ತುಮಕೂರು:
ಕಾಡುಗೊಲ್ಲ ಸಮುದಾಯದಲ್ಲಿ ಹೇರಳವಾದ ಜಾನಪದ ಸಂಪತ್ತಿದ್ದು ಇನ್ನೂ ಹೆಚ್ಚಿನ ಅಧ್ಯಯನ ನಡೆಯಬೇಕಿದೆ ಎಂದು ಕಾಡುಗೊಲ್ಲ ಸಮುದಾಯದ ಹಿರಿಯ ಮುಖಂಡ ಮಾಚೇನಹಳ್ಳಿ ಕರಿಯಪ್ಪ ಸಲಹೆ ನೀಡಿದರು.
ತುಮಕೂರಿನ ಪ್ರವಾಸಿ ಮಂದಿರದ ಬಳಿ ಕಾಡುಗೊಲ್ಲ ಸಮುದಾಯದಿಂದ ಆಯೋಜಿಸಿದ್ದ ಜಾನಪದ ವಿದ್ವಾಸ ತೀ.ನಂ.ಶಂಕರನಾರಾಯಣ ಅವರ ಶ್ರದ್ದಾಂಜಲಿ, ನುಡಿನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಕಾಡುಗೊಲ್ಲರ ಆಚಾರ ವಿಚಾರಗಳ ಬಗ್ಗೆ ಹೆಚ್ಚು ದಾಖಲೆಗಳು ಲಭ್ಯ ಇಲ್ಲದ ಕಾಲದಲ್ಲಿ ಚಿಕ್ಕನಾಯಕನಹಳ್ಳಿ ತಾಲ್ಲೂಕು ತೀರ್ಥಪುರದ ತೀ.ನಂ.ಶಂಕರನಾರಾಯಣ ಅವರು 7 ವರ್ಷಗಳ ಕಾಲ ಈ ಬುಡಕಟ್ಟು ಸಮುದಾಯದ ಬಗ್ಗೆ ಅಧ್ಯಯನ ನಡೆಸಿ ಕರ್ನಾಟಕ ಕಾಡುಗೊಲ್ಲರ ಸಂಪ್ರದಾಯಗಳು ಮತ್ತು ನಂಬಿಕೆಗಳು ಕುರಿತ ಪ್ರಬಂಧ ಹೊರತಂದರು. ಆ ನಂತರ ಈ ಜನಾಂಗದ ಅಧ್ಯಯನಕ್ಕೆ ಒಂದು ಹೊಸ ಮಾರ್ಗ ಸಿಕ್ಕಂತಾಯಿತು. ಕಾಡುಗೊಲ್ಲರ ಸಂಪ್ರದಾಯಗಳ ಸಾಕಷ್ಟು ಅಂಶಗಳು ಈ ಗ್ರಂಥದಲ್ಲಿ ಅಡಕವಾಗಿವೆ. ಎಷ್ಟೋ ಕಲಿಕಾ ವಿದ್ಯಾರ್ಥಿಗಳಿಗೆ ಇದೊಂದು ಆಕರ ಗ್ರಂಥವಾಗಿದೆ ಎಂದರು.
ಕಾಡುಗೊಲ್ಲ ಸಮುದಾಯ ಬುಡಕಟ್ಟು ಆಚರಣೆಗಳನ್ನು ಪಾಲಿಸುತ್ತಿದ್ದು ಈ ಸಂಪ್ರದಾಯಗಳು ಕೆಲವರಿಗೆ ವಿಭಿನ್ನ ಎನಿಸುತ್ತಿವೆ. ತೀ. ನಂ. ಶಂಕರನಾರಾಯಣ ಅವರು ಹಟ್ಟಿಗಳಿಗೆ ಹೋಗಿ ಮಾಹಿತಿ ಸಂಗ್ರಹಿಸಿದಾಗಲೇ ಅವರಿಗೆ ತಿಳಿದದ್ದು ಈ ಜನಾಂಗದಲ್ಲಿ ಒಂದು ವಿಶಿಷ್ಟ ಸಂಪತ್ತಿದೆ ಎಂದು, ಹೀಗಾಗಿ ಅವರೇ ಹಟ್ಟಿಗಳಿಗೆ ಹೋಗಿ ಗಣೆ ಊದಿಸಿದರು. ಸೋಬಾನೆ ಹಾಡಿಸಿದರು. 7 ವರ್ಷಗಳ ಕಾಲ ನಿರಂತರ ಅಧ್ಯಯನ ನಡೆಸಿ ಅದೆಲ್ಲವನೂ ಪುಸ್ತಕ ರೂಪದಲ್ಲಿ ದಾಖಲೆ ಮಾಡಿದರು ಎಂದು ವಿವರಿಸಿದರು.
