ಬೆಂಗಳೂರು: 

      ಡಿಸೆಂಬರ್ 5ರೊಳಗೆ ಎಲ್ಲಾ ರೈತರ ಸಾಲಮನ್ನಾ ಮಾಡುವುದಾಗಿ ಭರವಸೆ ನೀಡಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇದೀಗ ಕೇಂದ್ರ ಸರ್ಕಾರ ಹಣ ನೀಡದೆ ಹೋದರೂ ಕೂಡಾ ರಾಜ್ಯ ಸರ್ಕಾರ ರೈತರ ಸಾಲಮನ್ನಾಕ್ಕೆ ಬದ್ಧವಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

       ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು,  ರಾಷ್ಟ್ರೀಕೃತ ರಾಷ್ಟ್ರೀಯ ಬ್ಯಾಂಕುಗಳಲ್ಲಿ ಮೊದಲ ಹಂತವಾಗಿ 17 ಲಕ್ಷ ರೈತರ 50 ಸಾವಿರದವರೆಗಿನ ಸಾಲಮನ್ನಾಗೆ ಈಗಾಗಲೇ ಅಧಿಕಾರಿಗಳಿಗೂ ಆದೇಶಿಸಿದ್ದೇನೆ. ಮೊದಲ ಹಂತದಲ್ಲಿ ಜನವರಿಯಲ್ಲಿ 50 ಸಾವಿರ ಸಾಲಮನ್ನಾ ಆಗಲಿದೆ. ರಾಜ್ಯದಲ್ಲಿ ಒಟ್ಟು 2 ಲಕ್ಷದ 20ಸಾವಿರ NP ಖಾತೆಗಳಿದ್ದು, ಮರುಪಾವತಿಯಾಗದ ಖಾತೆಗಳೆಂದು ಗುರುತಿಸಲಾಗಿದೆ. ಬ್ಯಾಂಕ್‌ನವರು ಮುಂಚಿತವಾಗಿ ಅಸಲಿನಲ್ಲಿ ಶೇ. 50 ರಷ್ಟು ಬಿಡಲಾಗುತ್ತದೆ ಎಂದಿದ್ದ ಬ್ಯಾಂಕ್‌ ಈಗ ಹಿಂದೆ ಸರಿದಿವೆ. ನಾವು ಶೇ. 50ರಷ್ಟು ಹಣ ನೀಡಲು ಮುಂದಾಗಿದ್ದೇವೆ.  ಅಲ್ಲದೇ ಸದ್ಯ ಪ್ರಾಯೋಗಿಕವಾಗಿ ಎಲ್ಲಾ ತಾಲೂಕುಗಳಲ್ಲಿ ಸಾಲಮನ್ನಾ ಮಾಡಲಾಗಿದೆ  ಎಂದು ಹೇಳಿದರು.

      ರೈತರ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿನ ಸಾಲದ ಶೇ.50ರಷ್ಟು ಹೊರೆಯನ್ನು ಕೇಂದ್ರ ಸರ್ಕಾರ ಹೊರಬೇಕು ಎಂದು ಮನವಿ ಮಾಡಿದ್ದೇವು. ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈತರ ಸಾಲಮನ್ನಾದ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಸಹಕಾರ ನೀಡುತ್ತಿಲ್ಲ ಎಂದು ಆರೋಪಿಸಿದರು.

 

 

(Visited 20 times, 1 visits today)