ತುಮಕೂರು:

????????????????????????????????????

ನಗರದ ಎನ್.ಆರ್ ಕಾಲೋನಿ ಶೈಕ್ಷಣೀಕ ಭವನದಲ್ಲಿ ತುಮಕೂರು ನಗರ ಪೋಲಿಸ್ ಠಾಣೆಯಿಂದ ಜನಸಂಪರ್ಕ ಸಭೆ ನಡೆಯಿತು.
ಈ ಸಭೆಯನ್ನು ಉದ್ದೇಶಿ ತುಮಕೂರು ಪೋಲಿಸ್ ಉಪ ಅದೀಕ್ಷಕರಾದ ಶ್ರೀನಿವಾಸ್ ರವರು ಮಾತನಾಡಿ ಜನರ ಸಮಸ್ಯೆಗಳನ್ನು ಬಗೆಹರಸಿಲು ಪೋಲಿಸ್ ಇಲಾಖೆ ಸದಾ ಸಿದ್ದವಾಗಿದೆ, ಯಾವುದೇ ಅಶುಬ್ದ ಘಟನೆಗಳಿಗೆ ಅವಕಾಶ ಕೊಡದೇ ಸಾರ್ವಜನಿಕರು ಇಲಾಖೆಯ ಸಹಭಾಗಿತ್ವದಿಂದ ಕ್ರೈಮ್ ನಡೆಯದಂತೆ ನೋಡಿಕೊಳ್ಳಲು ಸಹಕರಿಸಬೇಕು ಮತ್ತು ಎನ್.ಆರ್ ಕಾಲೋನಿ, ಉರಳಿತೋಟ, ನಿರ್ವಾಣಿಲೇ ಔಟ್, ಅಂಬೇಡ್ಕರ್ ನಗರ, ಆದರ್ಶನಗರ. ಶಾರದಾ ದೇವಿ ನಗರ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಇಲ್ಲಿನ ನಾಗರೀಕರು. ಪೋಷಕರು ತುರ್ತು ಸಂಧರ್ಬದಲ್ಲಿ 112 ಗೆ ಎಮೆರ್ಜೆನ್ಸಿ ಕರೆ ಮಾಡಿ ದೂರು ಸಲ್ಲಿಸಬಹುದು ಈ ವ್ಯಾಪ್ತಿಯಲ್ಲಿ ಗಾಂಜಾ. ಮಧ್ಯಪಾನ, ಸಲ್ಯೂಷನ್ ಇತರೆ ವಹಿವಾಟುಗಳು ಗಮನಿಸಿದಲ್ಲಿ ತಕ್ಷಣಾ ಮಾಹಿತಿ ನೀಡಿ ಭವಿಷ್ಯದಲ್ಲಿ ಸುಂಧರ ವಾತವರಣ ನಿರ್ಮಿಸಲು ನಾಗರೀಕರ ಸಹಭಾಗಿತ್ವ ಮತ್ತು ಸಹಕಾರವು ಮುಖ್ಯ. ಕಾಲೋನಿಗಳಲ್ಲಿ ಪ್ರತಿ ದಿನ ಬೆಳಗ್ಗೆ ಮತ್ತು ರಾತ್ರಿ ಭೀಟ್ ಪೋಲಿಸ್ ಕಡ್ಡಾಯವಾಗಿ ಬರುತ್ತಿದ್ದು ಕಾನೂನು ಬಾಹೀರ ಘಟನೆಗಳು ಕಂಡಲ್ಲಿ ಇಲಾಖೆ ಗಮನಕ್ಕೆ ತರಬೇಕು ಹಾಗೂ ಎನ್,ಆರ್ ಕಾಲೋನಿಯಲ್ಲಿ ಸ್ವಚ್ಚತೆ ಹಾಗೂ ಶಾಲೆಯಿಂದ ಹೊರಗುಳಿದಿರುವ ಮಕ್ಕಳ ಬಗ್ಗೆ ಬಹಳ ಎಚ್ಚರವಹಿಸಬೇಕು. ಮಕ್ಕಳ ದಿನನಿತ್ಯ ಚಲನವಲನಗಳನ್ನು ಪೋಷಕರು ಗಮನಿಸಬೇಕಿದೆ. ಇಲ್ಲಿನ ಮಕ್ಕಳ ಶೈಕ್ಷಣೀಕ ಬೆಳವಣಿಗೆಗೆ ಪೋಲಿಸ್ ಇಲಾಖೆಯಿಂದ ಬೇಕಾಗುವ ಎಲ್ಲಾ ಸಹಕಾರವನ್ನು ನೀಡಲು ಸಿದ್ದವಿದೆ ಇವತ್ತಿನ ಸ್ಪರ್ಧಾತ್ಮಕ ಜಗತ್ತಿಗೆ ಯುವಕರು ಅತೀ ಹೆಚ್ಚು ತೊಡಗಿಸಿಕೊಂಡು ಉತ್ತಮ ಶಿಕ್ಷಣದಿಂದ ಉದ್ಯೋಗ ಪಡೆಯುವಂತವರಾಗಬೇಕು. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರು ಇಡೀ ದೇಶಕಂಡ ಮಹಾನ್ ವ್ಯಕ್ತಿಯಾಗಲು ಅವರು ಪಟ್ಟ ಶ್ರಮವೇ ಸಾಕ್ಷಿ. ಅವರ ಆದರ್ಶಗಳನ್ನು ಈಗೀನ ಯುವ ಪೀಳಿಗೆ ಅಳವಡಿಸಿಕೊಳ್ಳಬೇಕು ಎಂದರು.
