ತುಮಕೂರು:
ಸಚಿವ ರೇವಣ್ಣ, ರಾವಣ ಇದ್ದ ಹಾಗೆ ಎಂದು ಮಾಜಿ ಶಾಸಕ ಬಿ.ಸುರೇಶ್‌ಗೌಡ ಹರಿಹಾಯ್ದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ರೇವಣ್ಣ ಜಿಲ್ಲೆಗೆ ಹರಿಯುತ್ತಿದ್ದ ಹೇಮಾವತಿ ನೀರನ್ನು ಏಕಾಏಕಿ ನಿಲ್ಲಿಸಿದ್ದಾರೆ. ಜಿಲ್ಲೆಯ ಪಾಲಿಗೆ ರೇವಣ್ಣ, ರಾವಣರಾಗಿದ್ದಾರೆ ಎಂದರು.
ಹೇಮಾವತಿ ಡ್ಯಾಮ್ ಪೂರ್ಣ ತುಂಬಿದ್ದರೂ ಜಿಲ್ಲೆಗೆ ನೀರು ಬಿಡುತ್ತಿಲ್ಲ. ಜಿಲ್ಲೆಯಲ್ಲಿ ಡಿಸಿಎಂ ಡಾ.ಜಿ.ಪರಮೇಶ್ವರ್ ಸೇರಿ ಮೂವರು ಸಚಿವರಿದ್ದಾರೆ. ಆದರೆ ನೀರು ತರುವಲ್ಲಿ ಮೂವರೂ ವಿಫಲರಾಗಿದ್ದಾರೆ. ಮೈತ್ರಿ ಸರಕಾರ ಬೀಳುವ ಭಯದಲ್ಲಿ ರೇವಣ್ಣರನ್ನು ಜಿಲ್ಲೆಯ ಸಚಿವರು ಏನು ಕೇಳುತ್ತಿಲ್ಲ ಎಂದು ಆರೋಪಿಸಿದರು.
ಕೇಂದ್ರ ಸರಕಾರ ವಿಫಲ:
ಕೇಂದ್ರ ಸಚಿವ ರಮೇಶ್ ಜಿಗಜಿಗಣಿ ಮಾಧ್ಯಮದವರೊಂದಿಗೆ ಮಾತನಾಡುವಾಗ, ಸರಿಯಾಗಿ ಯೋಜನೆಗಳನ್ನು ತಲುಪಿಸುವಲ್ಲಿ ನಮ್ಮ ಸರಕಾರ ವಿಫಲವಾಗಿದೆ ಎಂದು ಬಾಯಿತಪ್ಪಿ ನುಡಿದರು. ಇದರಿಂದ ಗಲಿಬಿಲಿಗೊಂಡ ಪಕ್ಕದ್ದಲೇ ಇದ್ದ ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿ, ರಾಜ್ಯ ಸರಕಾರ ವಿಫಲವಾಗಿದೆ ಎಂದು ಕೇಂದ್ರ ಸಚಿವರಿಗೆ ತಿಳಿಸಿದರು. ತಕ್ಷಣ ಎಚ್ಚೆತ್ತ ರಮೇಶ್ ಜಿಗಜಿಗಣಿ, ರಾಜ್ಯ ಸರಕಾರ ವಿಫಲವಾಗಿದೆ ಎಂದು ಹೇಳಿದರು.