ಚಿಕ್ಕನಾಯಕನಹಳ್ಳಿ:


ಬೌದ್ಧ ಧರ್ಮಕ್ಕೆ ಸೇರಿದ್ದರೂ ಪರವಾಗಿಲ್ಲ ಕ್ರಿಶ್ಚಿಯನ್ ಆಗಬಾರದು ಎಂದು ಸಚಿವ ಜೆ ಸಿ ಮಾಧುಸ್ವಾಮಿ ಹೇಳಿದರು.
ಅವರು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟವರ್ಗದ ಹಿತರಕ್ಷಣಾ ಸಮಿತಿಯ ಸಭೆಯಲ್ಲಿ ಈ ರೀತಿ ಹೇಳಿದರು.
ಸಭೆಯಲ್ಲಿ ಸುಮಾರು ನೂರಕ್ಕೂ ಹೆಚ್ಚು ಮಂದಿ ಹಾಜರಾಗಿದ್ದರು ಗಮನಿಸಿದ ಅವರು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗೆ ಇದು ಸಭೆಯ ಅಥವಾ ಸಮಾರಂಭನ ಎಂದು ಪ್ರಶ್ನಿಸುತ್ತಾ ಕೇವಲ ಮುಖಂಡರುಗಳಿಗೆ ಮಾತ್ರ ಸಭೆಗೆ ಹಾಜರಾಗಲು ಸೂಚಿಸಬೇಕು ಇದು ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮಾಜಗಳಿಗೆ ಸೇರಿದ ಕುಂದು ಕೊರತೆಯ ಸಭೆ ಇಲ್ಲಿ ಖಾಸಗಿ ವೈಯಕ್ತಿಕ ಅಭಿಪ್ರಾಯಗಳು ಹೆಚ್ಚು ಬರುವುದು ಬೇಡ ಎಂದು ಮುಂದಿನ ದಿನಗಳಲ್ಲಿ ಸಂಬಂಧಪಟ್ಟ ಮುಖಂಡರಿಗೆ ಅಷ್ಟೇ ಆಹ್ವಾನ ನೀಡಬೇಕು ಎಂದು ಖಡಕ್ಕಾಗಿ ಅಧಿಕಾರಿಗೆ ಸೂಚಿಸಿದರು.
ದುಗಡಿಹಳ್ಳಿ ಗ್ರಾಮ ಪಂಚಾಯಿತಿಯ ಕಂಪ್ಯೂಟರ್ ಆಪರೇಟರ್ ಮನಸಾರೆ ಜಾಬ್ ಕಾರ್ಡ್ ಬಳಸಿಕೊಂಡು ಅವರಿಗೆ ಬೇಕಾದ ಸದಸ್ಯರುಗಳಿಗೆ ಮತ್ತು ಅವರ ಹಿಂಬಾಲಕರಿಗೆ ಉದ್ಯೋಗ ಖಾತ್ರಿ ಕಾಮಗಾರಿ ನೀಡುತ್ತಿರುವ ಬಗ್ಗೆ ಹೆಸರಹಳ್ಳಿ ಗ್ರಾಮದ ಗ್ರಾಪಂ ಸದಸ್ಯ ಗೋಪಾಲಯ್ಯ ಆರೋಪಿಸಿ ಗ್ರಾಮದಲ್ಲಿ ಇರುವ ನೀರು ಪಾಲಕ ಬಸುರಾಜ್ ಅವರನ್ನು ಕೂಡಲೇ ಬೇರೆಡೆಗೆ ಒತ್ತಾಯಿಸಿ ಗ್ರಾಮದ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ಮತ್ತು ಕೆಲವೊಂದು ವರ್ಗದ ಜನರು ಸ್ಪಂದಿಸುತ್ತಿಲ್ಲ ಎಂದು ಸಚಿವರಲ್ಲಿ ಮನವಿ ಮಾಡಿದರು.
ಸಚಿವರು ಕೂಡಲೇ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವಂತೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವಸಂತಕುಮಾರ್ ಅವರಿಗೆ ಸೂಚಿಸಿದರು.
ತಾಲೂಕಿನಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಕೆಲವರು ಮತಾಂತರ ವಾಗುತ್ತಿದ್ದು ಅವರು ಸೌಲಭ್ಯಕ್ಕಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಸಚಿವರಲ್ಲಿ ಮುಖಂಡ ಸಿಎಸ್ ಲಿಂಗದೇವರು ಹಾಗೂ ಬೇವಿನಹಳ್ಳಿ ಚನ್ನಬಸವಯ್ಯ ಆರೋಪಿಸಿ ಈಗ ಬುದ್ಧಿವಂತರಾಗುತ್ತಿದ್ದಾರೆ ಎಂದು ಆರೋಪಿಸಿದರು. ಇದಕ್ಕೆ ಸಚಿವರು ಮಾತನಾಡುತ್ತಾ ಸದ್ಯ ಕ್ರಿಶ್ಚಿಯನ್ ಆಗದಿದ್ದರೆ ಸಾಕು ಬೌದ್ಧಿಸಂ ಜೈನಿಸಂ ಕೂಡ ಹಿಂದೂ ಪರವಾದ ಧರ್ಮ ಎಂದು ಸಮರ್ಥಿಸಿಕೊಂಡು ಈ ರೀತಿ ಮತಾಂತರ ಆಗುವುದು ಅಪರಾಧ ನಾವೀಗಾಗಲೇ ಕಾನೂನನ್ನು ಮಾಡಿದ್ದೇವೆ ಅಂತಹವರ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸುವಂತೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕಿನ ಪುರಸಭೆ ಪಟ್ಟಣ ಪಂಚಾಯಿತಿ ಗ್ರಾಮಪಂಚಾಯಿತಿ ಆಗಬಹುದು ಕೆಲವು ಮಹಿಳಾ ಸದಸ್ಯರ ಪತಿಯರು ನಿತ್ಯವೂ ಕಚೇರಿಗೆ ಆಗಮಿಸಿ ಚೇರು ಹಾಕಿಕೊಂಡು ಕುಳಿತುಕೊಳ್ಳುತ್ತಾರೆ. ಪ್ರಶ್ನಿಸಿದರೆ ಉಡಾಪೆ ಉತ್ತರವನ್ನು ನೀಡುತ್ತಾರೆ ಎಂದು ಸದಸ್ಯರುಗಳು ಈ ಬಗ್ಗೆ ನಿಯಂತ್ರಣ ಮಾಡುವಂತೆ ಸಚಿವರಲ್ಲಿ ಮನವಿ ಮಾಡಿದರು.
ಅದಕ್ಕೆ ಸಚಿವರು ಅಸಹಾಯಕತೆ ವ್ಯಕ್ತಪಡಿಸಿ ಇದನ್ನು ಅವರೇ ಅರ್ಥ ಮಾಡಿಕೊಳ್ಳಬೇಕು. ನಾನು ಶಾಸಕನಾಗಿ ಇಲ್ಲದೆ ಇದ್ದಿದ್ದರೆ ಸಾಮಾನ್ಯ ಸಭೆಗೆ ಹಾಜರಾಗುತ್ತಿದ್ದರೇನೋ ಎಂದು ಹೇಳಿ ಹುಳಿಯಾರು ಪಟ್ಟಣ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಓರ್ವ ಮಹಿಳಾ ಸದಸ್ಯೆಯ ಪತಿ ಹಾಜರಿದ್ದು ಇದನ್ನು ಗಮನಿಸಿ ಅವರಿಗೆ ಎಚ್ಚರಿಕೆ ನೀಡಿ ಕಳುಹಿಸಲಾಯಿತು ಎಂದರು. ಪಟ್ಟಣದಲ್ಲಿರುವ ಸರಕಾರಿ ಪ್ರಥಮದರ್ಜೆ ಕಾಲೇಜಿನ ಆವರಣದಲ್ಲಿ ಜಗಜೀವನರಾಂ ಭವನ ಕಟ್ಟಿಸಿ ಅದರಲ್ಲಿ ಗ್ರಂಥಾಲಯ ಆರಂಭಿಸಬೇಕೆಂದು ಕೋರಲಾಯಿತು. ಅಂಗನವಾಡಿ ಕೇಂದ್ರಗಳನ್ನು ಸುಸ್ಥಿತಿಯಲ್ಲಿಡುವಂತೆ ಸಚಿವರು ಸಿಡಿಪಿಓಗೆ ಸೂಚಿಸಿದರು. ಸಭೆಯಲ್ಲಿ ತಹಶೀಲ್ದಾರ್ ತೇಜಸ್ವಿನಿ, ಇಓ ವಸಂತ್‍ಕುಮಾರ್, ಸಮಾಜ ಕಲ್ಯಾಣಾಧಿಕಾರಿ ತ್ರಿವೇಣಿ, ಹಾಜರಿದ್ದರು.

(Visited 11 times, 1 visits today)