ತುಮಕೂರು ವಿಶ್ವ ವಿದ್ಯಾಲಯದ ಜುಂಜಪ್ಪ ಅಧ್ಯಯನ ಪೀಠದ ಮುಖ್ಯಸ್ಥರಾದ ಡಾ. ಶಿವಣ್ಣ ಬೆಳವಾಡಿ ಮಾತನಾಡಿ ಜಾನಪದದ ಮೂಲ ಇರುವುದೇ ಬುಡಕಟ್ಟು ಸಮುದಾಯಗಳಲ್ಲಿ. ಇಂತಹ ಬುಡಕಟ್ಟು ಸಮುದಾಯಕ್ಕೆ ಸೇರಿದ ಕಾಡುಗೊಲ್ಲರಲ್ಲಿ ವಿಶಿಷ್ಟ ಪರಂಪರೆಗಳು ಇನ್ನೂ ಮುಂದುವರಿದಿವೆ. ಕೆಲವೊಂದು ಆಚರಣೆಗಳು ಈಗಿನ ಕಾಲಕ್ಕೆ ಸರಿಹೊಂದುತ್ತಿಲ್ಲ, ಅಂತಹವುಗಳನ್ನು ಕೈಬಿಡಬೇಕಾಗಿದೆ. ಸಮುದಾಯದ ಹಿತ ದೃಷ್ಟಿಯಿಂದ ಕೆಲವು ಉತ್ತಮ ಆಚರಣೆಗಳನ್ನು ಮುಂದುವರಿಸಿಕೊಂಡು ಹೋಗಬಹುದಾಗಿದೆ ಎಂದರು.
ತೀ.ನಂ. ಶಂಕರನಾರಾಯಣ ಅವರು ಕಾಡುಗೊಲ್ಲ ಸಮುದಾಯದ ಅಧ್ಯಯನಕ್ಕೆ ಇಳಿದು ಆ ಪ್ರಬಂಧದಿಂದ ಜನಾಂಗವನ್ನು ಗುರ್ತಿಸುವುದರ ಜೊತೆಗೆ ತಾವೂ ಬೆಳೆದರು. ಈ ಪ್ರಬಂಧ ಅವರಿಗೆ ಉತ್ತಮ ಹೆಸರನ್ನು ತಂದುಕೊಟ್ಟಿತು, ಸಾಕಷ್ಟು ಪ್ರಶಸ್ತಿಗಳು ಇವರಿಗೆ ಬಂದವು. ಶಿರಾ ತಾಲ್ಲೂಕು ಜುಂಜಪ್ಪನ ಗುಡ್ಡೆ ಬಳಿ ನಡೆದ ಮಹಾಶಿವರಾತ್ರಿ ದಿನದ ಗಣೆ ಗೌರವಕ್ಕೆ ಪಾತ್ರರಾಗಿದ್ದರು. ಕಾಡುಗೊಲ್ಲ ಸಮುದಾಯದ ವೀರಗಾರ ಜುಂಜಪ್ಪನ ಬಗ್ಗೆಯೂ ಅವರು ಉಲ್ಲೇಖಿಸಿದ್ದಾರೆ ಎಂದು ವಿವರಿಸಿದರು.
