ಮಧುಗಿರಿ:
ಇದು ನನ್ನ ಕೊನೆಯ ಚುನಾವಣೆ ಮುಖಂಡರುಗಳು ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಬೇಕೆಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಮಾಜಿ ಶಾಸಕ .ಕೆ ಎನ್ ರಾಜಣ್ಣ ತಿಳಿಸಿದ್ದಾರೆ.
ತಾಲ್ಲೊಕಿನ ಮಿಡಿಗೇಶಿ ಹೋಬಳಿಯ ಬಿದರೆಕೆರೆ ಗ್ರಾಮದ ಬಯಲಾಂಜನೇಯ ಸ್ವಾಮಿ ದೇವಾಲಯದ ಅವರಣದಲ್ಲಿ ಬೇಡತ್ತೂರು ಪಂಚಾಯಿತಿಯ ಬೂತ್ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿ ಮಧುಗಿರಿ ಕ್ಷೇತ್ರದಲ್ಲಿ ಈಗಾಗಲೆ ಕೆಲವು ಮಂದಿ ಅಭ್ಯರ್ಥಿಗಳಾಗಲು ಓಡಾಡುತ್ತಿದ್ದಾರೆ ಅವರುಗಳು ನಮ್ಮ ಆಸ್ತಿ ಉಳಿಸಿಕೊಳ್ಳಲು ರಾಜಕಾರಣಕ್ಕೆ ಬರುತ್ತಿದ್ದಾರೆ ಅವರ ಬಗ್ಗೆ ಎಚ್ಚರಿಕೆಯಿಂದ ಇರುವಂತೆ.ಮನವಿ ಮಾಡಿದ ಅವರು ಕಳೆದ ಬಾರಿ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಕೆಎನ್‍ಆರ್ ಗಿಂತ ಹತ್ತು ಪಟ್ಟು ಕೆಲಸ ಮಾಡುತ್ತೇನೆ ಎಂದು ಹೇಳಿ ಸೀರೆ ಹಂಚಿ ಗೆಲುವು ಸಾಧಿಸಿದ ಅವರ ಅಭಿವೃದ್ಧಿ ಕಾರ್ಯಗಳ ಬಗ್ಗೆ ನನ್ನ ಅವಧಿಯ ಅಭಿವೃದ್ಧಿ ಕಾರ್ಯಗಳ ಬಗ್ಗೆ ಕಾರ್ಯಕರ್ತರು ಮತದಾರರು ಆತ್ಮಾವಲೋಕನೆ ಮಾಡಿಕೊಳ್ಳಿ ನನ್ನ ಕಾರ್ಯಗಳ ಬಗ್ಗೆ ಹೇಳಿಕೊಳ್ಳುವುದು ಏನಿಲ್ಲ ನಾನು ನನ್ನ ಇತಿಮಿತಿಯಲ್ಲಿ ಕೆಲಸ ಮಾಡಿದ್ದು ರೈತರ ಧ್ವನಿಯಾಗಿ ಕಾರ್ಯನಿರ್ವಹಿಸಿದ್ದೇನೆ ಇತ್ತೀಚಿಗೆ ಮರುವೇಕೆರೆ ಸಮೀಪ ರೈತರ ಹೊಲಗಳಿಗೆ ಫ್ರೆಂಚರು ಹೊಡೆದು ಅರಣ್ಯ ಇಲಾಖೆ ತೊಂದರೆ ಮಾಡಿದ ಸಂದರ್ಭದಲ್ಲಿ ಅವರ ಹೊಲಗಳಿಗೆ ಭೇಟಿ ಮಾಡಿ ಧ್ವನಿ ಎತ್ತಿದ್ದ ರಿಂದ ಕೆಲಸ ಸ್ಥಗಿತಗೊಂಡು ಅವರ ಬದುಕು ಹಸನಾಗಿದೆ ಮುಂದಿನ ಚುನಾವಣೆಯಲ್ಲಿ ನಾನು ಜಯಗಳಿಸಿದರೆ ಮಧುಗಿರಿಯನ್ನು ಜಿಲ್ಲಾಕೇಂದ್ರ ಮಾಡುವುದು ಎತ್ತಿನಹೊಳೆ ಪ್ರವಾಸೋದ್ಯಮಕ್ಕೆ ಕಾಯಕಲ್ಪ ಸಣ್ಣ ಕೈಗಾರಿಕೆಗಳ ಸ್ಥಾಪನೆ ಮುಂತಾದ ಕಾರ್ಯಗಳ ಬಗ್ಗೆ ಧ್ವನಿಯಾಗಿ ನಿಮ್ಮ ಪರ ನಿಲ್ಲುತ್ತೇನೆ ಎಂದರು
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಜಿಜೆ ರಾಜಣ್ಣ ಮಾತನಾಡಿ ಪ್ರತಿಯೊಬ್ಬ.ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ಮಾತ್ರ.ರಾಜಣ್ಣ.ಗೆಲುವು ಸಾಧ್ಯ ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ ನಾಗೇಶ್ ಬಾಬು ಮಾತನಾಡಿ ತಾಲೂಕಿನ ಸಮಗ್ರ ಅಭಿವೃದ್ಧಿಗಾಗಿ ಕೆ ಎನ್ ಆರ್ ಅನಿವಾರ್ಯ ಅವರ. ಗೆಲುವಿಗಾಗಿ ಮುಖಂಡರುಗಳು ಕಾರ್ಯಕರ್ತರು ಅಭ್ಯರ್ಥಿ ಮತ್ತು ಮತದಾರರ ಮಧ್ಯೆ ಸೇತುವೆಯಾಗಿ ಕೆಲಸ ಮಾಡಬೇಕು ವೈಯಕ್ತಿಕ ಲಾಭ ಬದಿಗಿರಿಸಿ ತಾಲೂಕಿನ ರೈತರ ಬಡಜನರ ಸಮಗ್ರ ಅಭಿವೃದ್ಧಿಗೆ ಕೆ.ಎನ್.ಅರ್.ಗೆಲುವು ಅನಿವಾರ್ಯ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನಯ್ಯ ಸಿದ್ದಾಪುರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವೀರಣ್ಣ ಮಾತನಾಡಿದರು ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಾಜಗೋಪಾಲ್ ಗುತ್ತಿಗೆದಾರರಾದ ದ್ವಾರಕನಾಥ್ ಗ್ರಾಪಂ ಮಾಜಿ ಅಧ್ಯಕ್ಷರಾದ ಪ್ರಮೀಳಮ್ಮ ಕೆಪಿಸಿಸಿ ಮಹಿಳಾ ಕಾರ್ಯದರ್ಶಿ ಅನಸೂಯಾ ವೆಂಕಟೇಶ್ ಎಸ್ ಎನ್ ರಾಜು ನರಸಿಯಪ್ಪ ಹಾಜರಿದ್ದರು.

(Visited 16 times, 1 visits today)