಡುವಂತೆ ಗಂಗಾಧರಯ್ಯ
ನವರಿಗೆ ತಿಳಿಸಿದರು. ಆಗ ತಾನೆ ಉನ್ನತ ಶಿಕ್ಷಣ
ಮುಗಿಸಿದ್ದ ಡಾ.ಜಿ.ಪರಮೇಶ್ವರ್ ರವರಿಗೆ ತಂದೆಯವರ
ಮಾತಿಗೆ ಗೌರವ ನೀಡಿ ಒಲ್ಲದ ಮನಸ್ಸಿನಿಂದ ರಾಜ-
ಕೀಯ ಪ್ರವೇಶ ಪಡೆದರು. 1988 ರಲ್ಲಿ ಅವರನ್ನು
ಕೆ.ಪಿ.ಸಿ.ಸಿ. ಜಂಟಿ ಕಾರ್ಯದರ್ಶಿಯನ್ನಾಗಿ
ಹೈಕಮಾಂಡ್ ನೇಮಿಸಿತು. 1989 ರಲ್ಲಿ ದೆಹಲಿಯ
ಹೈಕಮಾಂಡ್ ನೇರವಾಗಿ ಡಾ.ಜಿ.ಪರಮೇಶ್ವರ್
ರವರಿಗೆ ಪ್ರಥಮ ಬಾರಿಗೆ ಮಧುಗಿರಿ ವಿಧಾನಸಭಾ
ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಮಾಡಿತು.
ಮೊದಲ ಚುನಾವಣೆಯಲ್ಲಿ ವಿಜೇತರಾಗಿ ಶಾಸಕರಾದ
ಡಾ.ಜಿ.ಪರಮೇಶ್ವರ್ ರವರು 1992 ರಲ್ಲಿ ರೇಷ್ಮೆ
ಖಾತೆ ಸಚಿವರಾಗಿ ಅಧಿಕಾರ ಪಡೆದು ಮಧುಗಿರಿಯಲ್ಲಿ
ರೇಷ್ಮೆಯ ನೂಲು ತೆಗೆಯುವ ಕಾರ್ಖಾನೆಯನ್ನು
ತೆಗೆದರು ಹಾಗೂ ಮಧುಗಿರಿ ಕ್ಷೇತ್ರದ ಸರ್ವಾಂಗೀಣ
ಅಭಿವೃದ್ಧಿಗೆ ಶ್ರಮಿಸಿದರು.
1994 ರ ವಿಧಾನ ಸಭಾ ಚುನಾವಣೆಯಲ್ಲಿ
ಬದಲಾದ ರಾಜಕೀಯ ಸನ್ನಿವೇಶ ಮತ್ತು
ಕುತಂತ್ರದಿಂದ ಕೇವಲ 800 ಮತಗಳ ಅಂತರದಲ್ಲಿ
ಪರಾಭವಗೊಂಡರು. ಆದರೂ ಸಕ್ರಿಯ ರಾಜಕಾರಣ
ಮತ್ತು ಪಕ್ಷದ ಕಾರ್ಯಗಳಲ್ಲಿ ತಮ್ಮ ಶ್ರಮವನ್ನು
ಮುಂದುವರೆಸಿದರು. ಇದರ ಫಲ 1999 ರಲ್ಲಿ
ನಡೆದ ವಿಧಾನಸಭಾ ಚುನಾವಣೆಯಲ್ಲಿ ಮಧುಗಿರಿ
ಕ್ಷೇತ್ರದಿಂದ ಇಡೀ ರಾಜ್ಯದಲ್ಲೇ ಅತೀ ಹೆಚ್ಚು ಮತಗಳ
ಅಂತರದಿಂದ ಜಯಗಳಿಸಿದ ಶಾಸಕರು ಎಂಬ
ಖ್ಯಾತಿಯನ್ನು ಪಡೆದರು. ಅಂದಿನ ಎಸ್.ಎಂ.ಕೃಷ್ಣ
ಸರ್ಕಾರದಲ್ಲಿ ಉನ್ನತ ಶಿಕ್ಷಣ, ವಾರ್ತಾ ಮತ್ತು
ಪ್ರಚಾರ ಇಲಾಖೆ, ವಿಜ್ಞಾನ ತಂತ್ರಜ್ಞಾನ, ಐ.ಟಿ.ಬಿ.ಟಿ.
