ಕೊರಟಗೆರೆ:
ಪಟ್ಟಣದ ದೊಡ್ಡಪೇಟೆ ಬಡಾವಣೆಯ ಗಿರಿಜಮ್ಮ ರೇಣುಕಪ್ಪ ಎಂಬ ವೃದ್ಧ ದಂಪತಿ ಮನೆಯಲ್ಲಿ ಬೆಳಿಗ್ಗೆ 9ಗಂಟೆ ಸುಮಾರಿಗೆ ಅಪರಿಚಿತ ವ್ಯಕ್ತಿಯೊಬ್ಬ ಕಣ್ಣಿನ ಆಪರೇಶನ್ ಮಾಡಿಸಿದರೆ ಹತ್ತು ಸಾವಿರ ಉಚಿತ ಹಣವನ್ನು ಕೊಡುತ್ತಾರೆ ಎನ್ನುವ ನೆಪದಲ್ಲಿ ಮನೆಯೊಳಗೆ ಬಂದ ಆಸಾಮಿ ಅಜ್ಜಿ ಮತ್ತು ತಾತ ನನ್ನ ನಂಬಿಸಲು ಆಧಾರ್ ಕಾರ್ಡ್ ರೇಷನ್ ಕಾರ್ಡ್ ಹಾಗೂ ಪೆನ್ಷನ್ ಕ್ಲಿಪ್ ಪಡೆದು ಅಧಿಕಾರಿಗಳಿಗೆ ಕಾಲ್ ಮಾಡುವಂತೆ ಮಾಡಿದೆ ಅಜ್ಜಿ ತಾತನನ್ನು ನಂಬಿಸಿದ್ದಾನೆ.
ನಂತರ ಅಜ್ಜಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ನೆಪದಲ್ಲಿ ತನ್ನ ಬೈಕ್ ನಲ್ಲಿ ಕೂರಿಸಿಕೊಂಡು ಆಸ್ಪತ್ರೆಯ ಬಳಿ ಹೋದಾಗ ಆಪರೇಷನ್ ಮಾಡುತ್ತಾರೆ ಯಾರಾದರೂ ಒಡವೆಗಳನ್ನು ಕೇಳುತ್ತಾರೆ ಆದ್ದರಿಂದ ನನ್ನ ಬಳಿ ಕೊಡಿ ಎಂದು ಎಂದು ನಂಬಿಸಿ ಒಡವೆಗಳನ್ನೆಲ್ಲ ತೆಗೆದುಕೊಂಡು ಆತ ತಿರುಗಿ ನೋಡುವಷ್ಟರಲ್ಲಿ ಅಪರಿಚಿತ ವ್ಯಕ್ತಿಯು ನಾಪತ್ತೆಯಾಗಿರುತ್ತಾನೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕೊರಟಗೆರೆ ಪೆÇಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ ಎನ್ನಲಾಗಿದೆ.