ಚಿಕ್ಕನಾಯಕನಹಳ್ಳಿ:
ಬಾಬು ಜಗಜೀವನ್ ರಾಮ್ ಹಾಗೂ ಅಂಬೇಡ್ಕರ್ ಅವರ ಜಯಂತಿ ಏಪ್ರಿಲ್ 23ರಂದು ನಡೆಯುವ ಕಾರ್ಯಕ್ರಮಕ್ಕೆ ಕನಿಷ್ಠ ಐದು ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಬೇಕು ಕಾರ್ಯಕ್ರಮದ ಬಗ್ಗೆ ತಾಲೂಕಿನಾದ್ಯಂತ ಹೆಚ್ಚು ಪ್ರಚಾರ ಮಾಡುವ ಮೂಲಕ ಸರ್ವ ಜನಾಂಗವನ್ನು ಈ ಜಯಂತಿಗೆ ಕರೆತರುವ ಪ್ರಯತ್ನ ಆಗಬೇಕು ಎಂದು ತಹಸಿಲ್ದಾರ್ ತೇಜಸ್ವಿನಿ ಹೇಳಿದರು
ಇಂದು ತಾಲೂಕು ಕಚೇರಿಯ ಸಭಾಂಗಣದಲ್ಲಿ ಬಾಬು ಜಗಜೀವನ್ ರಾಮ್ ಹಾಗೂ ಅಂಬೇಡ್ಕರ್ ಅವರ ಜಯಂತಿ ಆಚರಣೆಯ ಅಂಗವಾಗಿ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಏಪ್ರಿಲ್ 23ರಂದು ಶೆಟ್ಟಿಕೆರೆ ಹೋಬಳಿ ಜೆಸಿಪುರ ಗ್ರಾಮದಲ್ಲಿ ಜಯಂತೋತ್ಸವ ಆಚರಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು
ಅಂದು ನಡೆಯುವ ಸಭೆಗೆ ಕೇಂದ್ರ ಸಚಿವ ಶ್ರೀ ನಾರಾಯಣ ಸ್ವಾಮಿಯವರು ಸೇರಿದಂತೆ ಜಿಲ್ಲೆಯ ಶಾಸಕರುಗಳು ಸಚಿವರುಗಳು ಮತ್ತು ಸಮಾಜದ ಮುಖಂಡರುಗಳು ಇನ್ನೂ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲು ಪಟ್ಟಣದ ಪುರಸಭೆ ಹಾಗೂ ಹುಳಿಯಾರು ಪಟ್ಟಣ ಪಂಚಾಯಿತಿ ಎಲ್ಲ ಗ್ರಾಮ ಪಂಚಾಯಿತಿಗಳ ಮಟ್ಟದಲ್ಲಿ ಜನರನ್ನು ಕರೆತರುವ ಪ್ರಯತ್ನ ಆಗಬೇಕು ಎಂದರು.
ತಾಪಂ ಕಾರ್ಯನಿರ್ವಹಣಾಧಿಕಾರಿ ವಸಂತ್ ಕುಮಾರ್ ಮಾತನಾಡುತ್ತಾ ಪಂಚಾಯಿತಿ ಮಟ್ಟದಲ್ಲಿ ಇರುವ ವಾಹನಗಳ ಮೂಲಕ ಧ್ವನಿವರ್ಧಕದಲ್ಲಿ ಪ್ರಚಾರ ಮಾಡುವುದಿಲ್ಲದೆ ಸ್ಥಳೀಯ ಅಂಗನವಾಡಿ ಆಶಾ ಕಾರ್ಯಕರ್ತರು ಮೂಲಕ ಎಲ್ಲ ಜನಾಂಗದ ಮುಖಂಡರು ಗಳಿಗೂ ಈ ಸಮಾರಂಭದಲ್ಲಿ ಭಾಗವಹಿಸುವಂತೆ ಪ್ರೇರೇಪಿಸಬೇಕು ಇದಕ್ಕೆ ಬೇಕಾದ ಕ್ರಮವನ್ನು ಆಯಾ ಗ್ರಾಮ ಪಂಚಾಯಿತಿಗಳ ಮೂಲಕ ಅವಕಾಶ ಕಲ್ಪಿಸಿಕೊಡಲಾಗುವುದು ಎಂದರು. ಕಾರ್ಯಕ್ರಮದ ಚಿಕ್ಕನಾಯಕನಹಳ್ಳಿಯ ನೆಹರು ಹುತ್ತದಿಂದ ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಮ್ ಅವರ ಭಾವಚಿತ್ರವನ್ನು ತಾಲೂಕು ಕಚೇರಿ ವರೆಗೂ ಬೃಹತ್ ಮೆರವಣಿಗೆ ಮೂಲಕ ಕರೆತರಲಾಗುವುದು ಆನಂತರ ಜೆಸಿಪುರ ಗ್ರಾಮದಲ್ಲಿ 1:00 ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಈ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ಕಲಾತಂಡಗಳಿಗೆ ಗೌರವಧನ ಹಾಗೂ ಪ್ರಮಾಣ ಪತ್ರವನ್ನು ನೀಡಲಾಗುವುದು ವಿದ್ಯಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೆರವೇರಿಸಲು ತೀರ್ಮಾನಿಸಲಾಗಿದೆ ಎಂದರು.
ದಲಿತ ಸಂಘಟನೆಯ ಮುಖಂಡ ಬೇವನಹಳ್ಳಿ ಚನ್ನಬಸವಯ್ಯ ಮಾತನಾಡುತ್ತಾ ಅಸ್ಪೃಶ್ಯತೆ ಹೆಚ್ಚಿರುವ ಪಂಚಾಯಿತಿಗೆ ಇಂತಹ ಕಾರ್ಯಕ್ರಮ ನಡೆಯಬೇಕು ಎಂದು ಜೆಸಿಪುರ ಗ್ರಾಮಪಂಚಾಯಿತಿಯಲ್ಲಿ ಆಚರಿಸಲು ತೀರ್ಮಾನಿಸಲಾಗಿದೆ ಸಾರ್ವಜನಿಕರು ಎಲ್ಲರೂ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿ ಮಾಡುವಂತೆ ಮನವಿ ಮಾಡಿದರು.
ಸಮಾರಂಭದಲ್ಲಿ ಪುರಸಭಾ ಅಧ್ಯಕ್ಷೆ ಪುಷ್ಪ ಸಮಾಜ ಕಲ್ಯಾಣ ಅಧಿಕಾರಿ ತ್ರಿವೇಣಿ ಪುರಸಭಾ ಮುಖ್ಯಾಧಿಕಾರಿ ಶ್ರೀನಿವಾಸ್ ಪಶುಪಾಲನಾ ಅಧಿಕಾರಿ ನಾಗಭೂಷಣ್ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಾದ ಕೋಕಿಲ ಸಿದ್ದೇಶ್ ರವಿಕುಮಾರ್ ದಲಿತ ಮುಖಂಡರುಗಳಾದ ಗೋಣಿ ವಾಸಂತ್ ಜೆಸಿಪುರ ಗೋವಿಂದ ಕುಮಾರ್ ತುತ್ಯ ನಾಯಕ ಲಿಂಗದೇವರು ಚಿದಾನಂದ ಇನ್ನು ತಾಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

(Visited 1 times, 1 visits today)