ವೈದ್ಯಕೀಯ ಶಿಕ್ಷಣ ಖಾತೆಗಳನ್ನು ಯಶಸ್ವಿಯಾಗಿ
ನಿರ್ವಹಿಸಿ ತುಮಕೂರು ಜಿಲ್ಲಾ ಉತ್ಸುವಾರಿ ಸಚಿವರಾಗಿ
ಕಾರ್ಯನಿರ್ವಹಿಸಿದರು. ಆ ಸಂಧರ್ಭದಲ್ಲಿ ಮಧುಗಿ-
ರಿಯನ್ನು ಶೈಕ್ಷಣಿಕ ಜಿಲ್ಲೆಯನ್ನಾಗಿ ಮಾಡಿದರು. ಮಿನಿ
ವಿಧಾನಸೌಧ, ಡಿ.ಓ.ಎಸ್.ಪಿ.ಕಛೇರಿ, ಸೇರಿದಂತೆ
ವಿವಿಧ ಸೌಲಭ್ಯಗಳನ್ನು ಮಧುಗಿರಿಗೆ ಕೊಡುಗೆಯಾಗಿ
ನೀಡಿದರು. ಇಡೀ ದೇಶದಲ್ಲೇ ತುಮಕೂರು ಜಿಲ್ಲೆಗೆ
ಏಕೈಕ ವಿಶ್ವವಿದ್ಯಾನಿಲಯ ನೀಡಿದ ಹೆಗ್ಗಳಿಕೆಗೆ
ಪಾತ್ರರಾದರು. ಅತೀ ಮುಖ್ಯವಾಗಿ ಹೇಮಾವತಿ
ಕುಡಿಯುವ ನದಿ ನೀರಿನ ಯೋಜನೆಯನ್ನು ಜಾ-
ರಿಗೆ ತಂದ ಹೆಗ್ಗಳಿಕೆ ಡಾ.ಜಿ.ಪರಮೇಶ್ವರ್ಗೆ ಇದ್ದು
ಅಂದು ಮಧುಗಿರಿಯ ಸಿದ್ದಾಪುರ ಕೆರೆಗೆ ಹಾಗೂ
ಕೊರಟಗೆರೆ ಕ್ಷೇತ್ರದ 16 ಗ್ರಾಮ ಮತ್ತು ಅಗ್ರಹಾರದ
ಕೆರೆಗೆ ಡಿ.ಪಿ.ಆರ್ ಮಾಡಿಸಿ ಹೇಮಾವತಿ ನೀರನ್ನು ಹ-
ರಿಸಿದ ಭಗೀರಥ ಎಂಬ ಹೆಸರನ್ನು ಪಡೆದರು. ಪ್ರಥ
ಮವಾಗಿ ಸಿದ್ದಾಪುರ ಕೆರೆಗೆ ಹರಿದ ನೀರು ತದನಂತರ
ಕೊರಟಗೆರೆ ಅಗ್ರಹಾರಕ್ಕೆ ಹರಿಯಿತು.
2003 ರ ಚುನಾವಣೆಯಲ್ಲಿ ಪರಮೇಶ್ವರ್
ಜಯಗಳಿಸಿದರು ಪಕ್ಷವು ಅಧಿಕಾರಕ್ಕೆ
ಬರಲಿಲ್ಲ.ಬದಲಾದ ಕ್ಷೇತ್ರ ಪುನರ್ ವಿಂಗಡಣೆಯಲ್ಲಿ
ಕೊರಟಗೆರೆ ವಿಧಾನಸಭಾ ಕ್ಷೇತ್ರ ಪರಿಶಿಷ್ಟ ಜಾತಿಗೆ
ಮೀಸಲಿಡಲ್ಪಟ್ಟಿತು. ಇಲ್ಲಿನ ಕಾರ್ಯಕರ್ತರ
ಒತ್ತಾಯದ ಮೇರೆಗೆ ಡಾ.ಜಿ.ಪರಮೇಶ್ವರ್ 2008 ರಲ್ಲಿ
ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ವಿಜೇತರಾದರು.
ಅಭಿವೃದ್ಧಿ ಕೆಲಸಗಳಿಗೆ ಒತ್ತು ನೀಡಿದರು. ಆz-
Àರೆ ಅಂದಿನ ಕಾಂಗ್ರೆಸ್ ಪಕ್ಷದ ಪರಿಸ್ಥಿತಿ ರಾಜ್ಯದಲ್ಲಿ
ಮಂಕಾಗಿತ್ತು. 2010 ರಲ್ಲಿ ದೆಹಲಿಯ ಹೈಕಮಾಂಡ್
ಡಾ.ಜಿ.ಪರಮೇಶ್ವರ್ ರವರ ಮೇಲೆ ನಂಬಿಕೆ ಇಟ್ಟು
ಮಹತ್ತರ ಕೆ.ಪಿ.ಸಿ.ಸಿ. ಅಧ್ಯಕ್ಷರಾಗಿ ಜವಾಬ್ದಾರಿ ನೀಡಿತು.
