ತುಮಕೂರು:
ಮಹಾನಗರಪಾಲಿಕೆಯ ವಾರ್ಡ್ ನಂ.17ರ ವ್ಯಾಪ್ತಿಯಲ್ಲಿ ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಯಡಿಯಲ್ಲಿ ರಾಮ್‍ಜೋಯಿಷ್‍ನಗರ ಮತ್ತು ಅಮರಜ್ಯೋತಿನಗರ, ಗೂಡ್‍ಶೆಡ್ ಕಾಲೋನಿಯಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗೆ ಮತ್ತು ಶಾಂತಿನಗರ ರೈಲ್ವೆ ಅಂಡರ್‍ಪಾಸ್ ನಿಂದ ಗಾಂಧಿನಗರಕ್ಕೆ ಸಂಪರ್ಕಿಸುವ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ತುಮಕೂರು ನಗರ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್ ರವರು ಭೂಮಿ ಪೂಜೆ ನೆರವೇರಿಸಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಮಾನ್ಯ ಶಾಸಕರು ಈ ಭಾಗದಲ್ಲಿ ಸದರಿ ಕಾಮಗಾರಿಗಳು ರೂ.80.00 ಲಕ್ಷಗಳ ವೆಚ್ಚದಲ್ಲಿ ನಡೆಯಲಿದ್ದು, ಸುಮಾರು ವರ್ಷಗಳಿಂದ ಈ ಭಾಗದಿಂದ ಗಾಂಧಿನಗರ, ಟೌನ್‍ಹಾಲ್ ಕಡೇ ಹೋಗಬೇಕಾದರೆ ಇರೋದಕ್ಕೆ ಒಂದೇ ರಸ್ತೆ ಇರುವುದರಿಂದ ರೈಲ್ವೇ ನಿಯಮದಂತೆ ಮಾಡಬೇಕು ಎಂದು ನಿರ್ಧರಿಸಲಾಯಿತು. ಕೆಲವು ಜಾಗದ ತಕರಾರಿನಿಂದಾಗಿ ಸುಮಾರು 3 ವರ್ಷಗಳಿಂದ ಕೆಲಸ ಆರಂಭಿಸಲು ಸಾಧ್ಯವಾಗಿರುವುದಿಲ್ಲ. ಈ ವಿಚಾರವಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವೊಲಿಸಿ ಹಾಗೂ ಪ್ರಸ್ತುತ ಸಂಬಂಧಪಟ್ಟ ಜಾಗದ ಮಾಲೀಕರು ಸಹ ಸ್ವಾಧೀನಪಡಿಸಿಕೊಳ್ಳಲು ಒಪ್ಪಿದ್ದಾರೆ. ಈ ವಿಚಾರವಾಗಿ ಈ ಭಾಗದಲ್ಲಿ ಸಾಕಷ್ಟು ಮುಖಂಡರು ಹೋರಾಡಿದ್ದು, ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ನಾಗರೀಕ ಬಂಧುಗಳು ಸೇರಿ ಈ ಸಮಸ್ಯೆ ಬಗೆಹರಿಸಿದ್ದು, ಈ ಭಾಗದಿಂದ ಬನಶಂಕರಿ ಮುಖ್ಯರಸ್ತೆವರೆಗೂ ಹಾಗೂ ಬನಶಂಕರಿ ಮುಖ್ಯರಸ್ತೆಯಿಂದ ಶ್ರೀ ಬನಶಂಕರಿ ದೇವಸ್ಥಾನದವರೆಗೂ ರಸ್ತೆ ಅತ್ಯಾವಶ್ಯಕವೆಂದು ಈ ಭಾಗದ ಜನಪ್ರತಿನಿಧಿಗಳು ಮನವರಿಕೆ ಮಾಡಿದ್ದರಿಂದ ಮಾನ್ಯ ಮುಖ್ಯಮಂತ್ರಿಗಳಾದ ಬೊಮ್ಮಾಯಿ ರವರು ನೀಡಿರುವ ಅನುದಾನದಲ್ಲಿ ಸುಂಆರು 80.00 ಲಕ್ಷಗಳನ್ನು ನೀಡಲಾಗಿದೆ ಹಾಗೂ ಈ ರಸ್ತೆಗಳು ಅಭಿವೃದ್ಧಿಯಾಗುವುದರಿಂದ ಸುಮಾರು 4 ರಿಂದ 5 ವಾರ್ಡ್‍ನ ಜನರ ಸಂಆಚಾರಕ್ಕೆ ಅನುಕೂಲವಾಗಲಿದೆ. ಇದಕ್ಕೆ ಒಟಟಾಗಿ 1 ಕೋಟಿ 60 ಲಕ್ಷಗಳನ್ನು ನೀಡಿದ್ದೇನೆ. ಇದು ಹೋರಾಟದ ಫಲವಾಗಿ ಆಗಿರುವಂತದ್ದು, ಇಲ್ಲಿ ಯಾರು ಪ್ರತಿಷ್ಠೆಯನ್ನ ಮಾಡಬಾರದು ಹಾಗೂ ಉಳಿದ ಕಾಮಗಾರಿಯನ್ನು ಶೀಘ್ರದಲ್ಲೇ ಮಾಡಲಾಗುವುದು ಎಂದು ತಿಳಿಸಿದರು.
