ತುಮಕೂರು:
ಮಕ್ಕಳಿಗೆ ಚಿಕ್ಕಂದಿನಲ್ಲಿಯೇ ಪರಿಸರ ಪ್ರಜ್ಞೆಯ ಜೊತೆಗೆ, ನಮ್ಮ ಸಂಸ್ಕøತಿ, ಸಾಂಸ್ಕøತಿಕ ಪ್ರಜ್ಞೆಯನ್ನು ಮೂಡಿಸುವುದರಿಂದ ಭವಿಷ್ಯದಲ್ಲಿ ಅವರು ಜವಾಬ್ದಾರಿಯುತ ಸತ್ಪ್ರಜೆಗಳಾಗಿ ರೂಪುಗೊಳ್ಳಲು ಅನುಕೂಲವಾಗುತ್ತದೆ ಎಂದು ಶಾಸಕ ಜಿ.ಬಿ.ಜೋತಿಗಣೇಶ್ ತಿಳಿಸಿದ್ದಾರೆ.
ನಗರದ ಕನ್ನಡ ಭವನದಲ್ಲಿ ಮಕ್ಕಳಿಗಾಗಿ ಆಯೋಜಿಸಿದ್ದ ಕನ್ನಡ ಕಲರವ ಮಕ್ಕಳ ಬೇಸಿಗೆ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಶಿಬಿರದಲ್ಲಿ ಪಾಲ್ಗೊಂಡ ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡುತಿದ್ದ ಅವರು,ಇಂದು ಜನರಲ್ಲಿ ಪರಿಸರ ಪ್ರಜ್ಞೆ ಕಡಿಮೆಯಾಗುತ್ತಿರುವುದರ ಭಾಗವಾಗಿ ಪ್ರಾಕೃತಿಕ ವಿಕೋಪಗಳನ್ನು ಕಾಣುತ್ತಿದ್ದವೆ. ಇಂತಹ ಅವಘಡಗಳನ್ನು ತಡೆಗಟ್ಟಲು ಮಕ್ಕಳಿಗೆ ಚಿಕ್ಕಂದಿನದಲ್ಲಿಯೇ ಪರಿಸರ ಪ್ರಜ್ಞೆ ಬೆಳೆಸುವುದು ಸೂಕ್ತ ಎಂದರು.
ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ವಿವಿಧ ಕಲಾ ಪ್ರಕಾರಗಳ ಪರಿಚಯದ ಜೊತೆಗೆ, ತುಮಕೂರು ಅಮಾನಿಕೆರೆಯಲ್ಲಿ ಪಕ್ಷಿಗಳ ವೀಕ್ಷಣೆಗೆ ಅವಕಾಶ ಕಲ್ಪಿಸಿರುವುದು ಒಳ್ಳೆಯ ಬೆಳವಣಿಗೆ,ಮಕ್ಕಳಿಗೆ ತಮ್ಮ ಸುತ್ತಮುತ್ತಲಿನ ಕೆರೆ,ಕಟ್ಟೆಗಳು,ಪಕ್ಷಿಗಳ ಪರಿಚಯವಾದರೆ, ಅವುಗಳೊಂದಿಗೆ ಅನುಸಂಧಾನ ನಡೆಸಲು ಸಹಕಾರಿಯಾಗುತ್ತವೆ.ಕಳೆದ ಎರಡು ವರ್ಷಗಳಿಂದ ಬೌತಿಕ ತರಗತಿಗಳಿಲ್ಲದೆ,ಸ್ನೇಹಿತರ ಒಡನಾಟವಿಲ್ಲದೆ ಇದ್ದ ಮಕ್ಕಳಿಗೆ ಈ ಬೇಸಿಗೆ ಶಿಬಿರ ಅತ್ಯಂತ ಉಪಯೋಗಕಾರಿಯಾಗಿದೆ.ಇದಕ್ಕಾಗಿ ಕಸಾಪ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಆಯೋಜಕರಿಗೆ ಹೃಪೂರ್ವಕ ಅಭಿನಂದನೆ ಸಲ್ಲಿಸುವುದಾಗಿ ಶಾಸಕ ಜೋತಿಗಣೇಶ್ ತಿಳಿಸಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ,ಸಾಹಿತ್ಯ ಪರಿಷತ್ ವತಿಯಿಂದ ಮಕ್ಕಳಿಗಾಗಿ ಒಂದು ವಾರಗಳ ಕಾಲದ ಬೇಸಿಗೆ ಶಿಬಿರವನ್ನು ಆಯೋಜಿಸಿದ್ದು, ಸುಮಾರು 50ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡಿದ್ದರು.