ಗುಬ್ಬಿ:
ಕಾಸು ಕರಿಮಣಿ ಕೊಟ್ಟು ಎಂಎಲ್‍ಸಿ ಆಗಿರುವ ಶರವಣನಿಗೆ ನನ್ನ ಬಗ್ಗೆ ಏನು ಗೊತ್ತಿದೆ ಇಲ್ಲಿಗೆ ಬಂದು ಗ್ರಾಮ ಪಂಚಾಯತಿ ಚುನಾವಣೆ ಗೆಲ್ಲಲಿ ಎಂದು ಶಾಸಕ ಎಸ್.ಆರ್ ಶ್ರೀನಿವಾಸ್ ಸಾವಲ್ ಹಾಕಿದರು.
ಪಟ್ಟಣದ ಉಪನೊಂದಣಾಧಿಕಾರಿಗಳು ಹಾಗೂ ವಿವಾಹ ನೋಂದಣಾಧಿಕಾರಿಗಳ ನೂತನ ಕಚೇರಿ ಕಟ್ಟಡದ ಉದ್ಘಾಟನೆ ಮಾಡಿ ಮಾತನಾಡಿದ ಅವರು ಭಾಷಣದಲ್ಲಿ ಮಾತನಾಡುವಂತಹ ವೆಂಕ, ಸಿನಾ, ನಾಣಿಗೆ ಉತ್ತರ ಕೊಡುವ ಅವಶ್ಯಕತೆ ನನಗಿಲ್ಲ ಎಂದ ಅವರು ಗೌರಿಶಂಕರ್ ಒಂದು ಪಕ್ಷದಿಂದ ಒಂದು ಪಕ್ಷಕ್ಕೆ ಓಡಿಹೋಗುವ ವ್ಯಕ್ತಿ, ಆದರೆ ನಾನು 20 ವರ್ಷದಿಂದ ಇಲ್ಲಿಯೇ ಇದ್ದೇನೆ, ಗೌರಿಶಂಕರ ರಿಗೆ ಇಲ್ಲಿಗೆ ಬರಬೇಡ ಎಂದು ಯಾರಾದರೂ ಸ್ಟೇ ತಂದಿದ್ದಾರ ಇಂದು ಪ್ರಶ್ನೆ ಕೇಳಿದ ಅವರು ಭದ್ರಾವತಿಯಲ್ಲಿ 50000 ಮುಸ್ಲಿಂ ಮತದಾರರರು ಇದ್ದರು ತೆಗೆದು ಕೊಂಡಿದು 18000 ಮತ ಎಂದ ಮೇಲೆ ಇಲ್ಲಿಗೆ ಬಂದು ಏನು ಮಾಡಲು ಸಾಧ್ಯ. ಕೇವಲ ವೇದಿಕೆಯಲ್ಲಿ ಮಾತನಾಡುವುದಕ್ಕೆ ಭಾಷಣ ಮಾಡುವುದಕ್ಕೆ ಪಕ್ಷದಲ್ಲಿ ಇಟ್ಟುಕೊಂಡಿದ್ದಾರೆ ಹೊರತು ಇವರಿಂದ ಏನೂ ಆಗುವುದಿಲ್ಲ ಎಂದು ಇಬ್ರಾಹಿಂ ವಿರುದ್ಧ ಟೀಕೆ ಮಾಡಿದರು.
ತಾಲೂಕು ಉಪನೋಂದಣಾಧಿಕಾರಿ ಸುಜಾತ ಮಾತನಾಡಿ, ಇಷ್ಟು ದಿನಗಳ ಕಾಲ ತಾಲೂಕು ಕಚೇರಿಯ ಒಳಭಾಗದಲ್ಲಿ ವಿವಾಹ ಹಾಗೂ ಸ್ವತ್ತಿನ ರಿಜಿಸ್ಟರ್ ಮಾಡಿಕೊಳ್ಳಲಾಗುತ್ತಿತ್ತು ಇದರಿಂದ ