ತುಮಕೂರು:

ಕುಣಿಗಲ್ ತಾಲ್ಲೂಕಿನ ಅಮೃತೂರು ಪೊಲೀಸ್ ಠಾಣಾ ವ್ಯಾಪ್ತಿಯ ಅಮೃತೂರು ಗ್ರಾಮದ ಸುಮಾರು 26 ವರ್ಷದ ನಾಗರತ್ನ ಎಂಬ ಮಹಿಳೆಯು 6 ವರ್ಷದ ಪ್ರಭಾಸ್, 5 ವರ್ಷದ ಪ್ರವೀಣ್ ಕುಮಾರ್ ಎಂಬ ತನ್ನ ಮಕ್ಕಳೊಂದಿಗೆ ಕಾಣೆಯಾಗಿದ್ದಾಳೆ ಎಂದು ಪತಿ ಮಂಜು ಠಾಣೆಗೆ ದೂರು ನೀಡಿದ್ದಾರೆ.
ಈಕೆಯು ತನ್ನ ಮಕ್ಕಳೊಂದಿಗೆ ಅಮೃತೂರು ಸರ್ಕಾರಿ ಆಸ್ಪತ್ರೆಯ ಲ್ಯಾಬ್ ಬಳಿ ಹೋಗಿ ಬರುವುದಾಗಿ ಮನೆಯಿಂದ ಹೋದವರು ಮರಳಿ ಮನೆಗೆ ಬಂದಿರುವುದಿಲ್ಲ.
ನಾಗರತ್ನ :- ಕಾಣೆಯಾದ ಮಹಿಳೆಯು 4.5 ಅಡಿ ಎತ್ತರ, ಕಪ್ಪು ಮೈಬಣ್ಣ, ದುಂಡು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, ಹಸಿರು ಹೂಗಳಿರುವ ಬಿಳಿ ಬಣ್ಣದ ಟಾಪ್, ಕಪ್ಪು ಬಣ್ಣದ ಲೆಗ್ಗಿನ್ಸ್, ಕಪ್ಪು ಬಣ್ಣದ ವೇಲ್ ಧರಿಸಿದ್ದಾಳೆ.
ಪ್ರಭಾಸ್ :- 3.5 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ದುಂಡು ಮುಖ, ತೆಳ್ಳನೆ ಮೈಕಟ್ಟು ಹೊಂದಿದ್ದು, ಬಿಳಿ ಬಣ್ಣದ ಶರ್ಟ್, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾನೆ.
ಪ್ರವೀಣ್ ಕುಮಾರ್ :- 3 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ದುಂಡು ಮುಖ, ತೆಳ್ಳನೆ ಮೈಕಟ್ಟು ಹೊಂದಿದ್ದು, ಬಿಳಿ ಬಣ್ಣದ ಶರ್ಟ್, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದಾನೆ. ಈ ಮೂವರು ಕನ್ನಡ ಭಾಷೆ ಮಾತನಾಡುತ್ತಾರೆ.
ಕಾಣೆಯಾದ ಇವರ ಬಗ್ಗೆ ಸುಳಿವು ಸಿಕ್ಕವರು 08132-25229/220294/0816-2278000 ಅಥವಾ ಮೊ.ಸಂ. 9480802963/36/00ಯನ್ನು ಸಂಪಕಿಸಬೇಕೆಂದು ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ ಮನವಿ ಮಾಡಿದ್ದಾರೆ.

(Visited 4 times, 1 visits today)