ಮಕ್ಕಳಿಗೆ ನಾಟಕ, ಚಿತ್ರಕಲೆ,ನೃತ್ಯ, ಕ್ರಾಪ್ಟ್ ಸೇರಿದಂತೆ ವೈವಿದ್ಯಮಯ ಕಾರ್ಯಕ್ರಮಗಳ ಮೂಲಕ ಅವರನ್ನು ಕಲಿಯಲು ಉತ್ತೇಜಿಸಲಾಗಿದೆ.ಎಲ್ಲ ಮಕ್ಕಳು ಬಹಳ ಸಕ್ರಿಯರಾಗಿ ಪಾಲ್ಗೊಂಡಿದ್ದಾರೆ. ಶಿಬಿರದಲ್ಲಿ ಭಾಗವಹಿಸಿದ್ದ ಮಕ್ಕಳು ಸೇರಿ ಕಾರಂತರ ಮೂಕಜ್ಜಿಯ ಕನಸು ನಾಟಕವನ್ನು ಕಲಿತು ಇಂದು ಪ್ರದರ್ಶಿಸುವ ಮೂಲಕ ತಮ್ಮಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರಹಾಕಿದ್ದಾರೆ.ಇದಕ್ಕಾಗಿ ಶ್ರಮಿಸಿದ ಎಲ್ಲಾ ಶಿಕ್ಷಕರಿಗೆ ಸಾಹಿತ್ಯ ಪರಿಷತ್ ಕೃತಜ್ಞತೆ ಸಲ್ಲಿಸಲಿದೆ.ಮುಂದೆಯೂ ಪ್ರತಿವರ್ಷ ನಿರಂತರವಾಗಿ ಬೇಸಿಗೆ ಶಿಬಿರಗಳನ್ನು ಕಸಾಪ ಆಯೋಜಿಸಲಿದೆ ಎಂದರು.
ಶಿಬಿರದ ಸಂಪನ್ಮೂಲ ವ್ಯಕ್ತಿಯಾಗಿದ್ದ ಚಿತ್ರ ಕಲಾವಿದರಾದ ಡೇವಿಡ್ ಮಾತನಾಡಿ,6ನೇತರಗತಿಯಿಂದ 9ನೇ ತರಗತಿಯವರೆಗಿನ ಸುಮಾರು 48 ಮಕ್ಕಳು ಶಿಬಿರದಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆಗಳನ್ನು ಚಿತ್ರಕಲೆ, ನಾಟಕ,ನೃತ್ಯದ ತೋರ್ಪಡಿಸಿದ್ದಾರೆ.ಕಳೆದ ಎರಡು ವರ್ಷಗಳಿಂದ ಕೋರೋನ ಹೆದರಿಕೆಯಲ್ಲಿ ಮನೆಯಲ್ಲಿಯೇ ಇದ್ದ ಮಕ್ಕಳಿಗೆ ಇದೊಂದು ರೀತಿಯ ಶಾಲಾ ಪೂರ್ವ ಅಭ್ಯಾಸದಂತಿದೆ ಎಂದರು.
ಪಾಲಿಕೆಯ ಸದಸ್ಯೆ ಗಿರಿಜಾ ಧನಿಯಕುಮಾರ್ ಮಾತನಾಡಿ,ನನ್ನ ಮಗಳು ಸಹ ಈ ಶಿಬಿರದಲ್ಲಿ ಪಾಲ್ಗೊಂಡು ಚಿತ್ರಕಲೆ ಮಾಡುವುದನ್ನು ಕಲಿತಿದ್ದಾಳೆ.ಸದಾ ಮನೆಯಲ್ಲಿಯೇ ಇರುತ್ತಿದ್ದ ಮಕ್ಕಳು ಮೊಬೈಲ್ ಅಥವಾ ಟಿವಿಗೆ ಅಡಿಟ್ ಆಗಿದ್ದರು, ಅದರಿಂದ ಹೊರಬರಲು ಈ ಬೇಸಿಗೆ ಶಿಬಿರ ಸಹಾಯಕವಾಗಿದೆ.ಪರಿಸರ ತಜ್ಞ ಗುಂಡಪ್ಪ ಅವರು ಅಮಾನಿಕೆರೆ ಮತ್ತು ಅದರ ವೈಶಿಷ್ಠಗಳ ಕುರಿತು ವಿವರ ನೀಡಿ,ಮಕ್ಕಳಿಗೆ ನಮ್ಮ ಸುತ್ತಮುತ್ತಲ ಪರಿಸರದ ಪ್ರಜ್ಞೆ ಮೂಡಿಸಿರುವುದು ಸಂತೋಷ ತಂದಿದೆ ಎಂದರು.
ಈ ವೇಳೆ ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಡಾ.ಸಣ್ಣಹೊನ್ನಯ್ಯ ಕಂಟಲಗೆರೆ,ಮಹಿಳಾ ಪ್ರತಿನಿಧಿ ರಾಣಿಚಂದ್ರಶೇಖರ್, ಸಂಚಾಲಕ ಧನಿಯಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

(Visited 8 times, 1 visits today)