ತುಮಕೂರು:
ಭಾರತಕ್ಕೆ ಮೊಘಲರು ಮತ್ತು ಬ್ರಿಟಿಷರು ಬರುವ ಮುಂಚೆ ದೇಶದ ಜಿಡಿಪಿಗೆ ಶೇ49ರಷ್ಟು ಕೊಡುಗೆ ನೀಡುತಿದ್ದ ಭಾರತೀಯ ಅರ್ಥಿಕತೆ, ಭಾರತದ ಸಂಪತ್ತನ್ನು ಮುಸ್ಲಿಂ ರಾಷ್ಟ್ರಗಳು ಮತ್ತು ಯುರೋಪಿಯನ್ ರಾಷ್ಟ್ರಗಳು ಕಬಳಿಸಿದ ಪರಿಣಾಮ ಇಂದು ಶೇ4 ರಷ್ಟು ಮಾತ್ರ ಜಿಡಿಪಿ ನೀಡಲು ಸಾಧ್ಯವಾಗಿದೆ ಎಂದು ವಿಶ್ವ ಹಿಂದು ಪರಿಷತ್‍ನ ರಾಷ್ಟ್ರ ಜಂಟಿ ಕಾರ್ಯದರ್ಶಿ ಹಾಗೂ ಹಿಂದು ಅರ್ಥಿಕ ವೇದಿಕೆ ಶ್ರೀಶ್ರೀವಿಜ್ಞಾನಾನಂದ ಸ್ವಾಮೀಜಿ ತಿಳಿಸಿದ್ದಾರೆ.
ನಗರದ ಸಿದ್ದಗಂಗಾ ಆಸ್ಪತ್ರೆಯ ಸಭಾಂಗಣದಲ್ಲಿ ಆಯೋಜಿಸಿದ್ದ ಹಿಂದೂ ಅರ್ಥಿಕ ವೇದಿಕೆಯ ತುಮಕೂರು ಘಟಕಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು,ಹಿಂದೂ ಪರ ವ್ಯಾಪಾರಸ್ಥರನ್ನು ಒಗ್ಗೂಡಿಸಿ, ಅವರಿಗೆ ಇಂದಿನ ಭಾರತ ಆರ್ಥಿಕ ದುಸ್ಥಿತಿಗೆ ಕಾರಣಗಳೇನು, ಅವುಗಳನ್ನು ಹೇಗೆ ಮೆಟ್ಟಿನಿಂತು, 15ನೇ ಶತಮಾನದ ಅರ್ಥಿಕ ಗತವೈಭವವನ್ನು ಭಾರತದಲ್ಲಿ ಸ್ಥಾಪಿಸುವುದೇ ಹಿಂದೂ ಅರ್ಥಿಕ ವೇದಿಕೆ ಹುಟ್ಟು ಹಾಕುವುದೇ 2009ರಲ್ಲಿ ಸ್ಥಾಪನೆಗೊಂಡ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ ಎಂದರು.
ವಿಶ್ವದ ಶೇ2 ರಷ್ಟು ಜನಸಂಖ್ಯೆಯನ್ನು ಹೊಂದಿರುವ ಅಮೇರಿಕಾ ದೇಶ ಶೇ20ರಷ್ಟು ಆದಾಯವನ್ನು ಹೊಂದಿದೆ.ಚೀನಿ ಆರ್ಥಿಕ ಫೋರಂ ನಡೆಸಿದ 30 ವರ್ಷಗಳ ಸತತ ಹೋರಾಟದ ಪರವಾಗಿ ಇಂದು ವಿಶ್ವದ ನಂಬರ್ ಒನ್ ಅರ್ಥಿಕ ದೇಶವಾಗಿದೆ. ಆ ನಿಟ್ಟಿನಲ್ಲಿ ಭಾರತೀಯ ಯುವಕರು, ಹಿರಿಯರ ಮಾರ್ಗದರ್ಶನದಲ್ಲಿ ವಿಶ್ವದ ದೊಡ್ಡ ಮಾರುಕಟ್ಟೆಯಾಗಿರುವ ಭಾರತ ಮತ್ತು ಚೀನಾ ಆರ್ಥಿಕ ಮಾರುಕಟ್ಟೆಗೆ ಲಗ್ಗೆ ಹಾಕುವ ಶಪಥ ಮಾಡಬೇಕಾಗಿದೆ ಎಂದು ಶ್ರೀವಿಜ್ಞಾನಾನಂದಸ್ವಾಮೀಜಿ ತಿಳಿಸಿದರು.ಭಾರತದ ಯುವಜನತೆ, ತಮಗೆ ಲಭ್ಯವಿರುವ ಸಿಮೀತ ಬಂಡವಾಳದಲ್ಲಿಯೇ, ಲಭ್ಯವಿರುವ ಮಾನವ ಸಂಪನ್ಮೂಲ, ತಂತ್ರಜ್ಞಾನ ಬಳಸಿಕೊಂಡು ಉದ್ಯಮಿಯಾಗಿ ತಾವು ಬೆಳೆಯುವುದರ ಜೊತೆಗೆ, ಹಿಂದೂ ಉದ್ದಿಮೆದಾರರನ್ನು ಬೆಳೆಸಬೇಕಾಗಿದೆ. ಈ ನಿಟ್ಟಿನಲ್ಲಿ 2009 ರಿಂದಲೂ ಹಿಂದೂ ಅರ್ಥಿಕ ವೇದಿಕೆ ಶ್ರಮಿಸುತ್ತಾ ಬಂದಿದೆ.
