ತುರುವೇಕೆರೆ:
ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪನವರ ಕಾಲದಲ್ಲಿ ನಡೆದಿರುವ ಅಪೂರ್ಣ ಹಾಗೂ ಕಳಪೆ ಕಾಮಗಾರಿಗಳು ಅವರ ಕಿಕ್ ಬ್ಯಾಕ್ ಹಾಗೂ ಕಮಿಷನ್ ಸಂಸ್ಕೃತಿಯನ್ನು ಸಾರಿ ಹೇಳುತ್ತಿವೆ ನನಗೆ ಗೊತ್ತಿರುವುದು ಅಭಿವೃದ್ಧಿ ಒಂದು ಎಂದು ಶಾಸಕ ಮಸಾಲ ಜಯರಾಮ್ ಎಂ.ಟಿ.ಕೃಷ್ಣಪ್ಪನ ವಿರುದ್ದ ವ್ಯಂಗ್ಯವಾಡಿದರು.
ತಾಲ್ಲೂಕಿನ ಮಾಯಸಂದ್ರ ಹೋಬಳಿಯ ತುಯಲಹಳ್ಳಿ ಗ್ರಾಮದ ಹತ್ತಿರ ಸಣ್ಣ ನೀರಾವರಿ ಇಲಾಖೆಯ 1.60ಕೋಟಿ ವೆಚ್ಚದ ಚೆಕ್ ಡ್ಯಾಮ್ ಹಾಗೂ ಬ್ರಿಡ್ಜ್ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ತಾಲ್ಲೂಕಿನ ಸಮಗ್ರ ಅಭಿವೃದ್ಧಿ ಆಗುತ್ತಿರುವುದನ್ನು ಸಹಿಸದೆ ಮಾಜಿ ಶಾಸಕರು ಕಿಕ್ ಬ್ಯಾಕ್ ಬಗ್ಗೆ ಮಾತನಾಡುತ್ತಾರೆ
ನನಗೆ ಅಂತಹ ಸಂಸ್ಕೃತಿಗಳ ಅರಿವಲ್ಲ ಕಾರಣ ನನ್ನ ಕಾಲದ ಅಭಿವೃದ್ಧಿ ಕೆಲಸಗಳು ಎಲ್ಲೂ ಅರ್ಧಕ್ಕೆ ನಿಂತಿಲ್ಲ ನಿರಂತರವಾಗಿ ನಡೆಯುತ್ತಿವೆ ಅವರ ಕಾಲದಲ್ಲಾದ ಪಟ್ಟಣದ ಯುಜಿಡಿ ಅಧ್ವಾನ ಹಾಗೂ ವಾಣಿಜ್ಯ ಸಂಕೀರ್ಣ ಅಪೂರ್ಣ ಕಾಮಗಾರಿ ಹಾಗೂ ಏತನೀರಾವರಿ ಕಳಪೆ ಕಾಮಗಾರಿಗಳು ಅವರ ಕಿಕ್ ಸಂಸ್ಕೃತಿ ಬಗ್ಗೆ ಹೇಳುತ್ತಿವೆ ನಮ್ಮದೇನಿದ್ದರು ಫ್ರೆಂಟ್ ಬ್ಯಾಕ್ ಜನರ ಮುಂದೆ ನನ್ನ ಅಭಿವೃದ್ಧಿ ಕೆಲಸಗಳಿವೆ. ಇವುಗಳು ಕಿಕ್ ಬ್ಯಾಕ್ ಅಲ್ಲ ಕ್ವಿಕ್ ವರ್ಕ್. ಹಿಂದೆ ಕಿಕ್ ಬ್ಯಾಕ್ ಪಡೆಯುತ್ತಿದ್ದವರು ಅದರ ಬಗ್ಗೆ ಅನುಭವ ಇರುವವರು ಮಾತನಾಡುತ್ತಾರೆ ತುರುವೇಕೆರೆ ಕ್ಷೇತ್ರದ ದಬ್ಬೇಘಟ್ಟ ಭಾಗದ ಜನರನ್ನು ಓಟ್ ಬ್ಯಾಂಕ್ ಮಾಡಿಕೊಂಡ ಕೃಷ್ಣಪ್ಪ ಹದಿನೈದಿಪ್ಪತ್ತು ವರ್ಷಗಳಿಂದ ರಸ್ತೆ ಅಭಿವೃದ್ಧಿ ಮಾಡದೆ ಅವರನ್ನು ಕೇವಲ ಓಟಿಗಾಗಿ ಬಳಸಿಕೊಂಡರು ನಾನು ಅಭಿವೃದ್ಧಿ ದೃಷ್ಟಿಯಿಂದ ಕೆಲಸ ಮಾಡುತ್ತಿದ್ದೇನೆ ನನಗೆ ಕೆಲಸದ ವಿಚಾರದಲ್ಲಿ, ಅಭಿವೃದ್ಧಿ ವಿಚಾರದಲ್ಲಿ ಪಕ್ಷ, ರಾಜಕಾರಣ ನಗಣ್ಯ ಎಂದರು.
