ತುಮಕೂರು:
ಪೋಷಕರು ಕೇವಲ ಮಕ್ಕಳ ಸಂತೋಷದ ಕಡೆ ಗಮನ ಹರಿಸಿದರೆ ಸಾಲದು ಅವರ ಪಾಲನೆ ಪೋಷಣೆ ಜೊತೆ ಜೊತೆಗೆ ಅವರ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕು,ಇಂದು ಮಕ್ಕಳನ್ನು ವೈದ್ಯಕೀಯ ಪರೀಕ್ಷೆ ನಡೆಸಿದಾಗ ಅವರಲ್ಲಿ ಮೂರು ಅಂಶಗಳ ಸಮಸ್ಯೆಗಳು ಕಂಡು ಬಂದಿದೆ ಮೊದಲನೆಯದು ರಕ್ತಹೀನತೆ,ಎರಡನೆಯದು ಸ್ಥೂಲಕಾಯ,ಮೂರನೆಯದು ಹಲ್ಲಿನ ಸಮಸ್ಯೆ ಎಂದು ಹೇಳಿದರು.
ಅವರು ತುಮಕೂರು ನಗರದ 26ನೇ ವಾರ್ಡಿನ ಡಾ||ಚಂದ್ರಶೇಖರ ಆಜಾದ್ ಉದ್ಯಾನವನದಲ್ಲಿ ಕ್ಲಬ್ 26 ಮತ್ತು ಕಿಡ್ಸ್ ಯೂನಿವರ್ಸ್ ಪ್ರೀಸ್ಕೂಲ್ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.
ಪಾಲಿಕೆಯ ಸದಸ್ಯರಾದ ಮಲ್ಲಿಕಾರ್ಜುನ್ ರವರ ಸಹಕಾರದಿಂದ ಕಳೆದ 15 ದಿನಗಳಿಂದ ಬೇಸಿಗೆ ಶಿಬಿರ ನಡೆಯುತ್ತಿರುವುದು ಸಂತೋಷದಾಯಕ,ಮಕ್ಕಳಿಗೆ ವಿದ್ಯೆಯ ಜೊತೆಗೆ ಉತ್ತಮ ಸಂಸ್ಕಾರವನ್ನು ಕಲಿಸಿದಾಗ ರಾಷ್ಟ್ರ ಪ್ರಗತಿಯಾಗುತ್ತದೆ ಇದರಿಂದ ಹೆತ್ತವರಿಗೂ,ದೇಶಕ್ಕೂ ಗೌರವ ಬರುತ್ತದೆ ಎಂದು ತಿಳಿಸಿದರು.
ಮಧುಮೇಹ ತಜ್ಞ ಡಾ|| ರಾಜಶೇಖರ್ ಮಾತನಾಡಿ 26ನೇ ವಾರ್ಡಿನಲ್ಲಿ ಹೆಚ್ಚು ಅಭಿವೃದ್ಧಿ ಕಾರ್ಯಗಳು ಜರುಗುತ್ತಿವೆ,ಮಲ್ಲಿಕಾರ್ಜುನ್ ರವರು ಪಾಲಿಕೆಯ ಸದಸ್ಯರಾದ ನಂತರ ನಮ್ಮ ವಾರ್ಡಿನಲ್ಲಿ ಇಂತಹ ಹಲವಾರು ಸಾಂಸ್ಕøತಿಕ, ಶೈಕ್ಷಣಿಕ,ಕಾರ್ಯಕ್ರಮಗಳು ಜರುಗುತ್ತಿರುವುದು ಸಂತೋಷದಾಯಕ ನಮ್ಮ ವಾರ್ಡು ಎಲ್ಲ ವಾರ್ಡಿಗೂ ಮಾದರಿ ಎಂದು ಹರ್ಷ ವ್ಯಕ್ತಪಡಿಸಿದರು.
