ಗುಬ್ಬಿ:
ಸಮಾಜದಲ್ಲಿ ಶಾಂತಿ ಕದಡುವಂತಹ ಸ್ವಾಮಿಗಳನ್ನು ಸಮಾಜದಿಂದ ದೂರವಿಡುವುದು ಒಳಿತು ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.
ತಾಲ್ಲೂಕಿನ ನಿಟ್ಟೂರು ಗ್ರಾಮದ ಜೈನಿಗರ ಬಡಾವಣೆಯಲ್ಲಿ ಸುಮಾರು 24 ಲಕ್ಷ ರೂಗಳ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು ಕಾಳಿಸ್ವಾಮಿಯ ಬಗ್ಗೆ ಯಾವುದೇ ಮಾತನಾಡಿಲ್ಲ. ಯಾರು ಸಮಾಜದಲ್ಲಿ ಯಾರು ಅಶಾಂತಿ ಮೂಡಿಸುವ ಸ್ವಾಮಿಗಳ ಬಗ್ಗೆ ಮಾತನಾಡಿದ್ದೇನೆ. ಹೊರತು ಈ ಕಾಳಿಸ್ವಾಮಿ ಯಾವ ಕಾರಣಕ್ಕೋಸ್ಕರ ಹೇಳಿಕೆ ನೀಡಿದ್ದಾರೋ ಗೊತ್ತಾಗುತ್ತಿಲ್ಲ. ಮಠಾಧೀಶರು ಹಾಗೂ ಸ್ವಾಮಿಗಳ ಮಾತುಗಳಲ್ಲಿ ಹಿಡಿತವಿರಬೇಕು. ಯಾವುದೇ ಸ್ವಾಮಿಗಳನ್ನು ನೋಡಿದರೆ ಕಾಲು ಮುಟ್ಟಿ ನಮಸ್ಕರಿಸುವಂತಹ ಭಾವನೆಯನ್ನು ಸಾರ್ವಜನಿಕರಲ್ಲಿ ಮೂಡಿಸುವಂತಹ ಸ್ವಾಮಿಗಳು ಲಕ್ಷಾಂತರ ಭಕ್ತರ ಸೇವೆಯಲ್ಲಿ ಹಾಗೂ ಸಮಾಜವನ್ನು ತಿದ್ದುವಂತಹ ಸ್ವಾಮಿಗಳು ಇದ್ದಾರೆ. ಕಾಳಿಸ್ವಾಮಿ ತುಂಬಿದ ಕೊಡ ಅಲ್ಲ ಅರ್ದಬರ್ದ ನೀರು ತುಂಬದ ಕೊಡ ಅಗಾಗಿ ಸರಿಯಾಗಿ ನಿಲ್ಲಲ್ಲು ಸಾಧ್ಯವಾಗುತ್ತಿಲ್ಲ. ಎಂದು ತಿಳಿಸಿದರು.
ಸಮಾಜದಲ್ಲಿ ಹೊಡಕು ಮೂಡಿಸುವಂತಹ ಯಾವುದೇ ವ್ಯಕ್ತಿಯಾಗಲಿ ಆತನನ್ನು ಶಿಕ್ಷಿಸುವುದು ಅತ್ಯವಶ್ಯಕ ಎಮದು ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಗಳ ಬಳಿ ಹೇಳಿಕೆ ನೀಡಿರುವುದು ಕಟು ಸತ್ಯ. ಯಡಿಯೂರಪ್ಪನವರು ಎಲ್ಲಾ ಸಮಾಜದವರನ್ನು ತಕ್ಕೆಂಗೆ ತೆಗೆದುಕೊಂಡು ರಾಜ್ಯ ನೆಡೆಸಿದಂತಹ ರಾಜಕಾರಣಿ ಕೇವಲ ಬುರಡೆ ಸ್ವಾಮಿಗಳನ್ನು ದೂರವಿಟ್ಟು ಸಮಾಜದ ಎಲ್ಲಾ ವರ್ಗದವರನ್ನು ಎಲ್ಲಾ ಮಠಾಧೀಶರುಗಳನ್ನು ಸಮನಾಗಿ ಕಂಡಂತಹ ಬಿ.ಎಸ್.ಯಡಿಯೂರಪ್ಪನವರು ತಡವಾಗಿಯಾದರೂ ಸರ್ಕಾರವನ್ನು ಹೆಚ್ಚೆರಿಸಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಕರೋನ 4ನೇ ಅಲೆಯು ರಾಜ್ಯಕ್ಕೆ ಅಪ್ಪಳಿಸುತ್ತಿದ್ದು ಇದನ್ನು ಈಗಲೇ ಹೆಚ್ಚೆತ್ತುಕೊಳ್ಳುವುದು ಒಳಿತು ಎಂದ ಅವರು ಎರಡು ವರ್ಷಗಳಿಂದ ಯಾವುದೇ ಹಬ್ಬ, ಜಾತ್ರೆ, ಹರಿದಿನಗಳು ನಡೆಯದೇ ಇದ್ದು ಪ್ರತಿ ಗ್ರಾಮದಲ್ಲೂ ಹಬ್ಬಕ್ಕೆ, ಜಾತ್ರೆಗಳಿಗೆ ಯಾವುದೇ ಅಂತರ ಕಾಪಾಡದೇ ಸಾರ್ವಜನಿಕರು ಒಂದೆಡೆ ಸೇರುತ್ತಾ ಇರುವುದರಿಂದ ಕರೋನ ಅತಿ ಶ್ರೀಘ್ರದಲ್ಲೇ ಅವರಿಸುತ್ತದೆ ಎಂದು ಅಭಿಪ್ರಾಯಿಸಿದರು.
ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿರವರು ಪಕ್ಷ ಬಿಟ್ಟು ಹೋದವರನ್ನು ಮತ್ತೆ ಪಕ್ಷಕ್ಕೆ ಅಹ್ವಾನಿಸಿದರ ಅಭಿಪ್ರಾಯ ಕೇಳಿದಾಗ ಕುಮಾರಸ್ವಾಮಿರವರು ಹೇಳಿಕೆಗೆ ನಾನೇನು ಸ್ಪಂದಿಸುವುದಿಲ್ಲ. ನಾನು ಯಾವ ಕಾಲನ್ನೂ ಆಚೆ ತೆಗೆದಿಲ್ಲ. ನಾನು ಸ್ಥಿರವಾಗಿದ್ದೇನೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ನಿಟ್ಟೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಹಾಗೂ ಸದಸ್ಯರುಗಳು ಭಾಗವಹಿಸಿದ್ದರು.
(Visited 72 times, 1 visits today)