ಚಿಕ್ಕನಾಯಕನಹಳ್ಳಿ:
ಪಟ್ಟಣದ ಖಾಸಗಿ ಆಸ್ಪತ್ರೆಯೊಂದರಲ್ಲಿ ವೈದ್ಯರ ನಿರ್ಲಕ್ಷದಿಂದಾಗಿ ಚಿಕಿತ್ಸೆ ಪಡೆದಿದ್ದ ಮಹಿಳೆಯು ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಹಾಗೂ ಸಾರ್ವಜನಿಕರು ಮಹಿಳೆಯ ಶವವನ್ನಿಟ್ಟು ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ನಡೆದಿದೆ.
ತಾಲ್ಲೂಕಿನ ಮುದ್ದೆನಹಳ್ಳಿ ಗ್ರಾಮದ ವಿಜಯಲಕ್ಷ್ಮಿ ಎಂಬುವರು ಹೊಟ್ಟೆನೋವಿನಿಂದಾಗಿ ಪಟ್ಟಣದ ಸಾಯಿಗಂಗಾ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಈಕೆಯನ್ನು ಪರೀಕ್ಷಿಸಿದ ವೈದ್ಯರಾದ ಡಾ. ವಿಜಯರಾಘವೇಂದ್ರರವರು ಕಿಡ್ನಿಯಲ್ಲಿ ಕಲ್ಲಿದೆ ಎಂದು ತಿಳಿಸಿ, ಅದರ ನಿವಾರಣೆಗಾಗಿ ಶಸ್ತ್ರಚಿಕಿÀತ್ಸೆಯ ಅಗತ್ಯವಿದೆ ಎಂದು ಏ.22 ರಂದು ಬೆಳಿಗ್ಗೆ ಶಸ್ತ್ರಚಿಕಿತ್ಸೆ ನಡೆಸಿ ವಿಶೇಷ ವಾರ್ಡ್‍ಗೆ ದಾಖಲಿಸಿದರು. ಆದರೆ ಸಂಜೆ ಮಹಿಳೆಯ ಆರೋಗ್ಯಸ್ಥಿತಿ ಗಂಭೀರವಾದ ಕಾರಣ ಸದರಿ ವೈದ್ಯರು ಆತುರಾತುರವಾಗಿ, ಆಂಬುಲೆನ್ಸ್‍ನ್ನು ವ್ಯವಸ್ಥೆ ಮಾಡಿ ಮಹಿಳೆಯನ್ನು ತುಮಕೂರಿನ ವಿನಾಯಕ ಆಸ್ಪತೆಗೆ ಕಳುಹಿಸಿದರು.
ಅಲ್ಲಿ ಎರಡುದಿನ ಚಿಕಿತ್ಸೆನಡೆಸಿದರೂ ಆಕೆಯು ಚೇತರಿಸಿಕೊಳ್ಳದ ಕಾರಣ ಅಲ್ಲಿನ ವೈದ್ಯರು ತುರ್ತಾಗಿ ಬೆಂಗಳೂರಿಗೆ ಕರೆದುಕೊಂಡು ಹೋಗಿ ಎಂದರು. ಕುಟುಂಬಸ್ಥರು ಆಕೆಯನ್ನು ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ಏ.24 ರಂದು ದಾಖಲಿಸಿದರೂ ವಿಜಯಲಕ್ಷ್ಮಿ ಏ.26 ರಂದು ಬೆಳಿಗ್ಗೆ ಮೃತಪಟ್ಟಿರು. ವಿಜಯಲಕ್ಷ್ಮಿ ಪತಿ ಗಂಗಾಧರ್ ಹಾಗೂ ಕುಟುಂಬಸ್ಥರು ಮತ್ತು ಗ್ರಾಮಸ್ಥರೆಲ್ಲರೂ ಸೇರಿ ಮೃತ ಮಹಿಳೆಯ ಶವದೊಂದಿಗೆ ಪಟ್ಟಣದ ಸಾಯಿಗಂಗಾ ಆಸ್ಪತ್ರೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ, ವೈದ್ಯರ ನಿಲ್ರ್ಯಕ್ಷದಿಂದಾಗಿ ಈ ಸಾವು ಸಂಭವಿಸಿದ್ದು, ಶಸ್ತ್ರಚಿಕಿತ್ಸೆಗೆ ಬೇಕಾದ ಸೌಲಭ್ಯವಿಲ್ಲದೆ ಚಿಕಿತ್ಸೆ ನೀಡಿದ ವೈದ್ಯರಿಗೆ ಶಿಕ್ಷೆಯಾಗಬೇಕು ಹಾಗೂ ಸಾವಿಗೆ ನ್ಯಾಯದೊರೆಯಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ನಂತರ ಸ್ಥಳಕ್ಕೆ ಪೊಲೀಸರು ಆಗಮಿಸಿ ಆಸ್ಪತ್ರೆಯನ್ನು ಮುಚ್ಚಿಸಿದರು. ಪ್ರತಿಭಟನಾ ಕಾರರು ಜಿಲ್ಲಾ ಆರೋಗ್ಯಾಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ಕದಲುವುದಿಲ್ಲ ಎಂದು ಪಟ್ಟು ಹಿಡಿದರು. ಇದೇ ಸಂದರ್ಭದಲ್ಲಿ ತಹಸೀಲ್ದಾರ್ ಕಚೇರಿಗೆ ತರೆಳಿ ತಹಸೀಲ್ದಾರ್‍ರಿಗೆ ಮನವಿ ಸಲ್ಲಿಸಿದರು.
(Visited 5 times, 1 visits today)