ಕೊರಟಗೆರೆ:


ಬೆಂಗಳೂರು ಮೂಲದ ವ್ಯಕ್ತಿಯೋರ್ವ ಜಮೀನು ಕೊಂಡುಕೊಳ್ಳಲು ಕಾರಿನಲ್ಲಿ ಇಟ್ಟಿದ್ದ 15 ಲಕ್ಷ ರೂ. ಹಣವನ್ನು ಬಿಹಾರ್ ಮೂಲದ ಡ್ರೈವರ್ ಕೊರಟಗೆರೆ ಸರಹದ್ದಿನಲ್ಲಿ ಕದ್ದು ಪರಾರಿಯಾಗಿರುವ ಪ್ರಕರಣ ಕೊರಟಗೆರೆ police ತಂಡ ಆರೋಪಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗಳೂರು ಮೂಲದ ಸತೀಶ್ ಎಂಬ ವ್ಯಕ್ತಿ ಕೊರಟಗೆರೆ ಪಟ್ಟಣದ ಓಲ್ಡ್ ಗೆರೆ ಕ್ರಾಸ್ ನ ಬಳಿ ಜಮೀನು ಕೊಳ್ಳಲು ಅಡ್ವಾನ್ಸ್ ನೀಡುವುದಕ್ಕಾಗಿ ತರಲಾಗಿದ್ದ 15ಲಕ್ಷ ರೂ ಹಣವನ್ನ ಆತನ ಡ್ರೈವರ್ ಬಿಹಾರ ಮೂಲದ ಬಿಪಿನ್ ಕೊರಟಗೆರೆ ಪಟ್ಟಣದ ಓಲ್ಡ್ ಗೆರೆ ಕ್ರಾಸ್ ನ ಬಳಿ ಕಾರಿನಲ್ಲಿ ಇಟ್ಟ ಹಣವನ್ನ ತೆಗೆದುಕೊಂಡು ಪರಾರಿಯಾಗಿದ್ದ ಪ್ರಕರಣದ ಆರೋಪಿಯನ್ನ ಇತ್ತೀಚಿಗೆ ಕೊರಟಗೆರೆ ಪೆÇಲೀಸ್ ತಂಡ ಸೆರೆ ಹಿಡಿದು ನ್ಯಾಯಾಂಗ ಬಂಧನಕ್ಕೆ ಕಳಿಸಿದ್ದಾರೆ.
ಜಮೀನು ಕೊಳ್ಳಲು ಬೆಂಗಳೂರಿನ ಮೂಲದ ಸತೀಶ್ ಎಂಬ ವ್ಯಕ್ತಿ ಅಡ್ವಾನ್ಸ್ ನೀಡಲು 15 ಲಕ್ಷಣವನ್ನು ಕಾರಿನ ಡ್ರಾನಲ್ಲಿ ಇಟ್ಟು ಜಮೀನು ನೋಡಲು ಹೋದಾಗ ಡ್ರೈವರ್ ಗೆ ಹಣ ಇದೆ ಕಾರಿನಲ್ಲಿಯೇ ಕುಳಿತುಕೋ ಎಂದು ಹೇಳಿ ಪರಿಚಯಸ್ಥರ ಜೊತೆ ಜಮೀನು ನೋಡಲು ಹೋದಂತಹ ಸಂದರ್ಭದಲ್ಲಿ ಕಾರಿನ ಡ್ರೈವರ್ ಬಿಹಾರ ಮೂಲದ ಬಿಫನ್ ಕಾರನ್ನ ಅಲ್ಲಿಯೇ ಬಿಟ್ಟು ಕಾರಿನಲ್ಲಿದ್ದ 15 ಲಕ್ಷ ರೂಗಳನ್ನ ತೆಗೆದುಕೊಂಡು ಪರಾರಿಯಾಗಿದ್ದ ಎನ್ನಲಾಗಿದೆ.
ಈ ಸಂಬಂಧ ಮಾಲೀಕ ಸತೀಶ್ ಇತ್ತೀಚೆಗೆ 15 ಲಕ್ಷ ಹಣ ಕಳವಾಗಿದೆ ಎಂದು ಅದು ನನ್ನ ಕಾರು ಚಾಲಕನ್ನೇ ತೆಗೆದುಕೊಂಡು ಪರಾರಿಯಾಗಿದ್ದಾನೆ. ಅವನ ಫೆÇೀನ್ ನಂಬರ್ ಸ್ವಿಚ್ ಆಫ್ ಆಗಿದೆ ಎಂದು ಕೊರಟಗೆರೆ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದ ಎನ್ನಲಾಗಿದೆ.
ಈ ಸಂಬಂಧ ತುಮಕೂರು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರ್, ಅಡಿಷನಲ್ ಎಸ್ಪಿ ಉದೇಶ್, ಡಿವೈಎಸ್ಪಿ ರಾಮಕೃಷ್ಣಯ್ಯ ಮಾರ್ಗದರ್ಶನದಂತೆ ಸಿಪಿಐ ಸಿದ್ದರಾಮೇಶ್ವರ ಹಾಗೂ ಅವರ ತಂಡ ಮೋಹನ್ ಕುಮಾರ್ ,ಸಿದ್ದಲಿಂಗ ಪ್ರಸನ್ನ, ಸೈಯದ್ ಅಫ್ ಅಲಿ, ಗಂಗಾಧರ್, ರಂಗನಾಥ್, ಶಶಿಧರ್ ಆರೋಪಿ ಬಿಹಾರ ಮೂಲದ ಬಿಪಿನ್ ಎಂಬವನನ್ನ ತಮಿಳುನಾಡು ಬಳಿ ಸೆರೆಹಿಡಿದು ನ್ಯಾಯಾಂಗ ಬಂಧನಕ್ಕೆ ಕಳಿಸಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಕೊರಟಗೆರೆ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಬಿಪಿನ್ ಎಂಬುವನನ್ನ ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದೆ ಎನ್ನಲಾಗಿದೆ.

(Visited 2 times, 1 visits today)