ಪ್ರಾದೇಶಿಕವಾರು ಇರುವ ಬೇರೆ ಸಮುದಾಯಗಳ ಅರ್ಥಿಕ ವ್ಯವಸ್ಥೆಯನ್ನು ಛಿದ್ರಗೊಳಿಸಿ, ಆಖಂಡ ಭಾರತ ಇಡೀ ಪ್ರಪಂಚದಲ್ಲಿಯೇ ಶಕ್ತಿ ಶಾಲಿ ಆರ್ಥಿಕ ವ್ಯವಸ್ಥೆಯಾಗಿ ರೂಪಿಸಬೇಕೆಂದು ಕರೆ ನೀಡಿದರು. ಎನ್.ಎಸ್.ಉದ್ದಿಮೆದಾರರ ಕುಟುಂಬದ ಎನ್.ಎಸ್,ನಾಗೇಂದ್ರ ಪ್ರಸಾದ್,ಭಾರತದಲ್ಲಿ ವಿ.ಹೆಚ್.ಬಿ.ಹುಟ್ಟುವವರೆಗೂ ನಾವು ಹಿಂದು ಉದ್ದಿಮೆದಾರರು ಎಂದು ಹೇಳಿಕೊಳ್ಳಲು ಹಿಂಜರಿಕೆ ಪಡುವ ಕಾಲವಿತ್ತು. ಆದರೆ ಕಾಲ ಬದಲಾಗಿದೆ. ದೈರ್ಯವಾಗಿ ವ್ಯಾಪಾರ ವಹಿವಾಟು ಮುಂದುವರೆಸಬಹುದಾಗಿದೆ ಎಂದರು.
ಹಿಂದೂ ಆರ್ಥಿಕ ವೇದಿಕೆಯ ತುಮಕೂರು ಜಿಲ್ಲಾ ಘಟಕದ ಪದಾಧಿಕಾರಿಗಳನ್ನು ಘೋಷಿಸಲಾಯಿತು.
ಅಧ್ಯಕ್ಷರಾಗಿ ವಿಶ್ವನಾಥ್,ಉಪಾಧ್ಯಕ್ಷರಾಗಿ ಸುರಭಿ ಫಣೀಂದ್ರ,ಪ್ರಧಾನ ಕಾರ್ಯದರ್ಶಿಯಾಗಿ ಟಿ.ಎಸ್.ವಿಶ್ವನಾಥ್, ಜಂಟಿ ಕಾರ್ಯದರ್ಶಿ ಯಾಗಿ ಚಾರ್ಟೆಡ್ ಅಕೌಂಟೆಂಟ್ ವಿಜಯಲಕ್ಷ್ಮಿ ಬಿ.ವಿ.ಡಾ.ನೀಲಕಂಠ, ರುದ್ರಾರಾಧ್ಯ, ಹೆಚ್.ಎನ್.ಚಂದ್ರಶೇಖರ್, ನೇತ್ರಾ ರಾಜಕುಮಾರ್, ಅರ್ಜುನ್ ಪಾಳ್ಳೇಗಾರ್, ಮತ್ತಿತರರು ಆಯ್ಕೆಯಾಗಿದ್ದಾರೆ.
(Visited 1 times, 1 visits today)