ಕೊರಟಗೆರೆ:


ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರ ಗೊರವನಹಳ್ಳಿ ಲಕ್ಷ್ಮಿ ಸನ್ನಿಧಿ ಆಸುಪಾಸಿನಲ್ಲಿ ಕಳೆದ 3 ವರ್ಷಗಳ ಹಿಂದೆ ಯುವತಿಯೊಬ್ಬಳು ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾದ ಪ್ರಕರಣ ಬೆನ್ನತ್ತಿದ ಕೊರಟಗೆರೆ ಪೆÇಲೀಸ್ ತಂಡ ಆರೋಪಿಯನ್ನು ಬಂಧಿಸುವಲ್ಲಿ ಇತ್ತೀಚಿಗೆ ಯಶಸ್ವಿಯಾಗಿದೆ.
2019 ರಲ್ಲಿ ತಾಲೂಕಿನ ಪ್ರಮುಖ ಧಾರ್ಮಿಕ ಕ್ಷೇತ್ರ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮಿ ಸನ್ನಿಧಿಯ ಹತ್ತಿರದಲ್ಲಿ 17ವರ್ಷದ ಯುವತಿಯೋರ್ವಳ ಅರೆಬರೆ ಬೆಂದ ಸ್ಥಿತಿಯಲ್ಲಿ ಯಾರೋ ದುಷ್ಕರ್ಮಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸಾಯಿಸಲಾದ ಪ್ರಕರಣ ಬೆನ್ನತ್ತಿದ್ದ ಕೊರಟಗೆರೆ ಪೆÇಲೀಸ್ ತಂಡ ಬೆಳಗಾಂ ನಲ್ಲಿ ಅಡಗಿದ್ದ ಆರೋಪಿಯ ಹೆಡೆಮುರಿ ಕಟ್ಟಿ ಜೈಲಿಗಟ್ಟಲಾಗಿದೆ.
ಬೆಳಗಾಂನ ಆರೋಪಿ ರೂಪೇಶ್ ಕಳೆದ 3 ವರ್ಷಗಳ ಹಿಂದೆ ಅಂದರೆ 2019ರಲ್ಲಿ 17 ವರ್ಷದ ಮಹಿಳೆಯೊಬ್ಬಳನ್ನ ಡ್ರಾಪ್ ನೀಡುವ ನೆಪದಲ್ಲಿ ಕಾರಿನಲ್ಲಿ ಹತ್ತಿಸಿಕೊಂಡು ಬಂದವನು ಒಡವೆ ಹಾಗೂ ಹಣಕ್ಕಾಗಿ ಈ ಕೃತ್ಯ ಎಸಗಿದ್ದಾಗಿ ಪೆÇಲೀಸರ ಮುಂದೆ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಾಪುರ್, ಅಡಿಷನಲ್ ಎಸ್ಪಿ ಉದೇಶ್, ಡಿವೈಎಸ್ಪಿ ರಾಮಕೃಷ್ಣಯ್ಯ ಮಾರ್ಗದರ್ಶನದಲ್ಲಿ ಸಿಪಿಐ ಸಿದ್ದರಾಮೇಶ್ವರ ಮತ್ತು ತಂಡ ಯುವತಿಯ ಸಾವಿನ ಪ್ರಕರಣವನ್ನ ಕೂಲಂಕುಶವಾಗಿ ಪರಿಶೀಲಿಸಿ ಆರೋಪಿಯ ಇಂಚಿಂಚು ಮಾಹಿತಿಯನ್ನು ಕಲೆಹಾಕಿ ಬೆನ್ನತ್ತಿದ ಪೆÇಲೀಸ್ ತಂಡಕ್ಕೆ ಬೆಳಗಾಂ ನಲ್ಲಿ ಅಡಗಿದ್ದ ಆರೋಪಿ ರೂಪೇಶ್ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಪ್ರಶಂಸೆ ವ್ಯಕ್ತವಾಗಿದೆ ಎನ್ನಲಾಗಿದೆ.
ಈ ಪ್ರಕರಣದ ಹಿಂದೆ ಬಿದ್ದ ಈ ಹಿಂದಿನ ಸಿಪಿಐ ನದಾಫ್ ವರು ರೂಪೇಶ್ ಎಂದು ಬೆನ್ನುಬಿದ್ದು ಹಿಡಿದ ತಂದರಾದರೂ ಆರೋಪಿ ತಪೆÇ್ಪಪ್ಪಿಕೊಳ್ಳದ ಹಾಗೂ ಸಾಕ್ಷಿ ಆಧಾರಗಳು ಸಮರ್ಪಕವಾಗಿ ಸಿಗದ ಕಾರಣ ಆರೋಪಿ ಸ್ವಲ್ಪದರಲ್ಲಿ ಪಾರಾಗಿದ್ದ ಎನ್ನಲಾಗಿದೆ.
ತದನಂತರ ಈಗಿನ ಸಿಪಿಎ ಸಿದ್ದರಾಮೇಶ್ವರ ಅವರು ಯುವತಿಯ ಸಾವಿನ ಪ್ರಕರಣವನ್ನ ಮತ್ತೆ ಬೆನ್ನಿಗೆ ಬಿದ್ದು ನಿಖರ ಮಾಹಿತಿ ಆದರಿಸಿ ಎಸ್ಪಿ, ಎಡಿಎಸ್ಪಿ , ಡಿವೈಎಸ್ಪಿ ಮಾರ್ಗದರ್ಶನದಲ್ಲಿ ಕೊರಟಗೆರೆ ಸಿಪಿಐ ಸಿದ್ದರಾಮೇಶ್ವರ ಹಾಗೂ ಅವರ ತಂಡ ಮೋಹನ್ ಕುಮಾರ್, ನಾರಾಯಣ್, ಸಿದ್ದಲಿಂಗ ಪ್ರಸನ್ನ, ವೆಂಕಟೇಶ್, ಸೈಯದ್ ರಫೀತ್ ಅಲಿ ಆರೋಪಿಯನ್ನು ಬಂಧಿಸುವಲ್ಲಿ ಶ್ರಮವಹಿಸಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ದ್ದಾರೆ ಎನ್ನಲಾಗಿದೆ.

(Visited 1 times, 1 visits today)