ತುಮಕೂರು:
ನಗರದ ಅಮಾನಿಕೆರೆ ಸರ್ವೆನಂಬರ್‍ನಲ್ಲಿ ಬರುವ ಗಾರ್ಡನ್ ರಸ್ತೆಯಲ್ಲಿ ಸುಮಾರು 2 ಕೋಟಿ ವೆಚ್ಚದಲ್ಲಿ ಟೂಡಾವತಿಯಿಂದ ನಿರ್ಮಿಸಲು ಉದ್ದೇಶಿಸಿರುವ ಬ್ಯಾಡ್ಮಿಂಟನ್ ಮತ್ತು ಲಾನ್ ಟೆನ್ನಿಸ್ ಕೋರ್ಟುಗಳುಳ್ಳ ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ಗುದ್ದಲಿಪೂಜೆ ನರವೇರಿಸಿದರು.
ಈ ವೇಳೆ ಮಾತನಾಡಿದ ಅವರು, ಟೂಡಾ ಅಧ್ಯಕ್ಷರಾದ ಬಿ.ಎಸ್.ನಾಗಣ್ಣ ಅವರ ಮುತ್ತುವರ್ಜಿಯಿಂದಾಗಿ, ಸುಮಾರು 25-30 ಸಾವಿರ ಚದುರ ಅಡಿಗಳಲ್ಲಿ ಈ ಕ್ರೀಡಾಂಗಣಕ್ಕೆ ಚಾಲನೆ ನೀಡಲಾಗಿದೆ. ಇದು ನಗರದ ಕ್ರೀಡಾಪಟುಗಳ ಬಹುದಿನದ ಬೇಡಿಕೆಯಾಗಿತ್ತು. 90 ಲಕ್ಷದಿಂದ 1 ಕೋಟಿ ರೂಗಳಲ್ಲಿ ಕಟ್ಟಡ ಮತ್ತು ಉಳಿದ ಹಣದಲ್ಲಿ ಕೋರ್ಟುಗಳ ನಿರ್ಮಾಣ ಕಾರ್ಯ ನಡೆಯಲಿದ್ದು, ಇದೊಂದು ಅಂತರರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣವಾಗಿದೆ ಎಂದರು. ನಗರದ ಕೆಲವು ಕಡೆಗಳಲ್ಲಿ ಟೆನ್ನಿಸ್ ಮತ್ತು ಬ್ಯಾಡ್ಮಿಂಟನ್ ಕೋರ್ಟುಗಳಿದ್ದರೂ ಸಾರ್ವಜನಿಕರಿಗೆ ಪ್ರವೇಶ ಇರಲಿಲ್ಲ. ಸದಸ್ಯರಾದವರಿಗೆ ಮಾತ್ರ ಆಟವಾಡಲು ಅವಕಾಶವಿದೆ.ಹಾಗಾಗಿ ಸಾರ್ವಜನಿಕರಿಗಾಗಿ ಇದನ್ನು ನಿರ್ಮಿಸಲಾಗುತ್ತಿದೆ. ಸಣ್ಣ ಪ್ರಮಾಣದ ಶುಲ್ಕ ವಿಧಿಸಿ, ನಿರ್ವಹಣೆಯನ್ನು ಟೂಡಾ ಮಾಡಲಿದೆ. ಇದರ ಜೊತೆಗೆ ಗುಬ್ಬಿ ಗೇಟ್‍ನಿಂದ ಶಿರಾಗೇಟ್‍ವರೆಗಿನ ವರ್ತುಲ ರಸ್ತೆಗೆ ಸಹ ಕ್ರಮ ಕೈಗೊಳ್ಳಲಿದೆ.1.7 ಕಿ.ಮಿ. ಕಳೆದ 20 ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು. ನಾವು ಮತ್ತು ಟೂಡಾ ಅಧ್ಯಕ್ಷಹಾಗೂ ಈ ಹಿಂದಿನ ಡಿ.ಸಿ. ಎಸಿ ಅವರುಗಳು ಮುರ್ತುವರ್ಜಿ ವಹಿಸಿ, ಕಳೆದು ಹೋಗಿದ್ದ ದಾಖಲೆಗಳನ್ನು ಹುಡುಕಿಸಿ, ಭೂ ಸ್ವಾಧೀನದ ಹಣವನ್ನು ನೀಡಿ,ಅಡೆ, ತಡೆ ನಿವಾರಿಸಲಾಗಿದೆ ಶೀಘ್ರದಲ್ಲಿಯೇ ಕಾಮಗಾರಿ ಆರಂಭವಾಗಲಿದೆ ಎಂದು ಶಾಸಕ ಜೋತಿಗಣೇಶ್ ತಿಳಿಸಿದರು. ಟೂಡಾ ಅಧ್ಯಕ್ಷ ಬಿ.ಎಸ್.ನಾಗಣ್ಣ ಮಾತನಾಡಿ, ಟೂಡಾದ 2 ಕೋಟಿ ಅನುದಾನದಲ್ಲಿ 2 ಶೆಟಲ್ ಕೋರ್ಟು ಮತ್ತು ಲಾನ್ ಟೆನ್ನಿಸಕೋರ್ಟು ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿದ್ದು, ಮುಂದಿನ 6 ತಿಂಗಳಲ್ಲಿ ಕ್ರೀಡಾಪಟುಗಳಿಗೆ ದೊರೆಯಲಿದೆ ಎಂದರು. ಈ ವೇಳೆ ಟೂಡಾ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.