ಚಿಕ್ಕನಾಯಕನಹಳ್ಳಿ:
ಅಗತ್ಯವಿರುವಷ್ಟು ರಕ್ತ ಪೂರೈಕೆ ಆಗುತ್ತಿಲ್ಲ ಇದರಿಂದ ಪ್ರತಿ ಜೀವದ ಮೌಲ್ಯ ಎಲ್ಲರೂ ಅರಿಯುವ ಮೂಲಕ ರಕ್ತದಾನ ಅತ್ಯವಶ್ಯಕ ಎಂದು ಜಿಲ್ಲಾ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಕೆ.ಎಸ್ ಇಂದು ಹೇಳಿದರು.
ಅವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಾಲೂಕು ವೈದ್ಯಾಧಿಕಾರಿಗಳ ಕಛೇರಿ ಸಾರ್ವಜನಿಕ ಆಸ್ಪತ್ರೆ ಜಿಲ್ಲಾ ರಕ್ತನಿಧಿ ಕೇಂದ್ರ ಪುರಸಭೆ ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ನಡೆಸಿದ ದಿನಾಚರಣೆ ಅಂಗವಾಗಿ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ರಾಜ್ಯದಲ್ಲಿ ಏಳು ಕೋಟಿ ಜನಸಂಖ್ಯೆ ಹೊಂದಿದ್ದರೂ ಕೇವಲ ಒಂದು ಪರ್ಸೆಂಟ್ ರಕ್ತ ಕೂಡ ಶೇಖರಣೆ ಆಗುತ್ತಿಲ್ಲ ನಮಗೆ ಅಗತ್ಯವಿರುವ ಸುಮಾರು 8ಲಕ್ಷ ಯುನಿಟ್ ರಕ್ತ ಅಗತ್ಯತೆ ಹೊಂದಿದ್ದು 2 ಲಕ್ಷ ಯುನಿಟ್ ರಕ್ತ ಕೊರತೆ ಎದ್ದುಕಾಣುತ್ತಿದೆ.
ರಕ್ತ ನೀಡುವ ಕಾರ್ಯದಲ್ಲಿ ಪುರುಷರಷ್ಟೇ ಮಹಿಳೆಯರೂ ಸಮಾನಾರ್ ಇದ್ದಾರೆ ಮಹಿಳೆಯರು ಯಾರು ಆತಂಕಕ್ಕೆ ಒಳಗಾಗಬಾರದು ಅವರು ರಕ್ತ ನೀಡುವುದರಿಂದ ಕೊಲೆಸ್ಟ್ರಾಲ್ ಕಡಿಮೆಯಾಗುವುದರ ಜೊತೆಗೆ ಹೃದಯಾಘಾತಗಳು ಕೂಡ ಕಡಿಮೆಯಾಗುತ್ತವೆ ಹೀಗಿರುವಾಗ 4 ತಿಂಗಳಿಗೊಮ್ಮೆಯಾದರೂ ಮಹಿಳೆಯರು ಕೂಡ ರಕ್ತ ಕೊಡುವ ಹೆಚ್ಚು ಆಸಕ್ತರಾಗಿದ್ದು ಕರೆ ನೀಡಿದ ಅವರು ಒಬ್ಬರು ನೀಡುವ ರಕ್ತದಿಂದ ನಾಲ್ಕು ಜೀವಗಳನ್ನು ಉಳಿಸಲು ಸಹಾಯಕವಾಗುತ್ತದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಪುರಸಭಾ ಅಧ್ಯಕ್ಷೆ ಪುಷ್ಪ ಹನುಮಂತರಾಜು ಮಾತನಾಡಿ ಪ್ರತಿಯೊಬ್ಬರೂ ರಕ್ತದಾನ ಮಾಡಲು ಪ್ರೇರೇಪಿಸುವಂತಹ ಉತ್ತಮ ಕಾರ್ಯಕ್ರಮವಿದು ಜೀವ ಉಳಿಸುವ ದಿನಾಚರಣೆ ಮಾಡುತ್ತಿರುವುದು ಕೃತಜ್ಞತಾ ಭಾವವನ್ನು ಬೆಳೆಸಿದಂತೆ ಎಂದರು. ತಾಲೂಕು ಆರೋಗ್ಯಾಧಿಕಾರಿ ಡಾಕ್ಟರ್ ನವೀನ್ ಮಾತನಾಡುತ್ತಾ ರಕ್ತದಾನದಿಂದ ಒಬ್ಬರಿಂದ ಮತ್ತೊಬ್ಬರಿಗೆ ಅತ್ಯಂತ ಅಮೂಲ್ಯವಾದದ್ದು ಇದರ ಮಹತ್ವ ತಿಳಿದೇ ಜೂನ್ 14ರಂದು 2004ರಿಂದ ರಕ್ತ ದಾನಿಗಳ ದಿನಾಚರಣೆ ಆಚರಿಸಿಕೊಂಡು ಬರುತ್ತಿದ್ದೇವೆ ರಕ್ತದೊತ್ತಡ ಹಾಗೂ ಮಧುಮೇಹ ಇರುವಂತಹ ರೋಗಿಗಳು ರಕ್ತ ನೀಡುವುದು ಅಪಾಯಕಾರಿ ಹೀಗಿರುವಾಗ ಅಂತಹವರ ರಕ್ತವನ್ನು ಪಡೆಯುವುದಿಲ್ಲ. ಸಮಾಜದಲ್ಲಿ ರಕ್ತದಾನದ ಬಗ್ಗೆ ಹೆಚ್ಚು ಜಾಗೃತಿ ಮತ್ತು ಪ್ರಚಾರ ಅವಶ್ಯಕವಾಗಿದ್ದು ಈ ಮೂಲಕ ಎಲ್ಲರನ್ನೂ ಪ್ರೇರೇಪಿಸುವ ದಿನವಾಗಬೇಕು ಇದು ಎಂದು ಕರೆ ನೀಡಿದರು.
ಸಮಾರಂಭದಲ್ಲಿ ಪುರಸಭಾ ಉಪಾಧ್ಯಕ್ಷೆ ಲಕ್ಷ್ಮಿಪಾಂಡುರಂಗಯ್ಯ ಸದಸ್ಯರಾದ ಮಲ್ಲಿಕಾರ್ಜುನ್ ಉಮಾ ತಾಲೂಕು ಆಡಳಿತ ವೈದ್ಯಾಧಿಕಾರಿ ಡಾಕ್ಟರ್ ವಿಜಯಭಾಸ್ಕರ್ ಜಿ ವಿ ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಮೇಲ್ವಿಚಾರಕಿ ಮೋಹನಕುಮಾರಿ ಉಪಸ್ಥಿತರಿದ್ದರು. ಸಮಾರಂಭದಲ್ಲಿ 51 ಬಾರಿ ರಕ್ತದಾನ ಮಾಡಿದ ಬಾಬುಜಾನ್ ಹಾಗೂ 27 ಬಾರಿ ರಕ್ತದಾನ ಮಾಡಿದ ಆಟೋ ಮಂಜು ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.