ಗುಬ್ಬಿ:
ಜೆಡಿಎಸ್ ನಿಂದ ಯಾರು ನನ್ನನ್ನು ಕಳುಹಿಸಿರುವವರು ನಾನೇನು ಹೋಗಿದ್ದೀನಾ ನಾನು ಜನತಾ ದಳದಲ್ಲೇ ಇದ್ದೀನಲ್ಲ, ನಿಖಿಲ್ ಇನ್ನು ಚಿಕ್ಕ ಹುಡುಗ ಅವನ ಹೇಳಿಕೆಗೆ ಪ್ರತಿಕ್ರಿಯೆ ನೀಡುವ ಅವಶ್ಯಕತೆ ಇಲ್ಲ ಎಂದು ಶಾಸಕ ಎಸ್.ಆರ್. ಶ್ರೀನಿವಾಸ್ ತಿಳಿಸಿದರು.
ತಾಲೂಕಿನ ದೊಡ್ಡಗುಣಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಕಲ್ಲೇನಹಳ್ಳಿ, ಹಂಡನಹಳ್ಳಿ, ನೆರಲೇಕೆರೆ, ತಗ್ಗಿಹಳ್ಳಿ ಪೇರಮಸಂದ್ರ ಹಾಗೂ ದೊಡ್ಡಗುಣಿ ಗ್ರಾಮದ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಅವರೇ ಹೇಳಿದಾರಲ್ಲ ಜೆಡಿಎಸ್‍ನಿಂದ ಯಾರು ನನ್ನನ್ನು ಕಳುಹಿಸಿರುವವರು ನಾನೇನು ಹೋಗಿದ್ದೀನಾ? ನಾನು ಜನತಾ ದಳದಲ್ಲೇ ಇದ್ದೀನಲ್ಲ, ನಿಖಿಲ್ ಇನ್ನು ಚಿಕ್ಕ ಹುಡುಗ ಅವನ ಹೇಳಿಕೆಗೆ ಪ್ರತಿಕ್ರಿಯೆ ನೀಡುವ ಅವಶ್ಯಕತೆ ಇಲ್ಲ ಎಂದ ಅವರು ಅವರಪ್ಪನನ್ನು ಹೋಗಿ ಕೇಳುವಂತೆ ಹೇಳಿದ ಅವರು ಅವರಪ್ಪನನ್ನು ಕೇಳಿದರೆ ಸರಿಯಾದ ಉತ್ತರವನ್ನು ಅವರೆ ಕೊಡುತ್ತಾರೆ ಅವನು ಇನ್ನು ಚಿಕ್ಕ ಹುಡುಗ ಅವನ ಮಾತಿಗೆ ಉತ್ತರ ಕೊಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.
ಹೇಮಾವತಿ ಇಲಾಖೆ ವತಿಯಿಂದ 16ಕೋಟಿ ರು ಬಿಡುಗಡೆಯಾಗಿದ್ದು, ಕುಂಠಿತವಾಗಿದ್ದ ರಸ್ತೆಗಳಿಗೆ ಡಾಂಬರಿಕರಣ ಮಾಡಲಾಗುತ್ತಿದೆ ಎಂದ ಅವರು ಬಗರು ಹುಕ್ಕುಂ ಸಮಿತಿಯು ರಚನೆಯಾಗಿದ್ದು, ಸುಮಾರು ನಾಲ್ಕು ಸಾವಿರ ಫಲಾನುಭವಿಗಳ ಅರ್ಜಿಯನ್ನು ತೀರ್ಮಾನಿಸಲಾಗಿದ್ದು, ಸರ್ಕಾರದ ಹೊಸ ನಿಯಮದಂತೆ ಕರಾಬು ಜಾಗವನ್ನು ಗುರ್ತಿಸಲು ತಾಲೂಕು ಆಡಳಿತಕ್ಕೆ ಸೂಚನೆ ನೀಡಿದ್ದು, ಮುಂದಿನ ಬಕುರು ಹುಕ್ಕುಂ ಸಭೆಯಲ್ಲಿ ತೀರ್ಮಾನಿಸಲಾಗುವುದೆಂದು ತಿಳಿಸಿದರು.
ತಾಲೂಕಿನ ಮೂರು ಸಾವಿರದ ಆರು ನೂರು ಅಲೆಮಾರಿ ವಸತಿ ಹೀನರಿಗೆ ನಿವೇಶವನ್ನು ಕಟ್ಟಲು ರಾಜ್ಯ ಸರ್ಕಾರವು ನೀಡಿದ್ದು, ತಾಲೂಕಿನ ಬಹುತೇಕ ಎಲ್ಲಾ ಗ್ರಾಮ ಪಂಚಾಯತಿಯಲ್ಲಿ ಸರಿಯಾದ ಮಾಹಿತಿ ಸಿಗದೆ ಸ್ಪಷ್ಟದೇ ಸಿಗದೆ ವಿಲಂಭವಾಗುತ್ತಿದೆ ಎಂದು ತಿಳಿಸಿದ ಅವರು ಮುಂದಿನ ದಿನಗಳಲ್ಲಿ ರಾಜೀವ್ ಗಾಂಧಿ ವಸತಿ ಯೋಜನೆಗೆ ಪಟ್ಟಿ ನೀಡಿ ಮನೆಕಟ್ಟಿ ಕೊಳ್ಳಲು ಅನುವು ಮಾಡಿಕೊಡಲಾಗುವುದು ಎಂದು ತಿಳಿಸಿದರು.
ಪಟ್ಟಣದ ರಸ್ತೆಗಳ ಅಭಿವೃದ್ಧಿಗೆ ಈಗಾಗಲೇ ಸರ್ಕಾರವು ಅನುದಾನ ಬಿಡುಗಡೆ ಮಾಡಿದ್ದು, ಟೆಂಡರ್ ಪ್ರಕ್ರಿಯೆಯು ಸಹ ಮುಗಿದಿದ್ದು ಶೀಘ್ರದಲ್ಲೇ ಪಟ್ಟಣದಲ್ಲಿ ಮಣ್ಣಿನ ರಸ್ತೆಯು ಇಲ್ಲದಂತಾಗುತ್ತದೆ ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸವಿತಾ ಶಿವಾನಂದ್, ಉಪಾಧ್ಯಕ್ಷ ಸಿದ್ಧಲಿಂಗರಾದ್ಯ, ಸದಸ್ಯರಾದ ಮಂಜುನಾಥ್, ಸಚ್ಚಿದಾನಂದ ಸ್ವಾಮಿ,ಚಿದಾನಂದ, ಮಾಜಿ ಅಧ್ಯಕ್ಷ ರೇಣುಕಾ ಪ್ರಸಾದ್, ಗಂಗಣ್ಣ, ಈರಣ್ಣ, ಜ್ಯೋತಿ ಪ್ರಕಾಶ್, ವಿಶ್ವನಾಥ್, ಪಿಡಿಓ ಹಾಗೂ ಮುಖಂಡರು ಉಪಸ್ಥಿತರಿದ್ದರು.
(Visited 1 times, 1 visits today)