ಸಂಕಷ್ಟದಲ್ಲಿರುವ ಪಕ್ಷವನ್ನು ಬಲಪಡಿಸಲು ಹಿರಿಯ
ನಾಯಕರ ಜೊತೆಗೂಡಿ ರಾಜ್ಯದ ಸುತ್ತಾಟದ ಕಡೆಗೆ
ಹೆಚ್ಚು ಗಮನ ನೀಡಿದರು ಹಾಗೂ ಶ್ರಮವಹಿಸಿದರು.
ಆ ಸಮಯದಲ್ಲೂ ಸಹ ಇಡೀ ರಾಜ್ಯದಲ್ಲೇ ಕೇಂದ್ರ
ಸರ್ಕಾರದಿಂದ 5 ಭಾಗಗಳಿಗೆ ಬಿಡುಗಡೆಯಾದ
16 ಕೋಟಿ ರೂಗಳ ಏಕಲವ್ಯ ವಸತಿ ಶಾಲೆಯನ್ನು
ಕೇಂದ್ರ ಮತ್ತು ರಾಜ್ಯಗಳ ಮನ ಒಲಿಸಿ ಕೊರಟಗೆರೆಯ
ಬಜ್ಜನಹಳ್ಳಿಯಲ್ಲಿ ಪ್ರಾರಂಭಿಸಿದರು. ಅದೇ ರೀತಿಯಾಗಿ
ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಮೊರಾರ್ಜಿ ವಸತಿ
ಶಾಲೆಗಳನ್ನು ಪ್ರಾರಂಭಿಸಿದರು.
ಆದರೆ ರಾಜ್ಯದಲ್ಲಿ ಪಕ್ಷವನ್ನು ಬಲಪಡಿಸುವ ಕಾರ್ಯಕ್ಕೆ
ಹೆಚ್ಚು ಒತ್ತು ನೀಡಿದ್ದರಿಂದ ಕ್ಷೇತ್ರದ ಕಡೆಗೆ ಗಮನ
ಹರಿಸಲು ಸಾಧ್ಯವಾಗಲಿಲ್ಲ. 2013 ರ ವಿಧಾನಸಭಾ
ಚುನಾವಣೆಯಲ್ಲಿ ಹಲವು ಕುತಂತ್ರಗಳ ನಡುವೆ
ಸೋಲನ್ನು ಕಂಡರು ಆದರೂ ಪಕ್ಷವನ್ನು ಹಲವು
ವರ್ಷಗಳ ಬಳಿಕ ಸಂಪೂರ್ಣ ಬಹುಮತದೊಂದಿಗೆ
ಅಧಿಕಾರಕ್ಕೆ ತಂದರು. ಇದನ್ನು ಅರಿತಿದ್ದ ಹೈಕಮಾಂಡ್
ಇವರನ್ನು ಕೆ.ಪಿ.ಸಿ.ಸಿ.ಅಧ್ಯಕ್ಷರನ್ನಾಗಿ ಮುಂದುವರೆಸಿ
ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿತು. ನಂತರ
ರಾಜ್ಯದ ಗೃಹಸಚಿವರಾಗಿ ಅಧಿಕಾರ ಸ್ವೀಕರಿಸಿದ
ಡಾ.ಜಿ.ಪರಮೇಶ್ವರ್ ಪೆÇೀಲೀಸ್ ಇಲಾಖೆಯಲ್ಲಿ
ಮಹತ್ತರ ಬದಲಾವಣೆಗಳನ್ನು ತರುವುದರೊಂದಿಗೆ
ಜನಸ್ನೇಹಿ ಪೆÇೀಲೀಸ್ ಎಂಬ ಕಾರ್ಯಕ್ರಮ
ನೀಡಿ ಜನರಿಗೂ ಮತ್ತು ಪೆÇೀಲೀಸರಿಗೂ ವಿಶ್ವಾಸ
ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಆ ಸಂರ್ಧರ್ಭದಲ್ಲಿ ಕೊರಟಗೆರೆ ತಾಲ್ಲೂಕಿನ
ತುಂಬುಗಾನಹಳ್ಳಿಯಲ್ಲಿ ಸುಮಾರು 500 ಕೋಟಿ
ರೂಗಳ ಬೃಹತ್ ಪೆÇೀಲೀಸ್ ತರಭೇತಿ ಕೇಂದ್ರವನ್ನು
ಸ್ಥಾಪಿಸಿ ಹಲವರಿಗೆ ನೌಕರಿಯನ್ನು ನೀಡಿದರು.
