ತುಮಕೂರು:
ಜಿಂಕೆ ಬದುಕಿಗಾಗಿ ಓಡುವ ರೀತಿಯಲ್ಲಿ ವಿದ್ಯಾರ್ಥಿಗಳು ಕಲಿಕೆಯಿಂದೆ ಓಡಬೇಕು. ಜ್ಞಾನವಿಲ್ಲದೆ ನೀವು ಕೌಶಲ್ಯಗಳನ್ನು ಅಧ್ಯಯನ ಮಾಡಲು ಸಾಧ್ಯವಿಲ್ಲ. ಜ್ಞಾನ ವೃತ್ತಿಗೆ ಅಗತ್ಯ. ಮುಂದಿನ ನಿಮ್ಮ ಭವಿಷ್ಯಕ್ಕಾಗಿ ನೀವು ಮುನ್ನುಗ್ಗುವುದನ್ನು ಕಲಿಯಬೇಕು ಎಂದು ಸಾಹೇ ವಿಶ್ವವಿದ್ಯಾಲಯದ ರಿಜಿಸ್ಟರ್ ಡಾ.ಎಂ.ಝಡ್.ಕುರಿಯನ್‍ಅವರು ಕರೆ ನೀಡಿದರು.
ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪಿಜಿ ಸಭಾಂಗಣದಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಮೂನಿಕೇಷನ್ ಇಂಜಿನಿಯರಿಂಗ್ ವಿಭಾಗ ಏರ್ಪಡಿಸಿದ್ದ ‘ಸಾಮಥ್ರ್ಯ 2022’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸ್ಪರ್ಧೆಗಳಲ್ಲಿ ಭಾಗವಹಿಸುವುದು ವಿದ್ಯಾರ್ಥಿಗಳಿಗೆ ಬಹಳ ಮುಖ್ಯ. ನಿಮಗೆ ಜ್ಞಾನವಿಲ್ಲದೆ ಕೌಶಲ್ಯಗಳನ್ನು ಅಧ್ಯಯನ ಮಾಡಲು ಸಾಧ್ಯವಿಲ್ಲ. ಸತತ ಸಂಶೋಧಕ ಗುಣದಿಂದ ಜ್ಞಾನ ಪಡೆದುಕೊಂಡಾಗ ವೃತ್ತಿಗೆ ಅಗತ್ಯವಾಗುತ್ತದೆ. ಅಲ್ಲದೆ ಮುಂದಿನ ನಿಮ್ಮ ಭವಿಷ್ಯಕ್ಕೆ ಸಹಕಾರಿಯಾಗುತ್ತದೆ ಎಂದು ಡಾ.ಕುರಿಯನ್ ಹೇಳಿದರು.
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಸನ್ಮಾನ ಸ್ವೀಕರಿಸಿ ಮಾತನಾಡಿದ
ಬೆಂಗಳೂರಿನ ಐಇಇಇ ಘಟಕದ ಸಂಸ್ಥಾಪಕ ಅಧ್ಯಕ್ಷರು ಹಾಗೂ ಮೈಸೂರಿನ ಗೀತ ಶಿಶು ಶಿಕ್ಷಣ ಸಂಘ ತಾಂತ್ರಿಕ ಕಾಲೇಜಿನ ಟೆಲಿ ಕಮ್ಮೂನಿಕೇಷನ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರು ಆದ ಡಾ.ಬಿ.ಡಿ.ಪರಮೇಶ್ವರಚಾರಿ ಅವರು,
ವಿದ್ಯಾರ್ಥಿಗಳು ಸ್ಪರ್ಥೆಗಳಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಸಾಮಾಥ್ರ್ಯವನ್ನು ಒರೆಗಲ್ಲಿಗೆ ಅಚ್ಚಬೇಕು. ಕ್ರಯಾತ್ಮಕ ಮತ್ತು ಸಂಶೋಧನಾತ್ಮಕ ಯೊಜನೆಗಳ ಮೂಲಕ ತಮ್ಮ ಪ್ರತಿಭೆ ಪ್ರದರ್ಶನಕ್ಕ ಮುಂದಾಗಬೇಕು ಎಂದು ಕರೆ ನೀಡಿದರು.
ಸಮಾಜದಲ್ಲಿ ಕಂಪ್ಯೂಟರ್ ವಿಜ್ಞಾನ ಮಾತ್ರವಲ್ಲ. ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ ಇಂಜಿನಿಯರಿಂಗ್ ಕ್ಷೇತ್ರ ಕೂಡ ಸಮಾಜದಲ್ಲಿನ ವಿವಿಧ ಸ್ಥರಗಳಲ್ಲಿ ಬೆಸದುಕೊಂಡಿದೆ. ಆ ಎಲ್ಲ ಕಾರ್ಯಕ್ಷೇತ್ರಗಳಲ್ಲೂ ನಿಮ್ಮ ಪ್ರತಿಭೆಯನ್ನು ಪ್ರದರ್ಶನ ಮಾಡಲು ಹೆಚ್ಚಿನ ಗಮನಹರಿಸಿ ಎಂದು ವಿದ್ಯಾರ್ಥಿಗಳಿಗೆ ಅವರು ತಿಳಿ ಹೇಳಿದರು.
ಎಲೆಕ್ಟ್ರಾನಿಕ್ಸ್ ಮತ್ತು ಕಮ್ಮೂನಿಕೇಷನ್ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನಗಳ ಅವಕಾಶಗಳು ಮತ್ತು ಬಳಕೆ ಕುರಿತು ಮಾಹಿತಿಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ಸಂವಾದ ಮತ್ತು ಪ್ರಶ್ನಾವಳಿ ಮೂಲಕ ವಿದ್ಯಾರ್ಥಿಗಳ ಗುಣಮಟ್ಟ ಪರೀಕ್ಷೆ ಮಾಡಿ, ಅವರಿಗೆ ಬಹುಮಾನಗಳನ್ನು ನೀಡಿ, ಕಲಿಕೆ ಪ್ರೇರೇಪಿಸಿದರು.
ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಎಂ.ಎಸ್. ರವಿಪ್ರಕಾಶ್ ಮಾತನಾಡಿ ಕಲಿಕೆ ಬಹಳ ಮುಖ್ಯ. ಹೆಚ್ಚು ವೃತ್ತಿಪರ ಚಟುವಟಿಕೆಗಳ ಮೇಲೆ ಗಮನ ಹರಿಸಬೇಕು. ಜೊತೆಗೆ ವೃತ್ತಿ ಸಮಾಜ ಆಧಾರಿತ ಚಟುವಟಿಕೆಗಳ ಮೇಲೆ ಕೇಂದ್ರೀಕರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಡೀನ್ ಡಾ.ಎಂ.ಸಿದ್ದಪ್ಪ, ಸಹಾಯಕ ಪ್ರಾಧ್ಯಾಪಕರಾದ ಎಂ.ಎನ್. ಶಾರದಾ ಗುಪ್ತ, ಟಿ.ಎಸ್. ಜಯಂತ್, ಆರ್.ಎಚ್.ಭೂಮಿಕಾ, ಕಾರ್ತಿಕ್ ಸಿ.ಡಿ ಸೇರಿದಂತೆ ಕಾಲೇಜಿನ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡರು.
(Visited 16 times, 1 visits today)