ಚಿಕ್ಕನಾಯಕನಹಳ್ಳಿ
ನೆರೆ ರಾಜ್ಯಗಳ ತಕರಾರಿನಿಂದ ಆಗಿ ರಾಜ್ಯಕ್ಕೆ ನೀರಾವರಿ ಯೋಜನೆಯಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸಿ ರಾಜ್ಯದ ಉದ್ದಗಲಕ್ಕೂ ಈ ಯೋಜನೆಗಳ ಕಾಯಕಲ್ಪ ಕಲ್ಪಿಸಿ ರಾಜ್ಯದ ನದಿಗಳಲ್ಲಿ ನೀರಿನ ಸದ್ಬಳಕೆ ಮಾಡಿಕೊಂಡು ಜನತೆಗೆ ಜಲ ಶಾಮಲಾ ಸಸ್ಯ ಶ್ಯಾಮಲಾವಾಗಿಸಲು ಜಾತ್ಯತೀತ ಜನತಾದಳ ಸನ್ನದ್ಧವಾಗಿದೆ ಎಂದು ಮಾಜಿ ಶಾಸಕ ಸುರೇಶ್ ಬಾಬು ಹೇಳಿದರು
ಅವರು ಪಟ್ಟಣದ ಅವರ ನಿವಾಸದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತ್ತಾ ಏಪ್ರಿಲ್ 21ರಂದು ಸನ್ಮಾನ್ಯ ಮಾಜಿ ಪ್ರಧಾನಿ ದೇವೇಗೌಡರು ಖಾಸಗಿ ಕಾರ್ಯಕ್ರಮವೊಂದಕ್ಕೆ ಆಗಮಿಸುತ್ತಿದ್ದಾರೆ ಅವರ ಅಭಿಮಾನಿಗಳು ಭೇಟಿ ಮಾಡುವ ಅವಕಾಶವಿದೆ ಅಲ್ಲದೆ 22 ಶುಕ್ರವಾರ ಜಾತ್ಯತೀತ ಜನತಾದಳದ ವತಿಯಿಂದ ಜನತಾ ಜಲದಾರೆ ಎಂಬ ಕಾರ್ಯಕ್ರಮವು ಪವಿತ್ರ ಕ್ಷೇತ್ರ ತೀರ್ಥರಾಮೇಶ್ವರ ವಜ್ರ ದಲ್ಲಿ ಗಂಗಾಜಲವನ್ನು ಹೊತ್ತು ತಾಲೂಕಿನಾದ್ಯಂತ ಪ್ರಚಾರ ಮಾಡುವ ರಥ ಯಾತ್ರೆ ಸಾಗಲಿದೆ ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಕಾರ್ಯಕರ್ತರು ಪ್ರತಿ ರಥಯಾತ್ರೆಯು ಆರಂಭಗೊಂಡು ಆಯಾ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕಾರ್ಯಕರ್ತರು ಪರಿಪೂರ್ಣವಾಗಿ ಪಾಲ್ಗೊಳ್ಳುವ ಮೂಲಕ ರಥಯಾತ್ರೆಯ ಸದುದ್ದೇಶ ಜನರ ಆಶೋತ್ತರಗಳಿಗೆ ಜೆಡಿಎಸ್ ಪರವಾಗಿ ರಾಜ್ಯದ ಧ್ವನಿಯಾಗಲಿ ಇದೆ ಎಂಬುದು ಜನರಿಗೆ ತಲುಪಿಸುವ ಕಾರ್ಯ ಆಗಬೇಕಿದೆ
ತಾಲೂಕಿಗೆ ಹೇಮಾವತಿ ನೀರು ಹರಿಯದಂತೆ ಆರು ವರ್ಷಗಳ ಕಾಲ ತಡೆಹಿಡಿದದ್ದು ಈಗಿನ ಸಚಿವರ ಸಾಧನೆಯಾಗಿದೆ ನಮ್ಮ ಅವಧಿಯಲ್ಲಿ ಮಂಜೂರಾದ ಕಾರ್ಯಕ್ರಮಗಳು ನಡೆದಿದ್ದು ನಾವು ರೈತರು ಬಗರ್ ಸಾಗುವಳಿ ಗಾರರಾದ 770 ಮಂದಿಗೆ ಸಾಗುವಳಿ ಚೀಟಿ ನೀಡಿದ್ದೆವು ಆದರೆ ಕಳೆದ ನಾಲ್ಕು ವರ್ಷಗಳಿಂದ ಕೇವಲ ಈಗಿರುವ ಸಚಿವರು 20 ಮಂದಿಗೆ ಮಾತ್ರ ಸಾಗುವಳಿ ಚೀಟಿ ನೀಡಿದ್ದಾರೆ ಇದನ್ನು ನೋಡಿದರೆ ಇವರ ಸಾಧನೆ ಜನಪರವಾಗಿ ಶೂನ್ಯ ಎಂಬುದು ಕಾಣುತ್ತದೆ ಎಂದರು