ತುರುವೇಕೆರೆ ವಿಧಾನಸಭಾ ಕ್ಷೇತ್ರಕ್ಕೆ ಶಾಸಕನಾಗಿ ಬಂದಮೇಲೆ ತಾಲೂಕಿನ ಕಟ್ಟ ಕಡೆಯ ಕೆರೆಕಟ್ಟೆಗಳನ್ನು ಹೇಮಾವತಿ ನೀರಿನಿಂದ ತುಂಬಿಸಿ ಜನಗಳಿಗೆ ಅನುಕೂಲ ಮಾಡಿದ್ದೇನೆ, ಸುಮಾರು 20 ವರ್ಷಗಳಿಂದ ಹಲವಾರು ಕೆಲಸಗಳು ಮಾಡದೆ ಹಿಂದಿನವರು ಉಳಿಸಿದ್ದರು ಅದನ್ನ ಗಮನಿಸಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದೇನೆ. ಮಾಯಸಂದ್ರ ಹೋಬಳಿ ರೈತರ ಬಹುದಿನದ ಕನಸಾದ ಫವರ್ ಸ್ಟೇಷನ್ ಕಾಮಗಾರಿಗೆ ಕೂಡಲೇ ಚಾಲನೆ ನೀಡಲಾಗುವುದು ಶೆಟ್ಟಗೊಂಡನಹಳ್ಳಿ ಗ್ರಾಮದ ಹತ್ತಿರ ಈಗಾಗಲೇ ಭೂಮಿ ಗೊತ್ತುಪಡಿಸಲಾಗಿದೆ ಒಟ್ಟಾರೆ ಮಾಯಸಂದ್ರ ನನ್ನ ತವರು ಹೋಬಳಿಯಾಗಿದ್ದು ಹೋಬಳಿಯ ಸಂಪೂರ್ಣ ಅಭಿವೃದ್ಧಿ ನನ್ನ ಗುರಿ ಎಂದರು. ಇದೇ ವೇಳೆ ತುರುವೇಕೆರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕಂಪಲಾಪುರ ಗ್ರಾಮದ ಬಳಿ 1.40ಕೋಟಿ ವೆಚ್ಚದ ಚೆಕ್ ಡ್ಯಾಮ್ ನಿರ್ಮಾಣ ಲೋಕಾರ್ಪಣೆ ಗೊಳಿಸಿದರು. ಈ ಸಂದರ್ಭದಲ್ಲಿ ಸಹಾಯಕ ಇಂಜಿನಿಯರ್ ಮದುಸೋದನ್, ಇಲಾಖೆಯ ನರಸಿಂಹಣ್ಣ ಮುಖಂಡರಾದ ಗಂಗಣ್ಣ. ಕೊಂಡಜ್ಜಿ ವಿಶ್ವನಾಥ್. ಸೋಮಣ್ಣ.ಉಮಾಶಂಕರ್, ಕಾಂತರಾಜ್, ಇತರರು ಇದ್ದರು.