ದಾವಣಗೆರೆ :
‘ಕೆಲಸ ಮಾಡುವವರನ್ನು ಜನರು ಮರೆತಿದ್ದಾರೆ. ಜನರಿಗೆ ಸೇವೆ ಮಾಡಿದ ನನ್ನನ್ನು ಸಹ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿಸಿದರು’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.
ಎಂ.ಪಿ. ರವೀಂದ್ರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರುm ಜನ ಯಾವುದಕ್ಕೆ ವೋಟ್ ಕೊಡ್ತಾರೆ ಎಂದು ನನಗೆ ಅರ್ಥವಾಗುತ್ತಿಲ್ಲ. ಜನ ನನ್ನನ್ನ ಚಾಮುಂಡಿ ಕ್ಷೇತ್ರದಲ್ಲಿ ಸೋಲಿಸಿದ್ರು. ನನ್ನ ಅದೃಷ್ಟ ಬದಾಮಿ ಕೈ ಹಿಡಿಯಿತು. ಚುಣಾವಣೆಯ ಮುಂಚೆ ಎಲ್ಲಾ ಚೆನ್ನಾಗಿತ್ತು. ಆದ್ರೆ ಚುನಾವಣೆ ಫಲಿತಾಂಶ ಬಂದಾಗ ದಿಗ್ಭ್ರಮೆ ಆಯಿತು ಅಂತಾ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮುಂಡಿ ಕ್ಷೇತ್ರದಲ್ಲಿ ತಮಗಾದ ಸೋಲಿನ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡರು.
ರವೀಂದ್ರ ಇನ್ನೂ ಇದ್ದಿದ್ರೆ ಅವರ ತಂದೆ ಎಂ.ಪಿ. ಪ್ರಕಾಶ್ ಸರಿಸಮನಾಗಿ ಬೆಳೆಯುತ್ತಿದ್ರು. ಹರಪನಹಳ್ಳಿಯನ್ನು 371 J ಗೆ ಸೇರಿಸಲು ಒತ್ತಾಯಿಸಿದ್ರು. ದಾವಣಗೆರೆ ಜಿಲ್ಲೆಯಿಂದ ಹರಪನಹಳ್ಳಿ ಬಿಡುಗಡೆಯಾಗುತ್ತೆ. ಬಿಡುಗಡೆ ಹೊಂದಿ ಬಳ್ಳಾರಿಗೆ ಸೇರ್ಪಡೆಯಾಗತ್ತೆ. ಇನ್ನು ಅಧಿಕೃತವಾಗಿ ಆದೇಶ ಹೊರಡಿಸಬೇಕಾಗಿದೆ ಅಷ್ಟೇ. ಉಪಕಂದಾಯ ವಿಭಾಗ ಕೂಡ ಹರಪನಹಳ್ಳಿಯಲ್ಲಿಯೇ ಮುಂದುವರೆಸಲಾಗುವುದು. ಇದಕ್ಕೆ ಸರಕಾರ ಆದೇಶ ಕೂಡ ಮಾಡಿದೆ ಎಂದು ಅವರು ತಿಳಿಸಿದರು.