ತುಮಕೂರು:
ತುಮಕೂರು ತಾಲ್ಲೂಕಿನ ಕೆಲವು ಭಾಗಗಳಲ್ಲಿ ನಿನ್ನೆ ಸಂಜೆ ವಿಪರೀತ ಗಾಳಿ ಬೀಸಿ ಸಾಕಷ್ಟು ಮರಗಳು ನೆಲಕ್ಕುರುಳಿರುವ ಘಟನೆ ವರದಿಯಾಗಿದೆ.
ತುಮಕೂರು ನಗರ ಸೇರಿದಂತೆ ತಾಲ್ಲೂಕಿನ ಹಲವೆಡೆ ಸಂಜೆ ಮಳೆ ಆರಂಭವಾಯಿತು. ಮಳೆಗಿಂತ ಗಾಳಿ ಹೆಚ್ಚು ಬೀಸಿದ ಪ್ರದೇಶಗಳಲ್ಲಿ ಮರಗಳು ಬಿದ್ದು ಹೋಗಿವೆ. ಕೆಲವೆಡೆ ರಸ್ತೆಗೆ ಅಡ್ಡಲಾಗಿ ರಸ್ತೆಯ ಬದಿಯಲ್ಲಿರುವ ಮರಗಳಲ್ಲಿ ಬಿದ್ದಿದ್ದು, ಅರಣ್ಯ ಸಿಬ್ಬಂದಿಗಳು, ಬೆಸ್ಕಾಂ ಸಿಬ್ಬಂದಿಗಳು ಹೊರತೆಗೆಯಲು ಹರಸಾಹಸ ಪಟ್ಟರು.
ಮೈಲನಹಟ್ಟಿ ಮಾರನಹಟ್ಟಿ ಅದಲಾಪುರ ಸುತ್ತ ಮುತ್ತ ಬಾರಿ ಗಾಳಿ ಮಳೆ ಯಿಂದಾಗಿ ತುಂಬಾ ಬೆಲೆ ಬಾಳುವಅಡಿಕೆ ಹಾಗೂ ತೆಂಗಿನ ಮರಗಳು ಭೂಮಿಗೆ ಉರುಳಿವೆ.
ಅಲ್ಲದೆ ಈ ಭಾಗದ ಸುತ್ತ ಮುತ್ತ ಸಾಕಷ್ಟು ಮನೆಗಳಿಗೆ ಹಾನಿಯಾಗಿದೆ. ಸಂಜೆ 4 ಗಂಟೆಯಿಂದ ಮಳೆ ಆರಂಭವಾಯಿತು. ಮಳೆಗಿಂತ ಗಾಳಿಯೇ ಅಧಿಕವಾಗಿತ್ತು.
ಒಂದೊಂದು ತೋಟದಲ್ಲಿ ಗಾಳಿಯ ರಭಸಕ್ಕೆ 10 ರಿಂದ 20 ಮರಗಳ ತನಕ ಬಿದ್ದು ಹೋಗಿವೆ. ಅಡಿಕೆ ಹಾಗೂ ತೆಂಗಿನ ಮರಗಳು ರಭಸ ಗಾಳಿಗೆ ಬಿದ್ದು ಹೋಗಿದ್ದು ಮನೆಗಳಿಗೂ ಹಾನಿಯಾಗಿವೆ ಎಂದು ಆ ಭಾಗದ ಮುಖಂಡ ಈರೇಗೌಡ ತಿಳಿಸಿದರು.
ಗಾಳಿ ಮಳೆಯಿಂದ ಹಾನಿಯಾಗಿ ಲಕ್ಷಾಂತರ ರೂ. ನಷ್ಟ ಅನುಭವಿಸುತ್ತಿರುವ ರೈತರಿಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಪರಿಹಾರವನ್ನು ತಾವೇ ಖುದ್ದು ರೈತನಿಗೆ ತಲುಪುವಂತೆ ದೊರಕಿಸಿಕೊಡಬೇಕು ಎಂದು ಗ್ರಾಮ ಪಂಚಾಯತ್ ಸದಸ್ಯರಾದ ಅನ್ನಪೂರ್ಣ ಒತ್ತಾಯಿಸಿದ್ದಾರೆ.
(Visited 1 times, 1 visits today)