ಹೋರಾಟಗಾರ ಜಿ.ಕೆ. ನಾಗಣ್ಣ ಮಾತನಾಡಿ ಕಾಡುಗೊಲ್ಲರ ಅಸ್ಮಿತೆ ಉಳಿಸುವ ಕೆಲಸ ಆಗಬೇಕಿದೆ. ಇತ್ತೀಚೆಗೆ ಸರ್ಕಾರ ಅಲೆಮಾರಿಗಳ ಪಟ್ಟಿಯಿಂದ ಈ ಜನಾಂಗವನ್ನು ಕೈಬಿಡಲು ಹೊರಟಿದ್ದು ಈಗಾಗಲೇ ಮಂಜೂರಾಗಿರುವ ಮನೆಗಳನ್ನು ಕಿತ್ತುಕೊಳ್ಳಲು ಹೊರಟಿದೆ. ಸೌಲಭ್ಯಗಳಿಗಾಗಿ ಹೋರಾಡುವ ಮನಸ್ಥಿತಿಯನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕಿದೆ ಎಂದರು.
ಪ್ರಾಸ್ಥಾವಿಕ ನುಡಿಗಳನ್ನಾಡಿದ ಎಸ್.ಡಿ. ಬಸವರಾಜ್ ಬಿಲ್ಲೇಮನೆ ಅವರು ತೀ. ನಂ. ಶಂಕರನಾರಾಯಣ ಅವರು ತುಮಕೂರು ಜಿಲ್ಲೆ ಅದರಲ್ಲೂ ನಮ್ಮ ಚಿಕ್ಕನಾಯಕನ ಹಳ್ಲೀ ತಾಲ್ಲೂಕಿನಲ್ಲಿ ಜನಿಸಿದ್ದು ನಮಗೆಲ್ಲ ಅತ್ಯಂತ ಹೆಮ್ಮೆಯ ವಿಷಯ. ನಮ್ಮ ಸಮುದಾಯದಲ್ಲಿರುವ ಆಚಾರ ವಿಚಾರಗಳನ್ನು ದಾಖಲಿಸಿರುವ ಶಂಕರನಾರಾಯಣ ಅವರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ವಕೀಲರು ಮತ್ತು ಸಾಮಾಜಿಕ ಹೋರಾಟಗಾರರಾದ ಸಾ.ಚಿ.ರಾಜಕುಮಾರ ,ಡಿ. ಶಿವಣ್ಣ, ರಘು, ಕರ್ನಾಟಕ ಕಾಡುಗೊಲ್ಲ ಯುವಸೇನೆ ಅಧ್ಯಕ್ಷ ಜಿ.ವಿ. ರಮೇಶ್, ಎಚ್.ಎಚಿಟಿ ರಮೇಶ್, ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಭದ್ರೇಗೌಡ, ಗುಡ್ಡದಹಳ್ಳಿ ಬಸವರಾಜು, ಜುಂಜೇಗೌಡ, ಶಿರಾದ ಈಶÀ್ವರಪ್ಪ, ಡಾ.ಡಿ.ಕೆ. ಗಂಗಾಧರ್, ಉಪನ್ಯಾಸPರಾದÀ ಬಸವರಾಜಪ್ಪ, ತಿಮ್ಮೇಗೌq, Àದೊಡ್ಡವೀರಯ್ಯ, ಸದಾಶಿವು, ಎನ್,ಜಿ.ಓ ರಾಜಣ್ಣ, ಈರೇಗೌಡ, ತಿಪ್ಪೂರಟ್ಟಿ ಶಿವಣ್ಣ, ಜಯಣ್ಣ, ತುರುವೇಕೆರೆ ಗುರುರಾಜು,À್ನ ಮುಂತಾದವರು ನುಡಿ ನಮನದಲ್ಲಿ ಪಾಲ್ಗೊಂಡಿದ್ದರು.
(Visited 13 times, 1 visits today)