ದಂತವೈದ್ಯ ಡಾ||ಸಂಜಯ್ ನಾಯಕ್ ಮಾತನಾಡಿ ಮಕ್ಕಳು ಪ್ರತಿ ದಿನ ಎರಡು ಬಾರಿ ಹಲ್ಲು ಉಜ್ಜಬೇಕು ಹಲ್ಲಿನ ಬಗ್ಗೆ ನಿರ್ಲಕ್ಷ್ಯ ಸಲ್ಲದು,ಪ್ರತಿ ಮೂರು ವರ್ಷಕ್ಕೊಮ್ಮೆ ದಂತ ವೈದ್ಯರನ್ನು ಸಂಪರ್ಕಿಸಿ ಎಂದು ಸಲಹೆ ನೀಡಿದರು.
ಪಾಲಿಕೆಯ ಆರೋಗ್ಯಾಧಿಕಾರಿ ಡಾ||ರಕ್ಷಿತ್ ಮಾತನಾಡಿ 26ನೇ ವಾರ್ಡಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಪ್ರಾರಂಭವಾಗಲಿದೆ,ಪ್ರತಿಯೊಬ್ಬರು ಸಹ ಸ್ವಚ್ಛತೆಗೆ ಆದ್ಯತೆ ನೀಡಿದಾಗ ಸ್ವಚ್ಛ ಮತ್ತು ಸುಂದರ ತುಮಕೂರು ಆಗಲಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪಾಲಿಕೆ ಸದಸ್ಯರಾದ ಹೆಚ್.ಮಲ್ಲಿಕಾರ್ಜುನಯ್ಯನವರು ಈ ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ಶೈಕ್ಷಣಿಕ,ಸಾಂಸ್ಕøತಿಕ,ಆರೋಗ್ಯದ ಶಿಕ್ಷಣದ ತರಬೇತಿ ನೀಡಲಾಯಿತು,ಈ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು,26 ನೇ ವಾರ್ಡಿನಲ್ಲಿ ಕೆಲವೇ ದಿನಗಳಲ್ಲಿ ತರಕಾರಿ ಮಾರುಕಟ್ಟೆ ಆಗಲಿದೆ,ಈಗಾಗಲೇ ಕುಡಿಯುವ ನೀರಿನ ಶುದ್ಧ ಘಟಕ ಆಗಿದ್ದು ಎಲ್ಲರಿಗೂ ಉತ್ತಮ ನೀರು ಸಿಗುತ್ತಿದೆ,ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು ಅದೂ ಸಹ ಪ್ರಾರಂಭವಾಗಲಿದೆ, ನಮ್ಮ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್‍ರವರ ಆಶೀರ್ವಾದ ಮತ್ತು ಸಹಕಾರದಿಂದ ನಮ್ಮ ವಾರ್ಡಿನಲ್ಲಿ ಹೆಚ್ಚು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ,ವಾರ್ಡಿನಲ್ಲಿ ಕಳೆದ 3 ವರ್ಷಗಳಿಂದ ಅಭಿವೃದ್ಧಿ ಕಾರ್ಯಗಳು ಭರದಿಂದ ಸಾಗಿದ್ದು ಎಲ್ಲರೂ ನಮ್ಮೊಂದಿಗೆ ಕೈಜೋಡಿಸಿದಾಗ ಕೆಲಸದ ವೇಗ ಹೆಚ್ಚುತ್ತದೆ ಎಂದು ಮನವಿ ಮಾಡಿದರು. ವೇದಿಕೆಯಲ್ಲಿ ಡಾ||ಮಹದೇವಪ್ಪ, ಶ್ರೀಮತಿ ಸುಪ್ರಿಯ, ಮುಂತಾದವರು ಉಪಸ್ಥಿತರಿದ್ದರು. ಶ್ರೀಮತಿ ವಾತ್ಸಲ್ಯ ಸ್ವಾಗತಿಸಿ,ಶ್ರೀಮತಿ ಸುಪ್ರಿಯ ರವರು ಪ್ರಾಸ್ತಾವಿಕ ನುಡಿಯನ್ನು ವಾಚಿಸಿದರು.ಶ್ರೀಮತಿ ಹೇಮಾ ಮಲ್ಲಿಕಾರ್ಜುನಯ್ಯ ನಿರೂಪಿಸಿದರು,ವಿಶ್ವಮೂರ್ತಿ,ನಟರಾಜು, ಕ್ಲಬ್ 26 ನ ಸದಸ್ಯರು ಮುಂತಾದವರು ಹಾಜರಿದ್ದರು.

(Visited 4 times, 1 visits today)