ಚಿಕ್ಕನಾಯಕನಹಳ್ಳಿ:
ಚಿಕ್ಕನಾಯಕನಹಳ್ಳಿ ಪಟ್ಟಣದ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಾಲಯ ಬಳಿ ಮಾರ್ಕೆಟ್ ಬಳಿ ವಿವಾಹಿತ ಮಹಿಳೆಯನ್ನು ಆಕೆಯ ಜುಟ್ಟಿಗೆ ಬಟ್ಟೆಕಟ್ಟಿ ಫ್ಯಾನಿಗೆ ನೇತು ಹಾಕಿರುವ ಘಟನೆ ನಡೆದಿದೆ. ಕಳೆದ ಮೂರ್ನಾಲ್ಕು ದಿನಗಳ ಹಿಂದೆ ದಿಲೀಪನ ಹೆಂಡತಿ ಚೈತ್ರ ತುರುವೇಕೆರೆ ತಾಲೂಕಿನ ಸಂಪಿಗೆ ತನ್ನ ತಾಯಿ ಹಾಗೂ ಚೈತ್ರಾಳ ತಂಗಿ ಬಾಣಂತಿ ಆಗಿದ್ದ ಕಾರಣ ಬಾಣಂತಿ ಹಾಗೂ ಮಗುವನ್ನು ನೋಡಿಕೊಂಡು ಬರಲು ಹೋಗಿದ್ದ ಚೈತ್ರ ಎರಡು ದಿನ ತಡವಾದ ಕಾರಣ ಗಂಡ-ಹೆಂಡತಿಯರ ನಡುವೆ ಜಗಳವಾಡಿ ಈ ಅವಘಡ ಸಂಭವಿಸಿದೆ. ಮೃತ ಮಹಿಳೆ ಚೈತ್ರ ನೆನ್ನೆ ಸೋಮವಾರ ಸಂಜೆ ಚಿಕ್ಕನಾಯಕನಹಳ್ಳಿಗೆ ವಾಪಸಾಗಿದ್ದಾಳೆ ಇಂದು ಬೆಳಿಗ್ಗೆ ಶವವಾಗಿ ಸುದ್ದಿಯಾಗಿದ್ದಾಳೆ.
ಚೈತ್ರ ಸುಮಾರು ಐದು ಅಡಿ ಎತ್ತರವಿದ್ದು ಕಾಲುಗಳು ಮಡಚಿ ಇದ್ದು ಆಕೆಯ ಕುತ್ತಿಗೆಗೆ ಹಗ್ಗ ಬಿಗಿದು ಕೊಂಡಿಲ್ಲ ಫ್ಯಾನಿಗೆ ಕಟ್ಟಿರುವ ಬಟ್ಟೆ ಸೀದಾ ಆಕೆಯ ತಲೆ ಜುಟ್ಟಿಗೆ ಕಟ್ಟಿ ಕೊಂಡಿರುವುದನ್ನು ಬಿಟ್ಟರೆ ಕುತ್ತಿಗೆಗೆ ಬಿಗಿದು ಇಲ್ಲ ಹೀಗಾಗಿ ಮೇಲ್ನೋಟಕ್ಕೆ ಇದು ಕೊಲೆ ಎಂದು ಸ್ಪಷ್ಟವಾಗಿ ಕಾಣುತ್ತದೆ. ಚಿಕ್ಕನಾಯಕನಹಳ್ಳಿ ಪಟ್ಟಣದ ಪ್ರಕಾಶ್ ಗಾಯಿತ್ರಮ್ಮ ಎಂಬವರ ಎರಡನೇ ಮಗನಾದ ದಿಲೀಪನಿಗೆ ಕಳೆದ 9 ವರ್ಷದಲ್ಲಿ ತುರುವೇಕೆರೆ ತಾಲೂಕಿನ ಸಂಪಿಗೆ ಗ್ರಾಮದ ಚೆನ್ನಕೇಶವ ಮೂರ್ತಿ ಕಮಲಾಕ್ಷಿ ಎಂಬವರ ಮೊದಲ ಮಗಳನ್ನು ಈತನಿಗೆ ಕೊಟ್ಟು ವಿವಾಹ ಮಾಡಿದರು.
