ತುಮಕೂರು:
ಸರಕಾರಿ ಶಾಲೆಗಳು ಸಶಕ್ತವಾದರೆ, ಕಾನ್ವೆಂಟ್ ಪಿಡುಗಿನಿಂದ ಜನಸಾಮಾನ್ಯರನ್ನು ರಕ್ಷಿಸಬಹುದಾಗಿದೆ ಎಂದು ತುಮಕೂರು ಮೇಯರ್ ಬಿ.ಜಿ.ಕೃಪ್ಷಪ್ಪ ಅಭಿಪ್ರಾಯ ಪಟ್ಟಿದ್ದಾರೆ.
ನಗರದ ಶಿರಾಗೇಟ್ ಉತ್ತರ ಬಡಾವಣೆಯ ಹಿರಿಯ ಮಾದರಿ ಪಾಠಶಾಲೆ ಮಕ್ಕಳಿಗೆ ಕೆ.ಎನ್.ಆರ್.ಅಭಿಮಾನಿ ಬಳಗದ ವತಿಯಿಂದ ಆಯೋಜಿಸಿದ್ದ ಲೇಖನ ಸಾಮಗ್ರಿಗಳ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು, ದಾನಿಗಳು, ಸಂಘ ಸಂಸ್ಥೆಗಳು ಇಂತಹ ಸರಕಾರಿ ಶಾಲೆಗಳ ಅಭಿವೃದ್ಧಿಯಲ್ಲಿ ಕೈಜೋಡಿಸಿದರೆ ದೇಶಕ್ಕೆ ಉತ್ತಮ ಪ್ರಜೆಗಳನ್ನು ಕೊಡುಗೆಯಾಗಿ ನೀಡಬಹುದೆಂದರು.
ಸರಕಾರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಾ ಬಂದಿದೆ. ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಶೂಗಳನ್ನು ನೀಡುವುದರ ಜೊತೆಗೆ, ಮಧ್ಯಾಹ್ನದ ಬಿಸಿಯೂಟ, ಹಾಲು ಇನ್ನಿತರ ಸವಲತ್ತುಗಳನ್ನು ನೀಡಿ ವಿದ್ಯೆಗೆ ಪೆÇ್ರೀತ್ಸಾಹ ನೀಡುವ ಕೆಲಸ ಮಾಡುತ್ತಿದೆ. ಹಾಗಾಗಿ ಮಕ್ಕಳ ಗೈರುಹಾಜರಿ ಕಡಿಮೆಯಾಗಿದೆ. ಸದರಿ ಶಾಲೆಯ ಅಭಿವೃದ್ದಿಗೆ ಪಾಲಿಕೆ ವತಿಯಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ದೊರಕಿಸಿಕೊಡುವ ಭರವಸೆಯನ್ನು ಮೇಯರ್ ಕೃಷ್ಣಪ್ಪ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಉತ್ತರ ಬಡಾವಣೆ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ.ಉಪಾಧ್ಯಕ್ಷೆ ಜಬೀನಾ ಮಾತನಾಡಿ,ಬಡ ಮಕ್ಕಳೇ ಒದುವ ಈ ಶಾಲೆ ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುತ್ತಿದ್ದು ಶಾಲೆಯ ಮುಖ್ಯೋಪಾಧ್ಯಾ ಯರಾದ ಶಿವಸ್ವಾಮಿ ಅವರು ವಿಧ್ಯಾರ್ಥಿ ಸ್ನೇಹಿ ವಾತಾವರಣ ನಿರ್ಮಿಸಿ, ದಾನಿಗಳು,ಸರಕಾರದ ನೆರವು ಪಡೆದು ಅಭಿವೃದ್ಧಿ ಪಥದಲ್ಲಿ ಸಾಗುವಂತೆ ಮಾಡಿದ್ದಾರೆ. ಇದರ ಜೊತೆಗೆ ಕೆಎನ್‍ಆರ್ ಅಭಿಮಾನಿಗಳು ನಮ್ಮ ಶಾಲೆಯನ್ನು ಗುರುತ್ತಿಸಿ ಸಹಾಯ ಹಸ್ತ ಚಾಚಿರುವುದು ಸಂತೋಷ ತಂದಿದೆ. ಎಲ್ಲಾ ಧಾನಿಗಳಿಗೆ ಧನ್ಯವಾದ ತಿಳಿಸಿದರು
ಕೆ.ಎನ್.ಆರ್. ಅಭಿಮಾನಿಗಳ ಸಂಘದ ಟಿ.ಪಿ.ಮಂಜುನಾಥ್ ಮಾತನಾಡಿ,ಮಕ್ಕಳು ಇಂದು ಮೊಬೈಲ್ ಮತ್ತು ಟಿ.ವಿ.ಹುಳು ಗಳಾಗುತ್ತಿದ್ದಾರೆ.ಇದರಿಂದಾಗಿ ಅವರ ಶಾರೀಕ ಬೆಳವಣಿಗೆಯ ಜೊತೆಗೆ, ಮಾನಸಿಕ ಬೆಳವಣಿಗೆಯೂ ಕುಗ್ಗಲಿದೆ. ಪೆÇೀಷಕರು ಇತ್ತಕಡೆ ಗಮನ ಹರಿಸಬೇಕಿದೆ. ನಮ್ಮ ಸಂಘ ಸರಕಾರಿ ಶಾಲೆಗಳನ್ನು ಗುರುತಿಸಿ, ಈ ರೀತಿಯ ಸಹಕಾರ ನೀಡುತ್ತಾ ಬಂದಿದೆ. ಇದರ ಜೊತೆಗೆ ಹೆಲ್ತ್ ಕ್ಯಾಂಪ್ ನಡೆಸುವ ಮೂಲಕ ಮಕ್ಕಳ ಆರೋಗ್ಯ ದ ಕಡೆಗೆ ಗಮನಹರಿಸುತ್ತಿದೆ ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಕೆ.ಎನ್.ಆರ್.ಅಭಿಮಾನಿ ಬಳಗ ತಿಪ್ಪೇಸ್ವಾಮಿ, ಶಿಕ್ಷಣ ವ್ಯಕ್ತಿ ವ್ಯಕ್ತಿತ್ವ ವಿಕಸನದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ.ಕಲ್ಲಾಗಿರುವ ಸುಣ್ಣ ಹೇಗೆ ಬೆಯಿಸಿದ ನಂತರ ಬಣ್ಣವಾಗಿ ಬದಲಾಗುತ್ತದೆಯೋ ಹಾಗೆಯೇ ಶಿಕ್ಷಣದಿಂದ ಮನುಷ್ಯ ಸುಶೀಕ್ಷಿತ, ಸುಂಸ್ಕøತನಾಗಿ ಬದಲಾಗುತ್ತಾನೆ. ಕಲಿಕೆ ಎಂಬುದು ನಿರಂತರ ಪ್ರಕ್ರಿಯೆ ಇದಕ್ಕೆ ನಮ್ಮ ಸಂಘನೆಗೆ ನಿರಂತರವಾಗಿ ಸಹಕಾರ ನೀಡುತ್ತಾ ಬಂದಿದೆ.ಶಾಲಾ ಶಿಕ್ಷಕರು ಮಕ್ಕಳಲ್ಲಿ ಶಿಕ್ಷಣದ ಜೊತೆಗೆ, ಕೌಶಲ್ಯವನ್ನುತುಂಬುವ ಕೆಲಸ ಮಾಡಬೇಕು.ನೈತಿಕ, ಸಾಮಾಜಿಕ ಜವಾಬ್ದಾರಿಯ ಜೊತೆಗೆ, ಜಾತ್ಯಾತೀತ ಮನೋಭಾವ ಬೆಳೆಸಲು ಶ್ರಮಿಸಬೇಕೆಂದರು.