ಕೊರಟಗೆರೆ ವಿಧಾನಸಭಾ ಕ್ಷೇತ್ರದ ಕೋರಾ ಹೋಬಳಿಗೆ
ವಸಂತ ನರಸಾಪುರ ಕೈಗಾರಿಕಾ ಕೇಂದ್ರವನ್ನು
ಸ್ಥಾಪಿಸುವಲ್ಲಿ ಮಹತ್ತರ ಕಾರ್ಯ ನಿರ್ವಹಿಸಿ ಲಕ್ಷಾಂತರ
ನಿರುದ್ಯೋಗಿಗಳಿಗೆ ಉದ್ಯೋಗ ದೊರಕುವಂತೆ
ಮಾಡಿದರು. ಹಾಗೂ ಕೊರಟಗೆರೆ ವಿಧಾನಸಭಾ
ಕ್ಷೇತ್ರಕ್ಕೆ 4 ಸಾವಿರ ಆಶ್ರಯ ಯೋಜನೆಗಳನ್ನು ವಿಶೇಷ
ಅನುಧಾನದಲ್ಲಿ ಸೂರಿಲ್ಲದವರಿಗೆ ತಂದು ಬಡವ-
ರಿಗೆ ಆಶ್ರಯ ನೀಡಿದರು. ಹಾಗೂ ರಾಜ್ಯದ, ಜಿಲ್ಲೆಯ
ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಶ್ರಮವಹಿಸಿದರು.
2018ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ
ಜಯಗಳಿಸಿದ ಡಾ.ಜಿ.ಪರಮೇಶ್ವರ 2013
ಚುನಾವಣೆಯಲ್ಲಿ ಪಡೆದ ಮತಗಳಿಗಿಂತ ಹೆಚ್ಚುವರಿ
ಸುಮಾರು 30,000 ಮತಗಳನ್ನು ಪಡೆದಿದ್ದು
ವಿಶೇಷವಾಗಿತ್ತು, ಅಂದಿನ ಸಂಮಿಶ್ರ ಸರ್ಕಾರದಲ್ಲಿ
ಮಾಜಿ ಉಪಮುಖ್ಯಮಂತ್ರಿಗಳಾಗಿ ಆಧಿಕಾರ ಸ್ವೀಕರಿಸಿ
ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿಯರೊಂದಿಗೆ
ಜೊತೆಗೂಡಿ 15000 ಕೋಟಿ ರೈತರ ಸಾಲಾ ಮನ್ನಾ
ಮಾಡಿದರು ಬೆಂಗಳೂರುನಗರ ಮತ್ತು ರಾಜ್ಯದ
ಅಭಿವೃಧಿಗೆ ವಿಷೇಶ ಯೋಜನೆಗಳನ್ನು ರೂಪಿಸಿದರು.
ತುಮಕೂರು ನಗರ ಸ್ಮಾರ್ಟ್ ಸಿಟಿ ಚಾಲನೆ ನೀಡಿದರು,
ಕ್ರೀಡಾ ಮಂತ್ರಿಯು ಹೆಚ್ಚು ಇದ್ದಗ ತುಮಕೂರು ಮತ್ತು
ಕೊರಟಗೆರೆ ಕ್ರೀಡಾಂಗಣ ಆಭಿವೃಧಿ ಮತ್ತು ವಿಶೇಷ
ಸೌಲಭ್ಯಕ್ಕೆ ತಲಾ 30 ಮತ್ತು 16 ಕೋಟಿ ರೂಗಳನ್ನು
ಬಿಡುಗಡೆ ಗೊಳಿಸಿದರು.