ಮೃತರ ಸಂಬಂಧಿಕರು ಹೇಳುವಂತೆ ಮದುವೆ ಮಾಡಿಕೊಟ್ಟಂದಿನಿಂದಲೂ ಸಣ್ಣಪುಟ್ಟ ಕಾರಣಕ್ಕಾಗಿ ಜಗಳ ತೆಗೆಯುತ್ತಿದ್ದ ಎಂದು ದೂರಿದ್ದಾರೆ. ಮೃತಳ ಸ್ವಂತ ತಂಗಿ ಹೇಳುವಂತೆ ತವರುಮನೆಗೆ ಹೋಗುವುದೇ ಗಂಡನಿಗೆ ಅಪರಾಧ ಎಂಬ ರೀತಿಯಲ್ಲಿ ನಮ್ಮಕ್ಕನನ್ನು ನಿಂದಿಸಿ ಒಡೆದು ಘಟನೆಗಳು ಸಾಕಷ್ಟು ಬಾರಿ ನಡೆದಿದೆ ಎನ್ನುತ್ತಾರೆ.
ಮೃತರ ಸಂಬಂಧಿಕರ ಷಡಕ್ಷರಿ ಹೇಳುವಂತೆ ಇದೊಂದು ಪೂರ್ವಯೋಜಿತ ಕೊಲೆ ಈಗಾಗಲೇ ಸಾಕಷ್ಟು ಬಾರಿ ನ್ಯಾಯತೀರ್ಮಾನ ಗಳನ್ನು ಮಾಡಿ ಬಿಟ್ಟು ಹೋಗಿದ್ದೆವು ಆದರೆ ನನ್ನ ತಂಗಿಗೆ ಇವರ ಚಿತ್ರ ಸಿಕ್ಕಾಪಟ್ಟೆ ಆಗಿದೆ. ಆಕೆ ಫ್ಯಾನಿಗೆ ಬಟ್ಟೆ ಕಟ್ಟಿ ಹಾಕಿರುವ ಸ್ಥಿತಿ ನೋಡಿದರೆ ಆಕೆಯ ತಲೆ ಸುತ್ತಿಗೆ ಮಾತ್ರ ಬಟ್ಟೆ ಕಟ್ಟಿ ನೇತು ಹಾಕಿದ್ದಾರೆ ಕುತ್ತಿಗೆಗೆ ಬಿಗಿದು ಕಾಲಿನಲ್ಲಿ ಕೂಡ ರಕ್ತಸ್ರಾವವಾಗಿದೆ ಹೀಗಿರುವಾಗ ಇದು ತನಿಖೆಯಿಂದ ಮಾತ್ರ ಹೊರಬರಬೇಕಾಗಿದೆ ನಮಗೆ ನ್ಯಾಯ ಕೊಡಿ ಎಂದು ಮಾಧ್ಯಮದ ಮೂಲಕ ಕೇಳಿಕೊಂಡರು.
ಮೃತಳಿಗೆ ಏಳು ವರ್ಷದ ಹೆಣ್ಣು ಮಗು ಅಂದಿದ್ದು ಮಗುವಿನ ಸ್ಥಿತಿ ಕೂಡ ಏನು ಎಂಬಂತೆ ಕಾಡತೊಡಗಿದೆ. ಘಟನೆ ನಡೆದ ಕೂಡಲೇ ಸ್ಥಳಕ್ಕೆ ಧಾವಿಸಿದ ಪೆÇಲೀಸರು ಮೃತಳಾದ ಚೈತ್ರಳ ಗಂಡ ದಿಲೀಪ ಹಾಗೂ ಪ್ರಕಾಶ್ ಮತ್ತು ಗಾಯಿತ್ರಮ್ಮ ಇವರನ್ನು ಪೆÇಲೀಸರ ವಶದಲ್ಲಿ ಇಟ್ಟುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಇವರ ಆಕ್ರಂದನ ಹೆತ್ತವರ ಕೂಗು ಮುಗಿಲು ಮುಟ್ಟುವಂತೆ ಇತ್ತು. ಮೃತಳ ಗಂಡ ಕಳೆದ ಏಳೆಂಟು ವರ್ಷಗಳ ಹಿಂದೆ ಕಳ್ಳತನದ ಆರೋಪದ ಮೇಲೆ ಚಿಕ್ಕನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ನ್ಯಾಯಾಲ ಯದಲ್ಲಿ ಕೂಡ ಸಾಬೀತಾಗಿದೆ. ಘಟನೆಯ ಸತ್ಯಾಸತ್ಯತೆಯಿಂದ ಹೊರಚೆಲ್ಲಿ ಬೇಕಾದ ಪೆÇಲೀಸರ ಕಾರ್ಯಕ್ಷಮತೆಯನ್ನು ಪ್ರಶ್ನಿಸುವಂತೆ ಆಗಬಾರದು ವಾಸ್ತವ ಸತ್ಯ ತಿಳಿಯುವಂತೆ ಹಾಕಬೇಕೆಂದು ನಾವು-ನೀವೆಲ್ಲ ಬಯಸೋಣ.
(Visited 6 times, 1 visits today)