ಕೊರಟಗೆರೆ:
ಕೆನರಾ ಬ್ಯಾಂಕಿನ ಕಚೇರಿ ಮತ್ತು ಆವರಣದ ಸಿಸಿಟಿವಿಯೇ ಮಾಯವಾಗಿದೆ. ಬ್ಯಾಂಕಿನ ಕಟ್ಟಡದ ಹಿಂಭಾಗದ ಕೌಪೌಂಡು ಮತ್ತು ಕಿಟಿಕಿಯು ಶಿಥಿಲವಾಗಿದೆ. ಬ್ಯಾಂಕಿನ ಎಟಿಎಂ ಕೇಂದ್ರಕ್ಕೆ ಕಾವಲುಗಾರನ ಭದ್ರತೆಯ ಜೊತೆ ಬಾಗಿಲು ಇಲ್ಲದಿರುವ ಪರಿಣಾಮ ರಾತ್ರೋರಾತ್ರಿ ಕಳ್ಳನೋರ್ವ ಎಟಿಎಂ ಕೇಂದ್ರದೊಳಗೆ ನುಗ್ಗಿ ಕಳ್ಳತನಕ್ಕೆ ಯತ್ನಿಸಿರುವ ಘಟನೆ ನಡೆದಿದೆ.
ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ಅರಸಾಪುರ ಗ್ರಾಪಂ ವ್ಯಾಪ್ತಿಯ ಬೈರೇನಹಳ್ಳಿ ಗ್ರಾಮದಲ್ಲಿಯೇ ಈಗಾಗಲೇ ಪೇಟ್ರೊಲ್ ಬಂಕ್, ಮಧ್ಯದ ಅಂಗಡಿ, ಬೇಕರಿ, ಕುರಿಮೇಕೆ ಕಳ್ಳತನ, ಸರಣಿ ಚಿಲ್ಲರೇ ಅಂಗಡಿ ಸೇರಿ ಈಗಾಗಲೇ ಹತ್ತಾರು ಕಳ್ಳತನದ ಪ್ರಕರಣ ನಡೆದಿವೆ. ಈಗ ಕೆನರಾ ಬ್ಯಾಂಕಿನ ಎಟಿಎಂ ಸಿಸಿಟಿವಿ ಮತ್ತು ಕೇಬಲ್ ಮುರಿದು ಕಳ್ಳತನಕ್ಕೆ ಯತ್ನಿಸಿದ್ದಾರೆ.
ಗಡಿಭಾಗದ ಬೈರೇನಹಳ್ಳಿ ಗ್ರಾಮದ ಕೆನರಾ ಬ್ಯಾಂಕಿನ ಕಟ್ಟಡವು ಶಿಥಿಲವಾಗಿದೆ. ಕಟ್ಟಡದ ಕೌಪೌಂಡು ಹೊಡೆದು ವರ್ಷಗಳು ಕಳೆದಿವೆ. ಬ್ಯಾಂಕಿನ ಕಿಟಕಿಗಳು ಮುರಿದು ಬಿದ್ದಿವೆ. ಇನ್ನೂ ಬ್ಯಾಂಕಿನ ಸುತ್ತಮುತ್ತಲು ಗಿಡಗಳು ಬೆಳೆದುನಿಂತಿವೆ. ಬ್ಯಾಂಕಿನ ಆವರಣದಲ್ಲಿ ಕಸಕಡ್ಡಿಯಿಂದ ದುರ್ವಾಸನೆ ಬೀಡುತ್ತೀದ್ದರೂ ಸಹ ಗ್ರಾಪಂ ಮತ್ತು ಬ್ಯಾಂಕಿನ ಅಧಿಕಾರಿವರ್ಗ ಮೌನವಹಿಸಿದ್ದಾರೆ.
ಕೆನರಾ ಬ್ಯಾಂಕಿನ ಆವರಣದಲ್ಲಿಯೇ ಕೆನರಾ ಬ್ಯಾಂಕಿನ ಎಟಿಎಂ ಕೇಂದ್ರವಿದೆ. ಎಟಿಎಂ ಕೇಂದ್ರಕ್ಕೆ ಬಾಗಿಲು ಮತ್ತು ಭದ್ರತೆ ಎರಡು ಇಲ್ಲದಾಗಿದೆ. ಬ್ಯಾಂಕಿನ ಹೊರಗಡೆಯ ಸಿಸಿಟಿವಿ ಕೆಟ್ಟುಹೋಗಿದೆ. ಕಳ್ಳತರ ತಂಡವು ಇದನ್ನೇಲ್ಲ ನೋಡಿಯೇ ಬ್ಯಾಂಕಿನ ಹಿಂಬದಿಯಿಂದ ವಿದ್ಯುತ್ ಕೇಬಲ್ ಕತ್ತರಿಸಿ ನಂತರ ಸಿಸಿಟಿವಿಯನ್ನು ಹೊಡೆದು ಕಳ್ಳತನಕ್ಕೆ ಯತ್ನಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೇರೆಯಾಗಿದೆ.
ಎಟಿಎಂ ಕೇಂದ್ರದಲ್ಲಿ ಕಳ್ಳ ಕಳ್ಳತನಕ್ಕೆ ಯಸ್ನಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೇರೆಯಾಗಿದೆ. ಸ್ಥಳಕ್ಕೆ ಕೊರಟಗೆರೆ ಪಿಎಸೈ ನಾಗರಾಜು, ಮಂಜುಳ, ಎಎಸೈ ಗೋವಿಂದನಾಯ್ಕ ನೇತೃತ್ವದ ಪೊಲೀಸರ ತಂಡ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂತರ ತುಮಕೂರು ಜಿಲ್ಲೆಯ ಶ್ವಾನದಳದ ತಂಡದ ಅಧಿಕಾರಿವರ್ಗ ಬೇಟಿ ನೀಡಿದ್ದಾರೆ. ಕೊರಟಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
(Visited 8 times, 1 visits today)