ತುಮಕೂರು:
ಕೈಮಗ್ಗ ಮತ್ತು ಜವಳಿ ಇಲಾಖೆಯು ರೇಷ್ಮೆ, ಹತ್ತಿ ಮತ್ತು ಉಣ್ಣೆ ಕೈಮಗ್ಗ ಉತ್ಪಾದನೆಗಳ ಅಭಿವೃದ್ಧಿಗಾಗಿ ಕೈಮಗ್ಗ ನೇಯ್ಗೆ ವೃತ್ತಿಯಲ್ಲಿ ನೈಪುಣ್ಯತೆ, ಶ್ರೇಷ್ಠತೆ, ತಾಂತ್ರಿಕತೆ, ಉತ್ಕøಷ್ಟತೆಯ ಉತ್ಪನ್ನ ತಯಾರಿಸಿದ ಕೈಮಗ್ಗ ನೇಕಾರರಿಗೆ 2022-23ನೇ ಸಾಲಿನಲ್ಲಿ “ರಾಜ್ಯ ಮಟ್ಟದ ಪ್ರಶಸ್ತಿ” ನೀಡಲು ಅರ್ಜಿ ಆಹ್ವಾನಿಸಿದೆ. ಅರ್ಹರು ಕೈಮಗ್ಗ ಉತ್ಪಾದನೆಗಳ ಅಭಿವೃದ್ದಿಗಾಗಿ ಕೈಮಗ್ಗ ನೇಯ್ಗೆಯ ಅಸಾಧಾರಣ ಕೌಶಲ್ಯದಲ್ಲಿ ಸುಮಾರು ಕನಿಷ್ಠ 30 ವರ್ಷ ಮೇಲ್ಪಟ್ಟವರು ಮತ್ತು 10 ವರ್ಷಗಳ ಅನುಭವ ಹೊಂದಿರಬೇಕು. ಆಸಕ್ತರು ಸೀರೆ ಉತ್ಪನ್ನದ ಮಾದರಿ, ಬಣ್ಣದ ಛಾಯಾಚಿತ್ರ ಹಾಗೂ ವಿವಿಧ ಹಂತದ ವಿಡಿಯೋದೊಂದಿಗೆ ಅರ್ಜಿಯನ್ನು ಮೇ 5ರೊಳಗಾಗಿ ಉಪ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಪಂಚಾಯತ್, ತುಮಕೂರು. ಇವರಿಗೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0816-2275370ಯನ್ನು ಸಂಪರ್ಕಿಸಬೇಕೆಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪ ನಿರ್ದೇಶಕಿ ಡಿ. ಸುಮಲತಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
(Visited 14 times, 1 visits today)