ಗುಬ್ಬಿ:


ತಾಲೂಕಿನ ನಿಟ್ಟೂರಿನಲ್ಲಿ ಹಾದು ಹೋಗಿರುವ ಎನ್.ಎಚ್ 206 ನಲ್ಲಿ ಅಂಡರ್ ಪಾಸ್ ನೀಡುವಂತೆ ಏನ್ ಎಚ್ 206 ಅಧಿಕಾರಿಗಳ ವಿರುದ್ದ ಗ್ರಾಮದ ಸಾರ್ವಜನಿಕರು ರೈತರು ವ್ಯಾಪಾರಸ್ಥರು ಹಾಗೂ ಈ ಮುಖಂಡರುಗಳು ರಸ್ತೆ ತಡೆದು ಬೃಹತ್ ಪ್ರತಿಭಟನೆ ಮಾಡಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಗ್ರಾಮ ಪಂಚಾಯತಿ ಸದಸ್ಯ ಏನ್.ಸಿ ಗಿರೀಶ್ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಜನರು ಈ ಭಾಗದಲ್ಲಿ ದಿನನಿತ್ಯ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಓಡಾಟ ಮಾಡುತ್ತಾರೆ ಆದರೆ ಇಲ್ಲಿ ಅಂಡರ್ ಪಾಸ್ ಇಟ್ಟಿಲ್ಲ ಹಲವು ಬಾರಿ ಮನವಿ ಮಾಡಿದರು ಅಧಿಕಾರಿಗಳು ಇದರ ಬಗ್ಗೆ ತಲೆ ಕೆಡಿಸಿ ಕೊಂಡಿಲ್ಲ ಇಡೀ ಊರನ್ನೇ ಎರಡು ಭಾಗ ಮಾಡಿದ್ದಾರೆ ಪ್ರತಿನಿತ್ಯ ರೈತರು ದನಕರು, ಹಸು, ಒಡೆದು ಕೊಂಡು ತೋಟಗಳಿಗೆ ಹೋಗಬೇಕು ಅಂದರೆ ಅರ್ಧ ಕಿ. ಮೀ ಗೂ ಹೆಚ್ಚು ದೂರ ಸಾಗಬೇಕಿದೆ ಇದರಿಂದ ಸಾಕಷ್ಟು ಸಮಸ್ಯೆ ಇದೆ ಇದನ್ನು ಕೊಡಲೇ ಬಗೆ ಹರಿಸಬೇಕು ಇಲ್ಲ ದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಶೇಖರ್ ಬಾಬು ಮಾತನಾಡಿ ಈ ಭಾಗದಲ್ಲಿ
ಆಸ್ಪತ್ರೆ, ಗ್ರಾಮ ಪಂಚಾಯಿತಿ, ಸೇರಿದಂತೆ ಪ್ರತಿಯೊಂದು ಕೆಲಸಕ್ಕೂ ಸುಮಾರು ಎರಡು ಕಿಲೋಮೀಟರ್ ದೂರ ಹೋಗಿಯೇ ಬರಬೇಕಾಗಿದೆ ಈ ಸಮಸ್ಯೆ ಬಗೆ ಅರಿಯಬೇಕೆಂದರೆ ಇಲ್ಲಿಗೆ ಅಂಡರ್ಪಾಸ್ ನೀಡಲೇಬೇಕು ಎಂದು ಒತ್ತಾಯಿಸಿದ್ದರು. ಬಿಜೆಪಿ ಮುಖಂಡ ಎಸ್ ಡಿ ದಿಲೀಪ್ ಕುಮಾರ್ ಈ ಭಾಗದ ಜನರಿಗೆ ಇಲ್ಲಿ ಓಡಾಟ ಮಾಡಲು ಸಾಕಷ್ಟು ಸಮಸ್ಯೆ ಆಗಿದೆ ಕೊಡಲೇ ಜನಪ್ರತಿನನಿಧಿಗಳು, ಕೇಂದ್ರ ಸರಕಾರದ ಅಧಿಕಾರಿಗಳ ಜೊತೆಗೆ ಚರ್ಚೆ ಮಾಡಿ ಅಂಡರ್ ಪಾಸ್ ಮಾಡಲೇ ಬೇಕಾಗಿದೆ ಕನಿಷ್ಠ ಸ್ಮಶಾನಕ್ಕೆ ತೆರಳಬೇಕು ಅಂದರು ಸಹ 2 ಕೆ.ಮಿ ಬಳಸಿಕೊಂಡು ತೆಗೆದು ಕೊಂಡು ಹೋಗುವ ಸಂಕಷ್ಟಕ್ಕೆ ಈ ಭಾಗದ ಜನರು ಸಿಲುಕಿದ್ದಾರೆ ಕೊಡಲೇ ಅಧಿಕಾರಿಗಳು ಇದರ ಬಗ್ಗೆ ಕ್ರಮ ಕೈ ಗೊಂಡು ಇಲ್ಲಿಗೆ ಅಂಡರ್ ಪಾಸ್ ಮಾಡಲೇ ಬೇಕು ಎಂದು ಅಗ್ರಹ ಮಾಡಿದರು.
ಸ್ಥಳಕ್ಕೆ ಅಸಿಸ್ಟೆಂಟ್ ಕಮಿಷನರ್ ಅಜೇಯ್ ಆಗಮಿಸಿ ಇಲ್ಲಿನ ಜನರ ಸಮಸ್ಯೆ ಬಗೆ ಹರಿಸಲು ಪ್ರಮಾಣಿಕ ಪ್ರಯತ್ನ ಮಾಡುತ್ತೇವೆ ಕೊಡಲೇ ಕೇಂದ್ರ ಸರ್ಕಾರದ ಏನ್ ಎಚ್ 206 ಅಧಿಕಾರಿಗಳಿಗೆ ಮಾಹಿತಿ ನೀಡಿ ಕ್ರಮ ಕೈ ಗೊಳ್ಳುವ ಭರವಸೆ ನೀಡಿ ಸ್ಥಳ ಪರಿಶೀಲನೆ ಮಾಡಿದರು. ಪ್ರತಿಭಟನೆಯಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಪಂಚಾಕ್ಷರಿ, ಜಿಲ್ಲಾ ಸಹಕಾರಿ ಬ್ಯಾಂಕ್ ನ ನಿರ್ದೇಶಕ ಹಾರನಹಳ್ಳಿ ಪ್ರಭಾಕರ್, ದಲಿತ ಸಂಘರ್ಷ ಸಮಿತಿಯ ನರಸಿಂಹ ಮೂರ್ತಿ, ಗ್ರಾಮ ಪಂಚಾಯತಿ ಉಪಾಧ್ಯಕ್ಷ ನರಸೇಗೌಡ, ಸದಸ್ಯರಾದ ಮಂಗಳಮ್ಮ ಮುಖಂಡರಾದ ರಾಮಸ್ವಾಮಿ, ಯೋಗೀಶ್,ಶಿವಣ್ಣ, ನಿಟ್ಟೂರು ರಂಗ ಸ್ವಾಮಿ,ಸೇರಿದಂತೆ ಇನ್ನಿತರರು ಹಾಜರಿದ್ದರು.

(Visited 12 times, 1 visits today)