ತರಬೇನಹಳ್ಳಿ ಷಡಾಕ್ಷರಿ ಮಾತನಾಡುತ್ತಾ ಕಾಂಗ್ರೆಸ್ ಪಕ್ಷ ಹಾಗೂ ಬಿಜೆಪಿ ಪಕ್ಷ ಈ ಎರಡು ಪಕ್ಷಗಳು ಜನರ ವಿರೋಧಿ ಪಕ್ಷವಾಗಿದೆ ಪ್ರಾದೇಶಿಕ ಸಮಸ್ಯೆಗಳಿಗೆ ಸ್ಥಳೀಯವಾಗಿ ನ್ಯಾಯ ಒದಗಿಸುವ ಪಕ್ಷ ಅಂತ ಇದ್ದರೆ ಅದು ಜೆಡಿಎಸ್ ಪಕ್ಷ ಜನರಿಗೆ ಹತ್ತಿರವಾಗಿ ಪ್ರಾಮಾಣಿಕವಾಗಿ ದುಡಿದ ಪಕ್ಷ ಜನತಾ ದಳ ಈ ಪಕ್ಷದ ಸಾಧನೆಗಳು ಜನರಲ್ಲಿ ಮುಟ್ಟಿಸುವಲ್ಲಿ ಕಾರ್ಯಕರ್ತರು ಹಿಂದೆ ಬಿದ್ದಿದ್ದಾರೆ ರೈತರ ಸಾಲ ಮನ್ನಾ ವಿರಬಹುದು ನೀರಾವರಿ ವಿಚಾರ ಇರಬಹುದು ಗಡಿ ವಿಚಾರ ಇರಬಹುದು ಎಲ್ಲಾ ವಿಚಾರಗಳಲ್ಲಿಯೂ ಜೆಡಿಎಸ್ ಪಕ್ಷ ನೆಲ-ಜಲದ ಬಗ್ಗೆ ಸಾಕಷ್ಟು ಶಕ್ತಿ ತುಂಬುವ ಮೂಲಕ ರಾಜ್ಯದ ಜನರ ಧ್ವನಿಯಾಗಿ ಕೆಲಸ ಮಾಡಿದೆ ಈ ವಿಷಯ ಜನರಿಗೆ ಮುಟ್ಟಿಸುವಲ್ಲಿ ಹಿಂದೆ ಬಿದ್ದಿದೆ ಮುಂದಿನ ದಿನಗಳಲ್ಲಿ ಜೆಡಿಎಸ್ ಪಕ್ಷದ ನೆಲಗಟ್ಟಿನ ಮೇಲೆ ಕಾರ್ಯಕರ್ತರು ಪ್ರಾಮಾಣಿಕವಾಗಿ ದುಡಿದರೆ ಪಕ್ಷವು ಸ್ವತಂತ್ರವಾಗಿ ರಾಜ್ಯದ ಅಧಿಕಾರ ಗದ್ದುಗೆ ಏರುವುದರಲ್ಲಿ ಅನುಮಾನವಿಲ್ಲ ಎಂದರು
ಜಿಪಂನ ಮಾಜಿ ಸ್ಥಾಯಿಸಮಿತಿ ಅಧ್ಯಕ್ಷ ಕಲ್ಲೇಶ್ ಮಾತನಾಡುತ್ತ ಜೆಡಿಎಸ್ ಪಕ್ಷದ ಕಾರ್ಯಕ್ರಮವು ರೈತರ ಮನೆ ಬಾಗಿಲಿಗೆ ತಲುಪುವಂತೆ ಕಾರ್ಯಕರ್ತರು ಕೆಲಸ ಮಾಡಬೇಕಿದೆ ಮೂಲಕ ರಾಜ್ಯದಾದ್ಯಂತ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ಪೂರ್ಣಪ್ರಮಾಣದಲ್ಲಿ ಬರುವಂತೆ ಬೇರ್ಪಡಿಸಿದರೆ ಪ್ರಾದೇಶಿಕ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಬಲಿಷ್ಠ ರಾಜ್ಯ ವಾಗುತ್ತದೆ ಎಂದರು
ಜೆಡಿಎಸ್ ಪಕ್ಷದ ಮುಖಂಡ ಕೃಷ್ಣಪ್ಪ ಮಾತನಾಡುತ್ತಾ ಜಲಜೀವನ್ ರಥಯಾತ್ರೆ ತಾಲೂಕಿನಾದ್ಯಂತ ಸಂಚರಿಸುವಾಗ ಪ್ರತಿಯೊಬ್ಬ ರೈತನು ರಥಯಾತ್ರೆಗೆ ಶಕ್ತಿ ತುಂಬುವ ಮೂಲಕ ರಾಜ್ಯದಲ್ಲಿ ಹಸಿರುಕ್ರಾಂತಿಗೆ ಪೂರಕವಾಗುವಂತೆ ಸಹಕರಿಸಬೇಕು ಎಂದು ಮನವಿ ಮಾಡಿದರು
ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ರಾಮಚಂದ್ರಯ್ಯ ಪುರಸಭಾ ಉಪಾಧ್ಯಕ್ಷೆ ಪೂರ್ಣಿಮಾ ಸುಬ್ರಮಣ್ಯ ತಾಪಂ ಮಾಜಿ ಅಧ್ಯಕ್ಷ ಹೊನ್ನಮ್ಮ ಶೇಷಯ್ಯ ಹುಳಿಯಾರ್ ಕುಮಾರ್ ದಬ್ಬಗುಂಟೆ ರವಿಯಣ್ಣ ಗಣೇಶಪ್ಪ ಮಾಜಿ ಪುರಸಭಾಧ್ಯಕ್ಷರಾದ ಮಹಮ್ಮದ್ ಖಲಂದರ್ ಸಿಬಿ ರೇಣುಕಸ್ವಾಮಿ ಎಂ ಎನ್ ಸುರೇಶ್ ದೊರೆ ಮುದ್ದಯ್ಯ ದೊಡ್ಡಯ್ಯ ಟಿಂಬರ್ ಮಲ್ಲೇಶ್ ಶೇಖರ್ ಹಿಂದುಳಿದ ವರ್ಗದ ಮುಖಂಡ ಹನುಮಂತಪ್ಪ ಸಣ್ಣಯ್ಯ ಗ್ರಾಮ ಪಂಚಾಯತಿಯ ಅಧ್ಯಕ್ಷರುಗಳು ಸದಸ್ಯರುಗಳು ಭಾಗವಹಿಸಿದ್ದರು.
(Visited 2 times, 1 visits today)