ತದನಂತರ ಮಾತನಾಡಿದ ಪಾಲಿಕೆ ಮಹಾಪೌರರಾದ ಬಿ.ಜಿ.ಕೃಷ್ಣಪ್ಪ ನವರು, ಮಾನ್ಯ ಶಾಸಕರು ತುಮಕೂರು ನಗರದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದು, ಅದರಲ್ಲೂ ವಿಶೇಷವಾಗಿ ಈ ಭಾಗಕ್ಕೆ ಅನುದಾನ ನೀಡಿದ್ದು, ಸಣ್ಣ ಪುಟ್ಟ ತೊಡಕುಗಳು ಬಂದರೂ ಈ ಭಾಗದ ಮುಖಂಡರು ಹಾಗೂ ಪಾಲಿಕೆ ಸದಸ್ಯರು ಹಾಗೂ ನಾವು ಜೊತೆಗೂಡಿ ಸಮಸ್ಯೆ ಬಗೆಹರಿಸಿ ನಗರ ಅಭಿವೃದ್ಧಿ ಹೊಂದಲು ಶ್ರಮಿಸೋಣ ಎಂದು ತಿಳಿಸಿದರು.
ನಂತರ ಮಾತನಾಡಿದ ಪಾಲಿಕೆ ಸದಸ್ಯರಾದ ಮಂಜುನಾಥ್ ರವರು, ಈ ಕಾಮಗಾರಿಯು ಸುಮಾರು 4 ರಿಂದ 5 ವಾರ್ಡ್‍ನ ಜನರಿಗೆ ಅನುಕೂಲವಾಗಲಿದೆ, ಮುಖ್ಯವಾಗಿ ಜನ ಸಾಮಾನ್ಯರು ಹಾಗೂ ಶಾಲಾ ಮಕ್ಕಳಿಗೆ ಅನುಕೂಲವಾಗಲಿದೆ ಹಾಗೂ ಯಾರು ಪ್ರತಿಷ್ಠೆಯನ್ನ ಮಾಡುವುದಿಲ್ಲ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಮಹಾನಗರಪಾಲಿಕೆಯ ಮಹಾಪೌರರಾದ ಬಿ.ಜಿ.ಕೃಷ್ಣಪ್ಪ, ವಿರೋಧ ಪಕ್ಷದ ನಾಯಕರಾದ ಕುಮಾರ್, ಪಾಲಿಕೆ ಸದಸ್ಯರಾದ ಮಂಜುನಾಥ್, ಸಿದ್ದಲಿಂಗೇಗೌಡ್ರು, ವೇದಮೂರ್ತಿ, ದಾಸಣ್ಣ, ಹನುಮತರಾಜು.ಟಿ.ಹೆಚ್, ಸುಣ್ಣದಕಲ್ ರಾಜಣ್ಣ, ಶಂಕರ್.ಎಸ್, ಶ್ರೀನಿಧಿ ರಾಜಣ್ಣ, ರಾಧಾ ಗಂಗಾಧರ್, ಮಾರ್ಕೆಟ್ ನಾಗಣ್ಣ, ಇಸ್ಮಾಯಿಲ್, ನವೀನ್, ಪಾಲಿಕೆ ಅಧಿಕಾರಿಗಳು ಹಾಗೂ ಇತರೆ ಮುಖಂಡರು ಹಾಜರಿದ್ದರು.