ಜನಸಂಪರ್ಕ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿ ಮಾತನಾಡಿದ ಕೊಳಗೇರಿ ಸಮಿತಿ ಅರುಣ್ ಎನ್,ಆರ್ ಕಾಲೋನಿ ಕೋತಿತೋಪು ಅಂದರೆ ವ್ಯವಸ್ಥೆಗೆ ಕೆಟ್ಟ ಸಂದೇಶ ಹರಡುವ ಘಟನೆಗಳು ಸಂಬವಿಸದಂತೆ ನೋಡುಕೊಳ್ಳುವುದು ಇಲ್ಲಿನ ನಾಗರೀಕರ ಕರ್ತವ್ಯ. ಕ್ಷುಲ್ಲಕ ಕಾರಣಕ್ಕೆ ಅನಾಗರೀಕತೆಯುಳ್ಳ ಯುವಕರು ನಗರದ ಹೊರಭಾಗದಲ್ಲಿ ನಡೆಯುವ ಘಟನೆಗೆ ಇಡೀ ಸಮುದಾಯದ ಜನರ ಮೇಲೆ ಕೆಟ್ಟ ಹೆಸರು ಬರುವಂತಾಗುತ್ತಿದೆ. ಘಟನೆಗಳಿಗೆ ಕಾರಣ ಹುಡಿಕುವುದು ಬಹಳ ಮುಖ್ಯ ಕಾಲೋನಿಗಳಲ್ಲಿ ಸೆಕೆಂಡ್ಸ್ ಲಿಕ್ಕರ್ ಸಪ್ಲೈ ಬಗ್ಗೆ ಗಮನಹರಿಸಬೇಕು ಗಂಜಾ ಸಲ್ಯೂಷನ್ ಮಾರಾಟಗಳ ಸುತ್ತ ಇಲಾಖೆ ಹದ್ದಿನ ಕಣ್ಣಿಟ್ಟರೇ ಕ್ರೈಂಗಳ ಪ್ರಮಾಣ ಕಡಿಮೆ ಮಾಡಬಹುದು. ಇಲ್ಲಿರುವ ಯುವಕರು ಮತ್ತು ಮಕ್ಕಳಿಗೆ ಕ್ರೀಡೆ, ಕೌಶಲ್ಯಾಧಾರಿತ ತರಬೇತಿ ಪಡೆಯಲು ಆಸಕ್ತಿ ಇದೆ. ಜಿಲ್ಲಾಡಳಿತ ಹಾಗೂ ಮಹಾನಗರಪಾಲಿಕೆ ತರಬೇತಿಗೆ ವಾತವರಣ ಸೃಷ್ಟಿಸಲು ಮುಂದಾದರೆ ಭವಿಷ್ಯದಲ್ಲಿ ಉತ್ತಮ ವಾತವರಣಕ್ಕೆ ಈ ಸಭೆಗಳು ಸಾಕ್ಷಿಯಾಗಬಹುದು. ಕಾಲೋನಿಗಳಲ್ಲಿ ಪಾಲಿಕೆ ಹಣ ಬಳಸಿ ಕಟ್ಟಿರುವ ಸಮುದಾಯ ಭವನಗಳು ಪಾಳು ಬೀಳುವ ಮುನ್ನ ಅಲ್ಲಿಯೇ ವಿಶೇಷ ತರಗತಿಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕವಾಗುವ ತರಬೇತಿ ನೀಡಲು ಪಾಲಿಕೆಗೆ ಪೋಲಿಸ್ ಇಲಾಖೆ ಸೂಚಿಸಿದರೆ ಇಲ್ಲಿರುವ ಜನರ ಅಭಿವೃದ್ಧಿ ಸಾಧ್ಯವೆಂದರು.
ಸಭೆಯಲ್ಲಿ ನಗರ ವೃತ್ತ ನೀರೀಕ್ಷರಾದ ಮುನಿರಾಜ್, ನಗರ ಪೋಲಿಸ್ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ನವೀನ್‍ಕುಮಾರ್, ಪೋಲಿಸ್ ಇಲಾಖೆಯ ಅಧಿಕಾರಿಗಳಾದ ಗೌರಮ್ಮ, ಮತ್ತು ಸಿಬ್ಬಂಧಿವರ್ಗದವರು ಹಾಗೂ 20 ನೇ ವಾರ್ಡ್‍ನ ಪಾಲಿಕೆ ಸದಸ್ಯರಾದ ಶ್ರೀನಿವಾಸ್, ಮತ್ತು ಎನ್,ಆರ್ ಕಾಲೋನಿವ ಮತ್ತು ನಿರ್ವಾಣಿಲೇಔಟ್ ಮುಖಂಡರಾದ ವಾಲೇಚಂದ್ರಯ್ಯ, ಲಕ್ಷ್ಮೀಪುತ್ರ, ಗಂಗಾದರ್, ದಯಾನಂದ್, ರಾಜಣ್ಣ, ಕಿರಣ್‍ಕುಮಾರ್, ಮೋಹನ್, ರಾಮಯ್ಯ, ಚಂದ್ರ, ಟೈಲರ್ ಜಗದೀಶ್, ಮೋಹನ್‍ಟಿ.ಆರ್ ಮತ್ತು ಅಂಬೇಡ್ಕರ್ ನಗರದ ಗೋಪಾಲಯ್ಯ ಮುಂತಾದವರು ಪಾಲ್ಗೊಂಡಿದ್ದರು.

(Visited 5 times, 1 visits today)