ಬಯಲು ಸೀಮೆಯ ಜನರಿಗೆ ನೀರಾವರಿ ಯೋಜನೆ
ನೀಡಲು ಮಹತ್ತ ಎತ್ತಿನ ಹೋಳೆ ಯೋಜನೆ ತರುವಲ್ಲಿ
ಶ್ರಮವಹಿಸಿದರು. ಬದಲಾದ ಸರ್ಕಾರದಲ್ಲಿ ರೈತರಿಗೆ
ನ್ಯಾಯಯುತ ಪರಿಹಾರ ನೀಡುವಂತೆ ಹಾಗು ಸಂಮಿಶ್ರ
ಸರ್ಕಾರದಲ್ಲಿ ತಗೆದುಕೊಂಡಿದ ನಿರ್ಣಯವನ್ನು
ಮುಂದುವರೆಸುವಂತೆ ವಿಧಾನಸಭೆ ಕಲಾಪದಲ್ಲಿ ಅಬ್ಬ-
ರಿಸಿದರು. ಇದನ್ನು ಮನಗೊಂಡ ಕೊರಟಗೆರೆ ಕ್ಷೇತ್ರದ
ರೈತರು ಪೂಜ್ಯ ಹನುಮಂತಸ್ವಾಮಿಜಿಗಳ ಸಮ್ಮುಖದಲ್ಲಿ
ಸಾಧಕ ಬಯಲು ಸೀಮೆಯ ಜಲಗಾಂಧರ ಬಿರುನ್ನು
ನೀಡಿ ಗೌರವಿಸಿದರು. ಕೋವಿಡ್ ನಂತಹ ಭಯಾನಕ
ಪರಿಸ್ಥಿಯಲ್ಲಿ ಜಿವಕ್ಕೆ ಹೆದರಿ ಮನೆಯಲ್ಲಿ ಕೂರದೆ ಕ್ಷೇತ್ರ
ಎಲ್ಲಾ ಆಸ್ಪತ್ರೆಗಳಿಗೆ ಭೇಟಿ ನೀಡಿದರು.
ವೈದ್ಯರಿಗೆ, ಶುಶ್ರುಕಿಯರಿಗೆ, ಅಧಿಕಾರಿಗಳಿಗೆ,
ಅಂಗನವಾಡಿ, ಆಶಾಕಾರ್ಯಕರ್ತರಿಗೆ ಧೈರ್ಯ
ತುಂಬಿದರು, ಸ್ವಂತ ಖರ್ಚಿನಲ್ಲಿ ಆರೋಗ್ಯ ಕಿಟ್
ನೀಡಿದರು. ಜನರಿಗೆ ನಂಬಿಕೆ ಮೂಡಿಸಿದರು, ತಮ್ಮ
ಸಿದ್ದಾರ್ಥ ಸಂಸ್ಥೆಯಿಂದ ಕೊರಟಗೆರೆ ಕ್ಷೇತ್ರ ಸೇ-
ರಿದಂತೆ ವಿವಿಧ ಕೋವಿಡ್ ರೋಗಿಗಳ ತಪಾಸಣೆಗೆ
ವೈದ್ಯರನ್ನು ಮನೆಬಾಗಿಲಿಗೆ ಕಳುಹಿಸಿ ಉಚಿತ ಔಷದಿ
ಹಲವಾರು ಬಡವರಿಗೆ ಉಚಿತ ಚಿಕಿತ್ಸೆ ನೀಡಿ ರಾಜ್ಯಕ್ಕೆ
ಮಾದರಿಯಾದರು, ಕರೋನಾ ವಾರಿಯರ್ಸ್‍ರಿಗೆ
ಮತ್ತು ಕ್ಷೇತ್ರದ ಬಡವರಿಗೆ ಉಚಿತ ಆಹಾರವನ್ನು
ವಿತರಿಸಿದರು, ಡಾ.ಜಿ.ಪರಮೇಶ್ವರರವರು ಕೊರಟಗೆರೆ
ಕ್ಷೇತ್ರದ ಶಾಸಕರಾದಗಲಿಂದ ಇಲ್ಲಿಯವರೆಗೆ ಸುಮಾರು
2000 ಕೋಟಿಗೆ ಹೆಚ್ಚು ಆಭಿವೃಧಿ ಕೆಲಸಮಾಡಿರುವ
ಇರವ ಸವ್ಯಸಾಚಿ ಗೌರವ ಗಂಥ ಬಿಡುಗಡೆಗೆ
ತುಮಕೂರು ಸೇರಿದಂತೆ ರಾಜ್ಯದ ಎಲ್ಲ ಕಡೆಯಿಂದ
ಜನರು ಹಿರಿಯರು ಆಗಮಿಸುತ್ತಿದ್ದಾರೆ.

(Visited 22 times, 1 visits today)