ಶಾಲೆಯ ಪದವಿಧರ ಮುಖ್ಯೋಪಾಧ್ಯಾಯರಾದ ಡಿ.ಎಸ್.ಶಿವಸ್ವಾಮಿ ಮಾತನಾಡಿ, ಎರಡು ಎಕರೆಗೂ ಹೆಚ್ಚು ಜಾಗವನ್ನು ಹೊಂದಿರುವ ಶಾಲೆಯಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ, ಶಾಲೆಯನ್ನು ಭೌದ್ದಿಕವಾಗಿ, ಬೌತಿಕವಾಗಿ ಮೇಲ್ಮಟ್ಟಕ್ಕೆ ತೆಗೆದುಕೊಂಡು ಹೋಗಲಾಗುತ್ತಿದೆ. ದಾನಿಗಳ ಸಹಾಯದಿಂದ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕೆಲಸ ಮಾಡಲಾಗಿದೆ. ಪ್ರಸ್ತುತ ವರ್ಷದಿಂದ ಶಾಲೆಯಲ್ಲಿ ಒಂದರಿಂದ ನಾಲ್ಕನೇ ತರಗತಿಯವರೆಗೆ ಇಂಗ್ಲೀಷ್ ಮಿಡಿಯಂ ಆರಂಭವಾಗಿದ್ದು,ಶಾಲೆಯಲ್ಲಿರುವ ಮಕ್ಕಳಿಗೆ ಅನುಕೂಲವಾಗುವಂತೆ ಮಕ್ಕಳ ಸ್ನೇಹಿ ಆಟದ ಪರಿಕರಗಳನ್ನು ಒದಗಿಸುವಂತೆ ಮೇಯರ್ ಬಿ.ಜಿ.ಕೃಷ್ಣಪ್ಪ ಮತ್ತು ದಾನಿಗಳಲ್ಲಿ ಮನವಿ ಮಾಡಿದರು. ವೇದಿಕೆಯಲ್ಲಿ ಬಿ.ಆರ್.ಪಿ. ಕಾಮಾಕ್ಷಿ, ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಸನ್ನಕುಮಾರ್, ಕೆಎನ್‍ಆರ್ ಅಭಿಮಾನಿ ಬಳಗದ ನಾರಾಯಣಗೌಡ, ಲಕ್ಷ್ಮಿನಾರಾಯಣ್,ಹೆಚ್.ಜಿ.ಪುರುಷೋತ್ತಮ್, ರಾಜೇಂದ್ರನಾಯಕ್, ಡಿಸಿಸಿಬ್ಯಾಂಕ್‍ನಿರ್ದೇಶಕ ಲಕ್ಷ್ಮಿನಾರಾಯಣ್, ಶಾಲಾ ಅಭಿವೃದ್ದಿ ಮಂಡಳಿ ಸದಸ್ಯರಾದ ಭಾಗ್ಯಮ್ಮ, ಸರಸ್ವತಮ್ಮ, ಭರತ್, ಶ್ರೀಮತಿ ರೇಖಾ, ಅರುಣಾಕುಮಾರಿ, ನೀಲಮ್ಮ, ರೇವತಿ, ಬಸವನಗೌಡ ಹನುಮರಂಗಯ್ಯ ಹಾಗೂ ಶಾಲೆಯ ಎಲ್ಲಾ ಶಿಕ್ಷಕರು ಉಪಸ್ಥಿತರಿದ್ದರು.
ಶಾಲೆಯಲ್ಲಿರುವ 6,7 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಲೇಖನ ಸಾಮಗ್ರಿಗಳನ್ನು ಕೆ.ಎನ್.ಆರ್.ಅಭಿಮಾನಿ ಬಳಗದಿಂದ ವಿತರಿಸಲಾಯಿತು.