ತುಮಕೂರು:
ಮಾಲಿನ್ಯ ನಿಂತ್ರಣ ಮಾಡಿ ಸುಸ್ಥಿರ ಪರಿಸರ ವ್ಯವಸ್ತೆಯನ್ನು ನಿರ್ಮಿಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದು ಶಾಸಕ ರಾಜೇಶ್‍ಗೌಡ ಅಭಿಪ್ರಾಯ ಪಟ್ಟರು.
ತುಮಕೂರು ವಿಶ್ವವಿದ್ಯಾನಿಲಯ ಪರಿಸರ ವಿಜ್ಞಾನ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಹಾಗೂ ಸಿರಾದ ಸ್ನಾತಕ್ಕೋತ್ತರ ಅಧ್ಯಯನ ಕೇಂದ್ರ ಸಿರಾ ಕ್ಯಾಂಪಸ್‍ನಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನ 2022 ಅನ್ನು ಗಿಡನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಪರಿಸರದ ಅವನತಿಗೆ ಕಾರಣವಾಗುವ ಮಾನವನ ಚಟುವಟಿಕೆಗಳು ಮಾಲಿನ್ಯ, ದೋಷಯುಕ್ತ ಪರಿಸರ ನೀತಿಗಳು, ರಾಸಾಯನಿಕಗಳು, ಹಸಿರುಮನೆ ಅನಿಲಗಳು, ಜಾಗತಿಕ ತಾಪಮಾನ ಏರಿಕೆ, ಓಝೋನ್ ಸವಕಳಿ ಇವೆಲ್ಲವೂ ಪರಿಸರದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಇದಲ್ಲದೆ ನೈಸರ್ಗಿಕ ಸಂಪನ್ಮೂಲಗಳ ಅತಿಯಾದ ಬಳಕೆಯು ಮನುಷ್ಯನಿಗೆ ಹಾನಿಯಂಟುಮಾಡಿ, ಜೀವಂತ ಗಾಳಿಯು ಅವಶ್ಯಕತೆಯನ್ನು ಕಲುಶಿತಗೊಳಿಸಿ ಉಸಿರಾಡಲು ಬಾಟಲಿಯ ಆಮ್ಲಜನಕವನ್ನು ಬಳಸಬೇಕಾಗುತ್ತದೆ. ಪರಿಸರವನ್ನು ರಕ್ಷಿಸುವುದು ಅಷ್ಟು ಸುಲಭವಲ್ಲ, ಇದು ಸಾಕಷ್ಟು ಶ್ರಮ ತೆಗೆದುಕೊಳ್ಳುತ್ತದೆ. ಮಾಲಿನ್ಯ ನಿಯಂತ್ರಣಕ್ಕೆ ಜನರು ಕಠಿಣ ಕಾನೂನುಗಳನ್ನು ಅನುಸರಿಸಬೇಕು. ನೀರಿನ ವ್ಯರ್ಥವನ್ನು ಕಡಿಮೆ ಮಾಡುವ ಮೂಲಕ ನೀರನ್ನು ಉಳಿಸಿ. ಶಕ್ತಿ ಸಂರಕ್ಷಣೆ ಮತ್ತು ಕಡಿಮೆ ವಿದ್ಯುತ್ ಬಳಕೆ, ನಮ್ಮ ಪರಿಸರಕ್ಕೆ ಹಾನಿಯಾಗದ ತಂತ್ರಜ್ನಾನದ ಅವಿಷ್ಕರಿಸಬೇಕಿದೆ.
ನಮ್ಮ ಪರಿಸರವನ್ನು ನಾಶಪಡಿಸುವ ಅಂಶಗಳ ಬಗ್ಗೆ ತಿಳಿದುಕೊಳ್ಳಲು ಜನರು ಮತ್ತು ಅನೇಕ ಸಂಸ್ಥೆಗಳು ಈ ದಿನವನ್ನು ಆಚರಿಸುತ್ತವೆ. ಪರಿಸರ ದಿನದ ಉದ್ದೇಶ ಪ್ರಪಂಚದಾದ್ಯಂತ ಪರಿಸರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದಾಗಿದೆ ಎಂದು ತಿಳಿಸಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಕಾರ್ಯಕ್ರಮ ಸಂಚಾಲಕರಾದ ಸಿಂಡಿಕೇಟ್ ಸಧಸ್ಯ ಶ್ರೀನಿವಾಸ್ ಪ್ರಸಾದ್ ಶಿರಾ ಕ್ಯಾಂಪಸ್ ಹೊಸದಾಗಿ ನಿರ್ಮಾಣ ಗೊಂಡಿರುವುದರಿಂದ ಅನೇಕ ಸವಾಲುಗಳನ್ನು ಎದುರಿಸಿ ಸಮಗ್ರವಾಗಿ ಅಭಿವೃದ್ದಿಯಾಗಬೇಕಿದೆ. ಶಿರಾದ ಈ ಹೊಸ ಕ್ಯಾಂಪಸ್ ಗೆ ಪರಿಸರ ಸಂರಕ್ಷಣೆಯ ಮೂಲಕ ಕಾಯಕಲ್ಪವನ್ನು ನೀಡಲಾಗುತ್ತಿದೆ. ಬರ ಪೀಡಿತ ಪ್ರದೇಶವಾದ ಶಿರಾಕ್ಕೆ ಉನ್ನತ ಶಿಕ್ಷಣದ ಶ್ರೇಷ್ಟತಾ ಕೇಂದ್ರ ಬಂದಿರುವುದು ಹೆಮ್ಮೆಯ ವಿಚಾರ. ಈಗಾಗಲೇ ಸ್ನಾತಕ್ಕೋತ್ತರ ಗಣಿತ ತರಗತಿಗಳು ಆರಂಭವಾಗಿದೆ, ಮುಂದಿನ ದಿನಗಳಲ್ಲಿ ಸ್ಪರ್ಧಾತ್ಮಕ ತರಬೇತಿಯ ಕೇಂದ್ರಗಳನ್ನು ಗ್ರಾಮೀಣ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ತರಲಾಗುತ್ತದೆ. ಪರಿಸರ ಸಂರಕ್ಷಣೆಯಿಂದ ಸಿರಾವನ್ನು ಬರಮುಕ್ತನಾಡಾಗಿಸುವ ಪಣತೊಡಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ತುಮಕೂರು ವಿಶ್ವವಿದ್ಯಾನಿಲಯದ ಪ್ರಭಾರ ಕುಲಪತಿ ಪ್ರೊ. ಕೇಶವ ಮಾತನಾಡಿ ಭೂಮಿ, ಜಲ ಮತ್ತು ವಾಯು ಪರಿಸರದ ರಕ್ಷಣೆಯಲ್ಲಿ ಪರಿಸರ ವಾದಿಗಳ ಕೊಡುಗೆ ಅಪಾರವಾಗಿದೆ. ಪರಿಸರ ಕಲುಶಿತಗೊಳ್ಳದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ. ನಾವು ಪರಿಸರವನ್ನು ಕಾಪಾಡಿದರೆ ಅದು ನಮ್ಮನ್ನು ಕಾಪಾಡುತ್ತದೆ ಪರಿಸರದಲ್ಲಾಗುವ ವೈಪರಿತ್ಯಗಳಿಗೆ ಮನುಷ್ಯನೇ ಕಾರಣ. ಪರಿಸರ ಕಲುಶಿಕಗೋಳ್ಳುವುದಕ್ಕಿಂತ ಮುಂಚಯೇ ಕ್ರಮ ಕೈಗೊಳ್ಳುವುದು ಮುಖ್ಯ ಎಂದು ಅಭಿಪ್ರಾಯ ಪಟ್ಟರು.
ಕಾರ್ಯಮದಲ್ಲಿ ಹೊಸದಾಗಿ ನಿರ್ಮಾಣಗೊಂಡಿರು ಸಿರಾ ಸ್ನಾತಕ್ಕೋತ್ತರ ಕ್ಯಾಂಪಸ್ ಎದುರುಗಡೆ ಗಿಡಗಳನ್ನು ನೆಡಲಾಯಿತು. ಈ ವೇಳೆ ಶಾಸಕ ಸಿ. ಎಂ. ರಾಜೇಶ್‍ಗೌಡ, ತುಮಕೂರು ವಿಶ್ವವಿದ್ಯಾನಿಲಯದ ಪ್ರಭಾರ ಕುಲಪತಿ ಪ್ರೊ. ಕೇಶವ, ಕರ್ನಾಟಕ ತೆಂಗು ಮತ್ತು ನಾರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಬಿ. ಕೆ. ಮಂಜುನಾಥ್, ರೇಶ್ಮೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಎಸ್. ಆರ್. ಗೌಡ, ಶಿರಾ ತಹಶೀಲ್ದಾರ್ ಮಮತ ಎಂ, ಶಿರಾ ಸ್ನಾತಕ್ಕೋತ್ತರ ಅಧ್ಯಯನ ಕೇಂದ್ರದ ಸಂಯೋಜಕರಾದ ಹೆಚ್. ಎಸ್. ಬೋರೇಗೌಡ ಉಪಸ್ಥಿತರಿದ್ದರು.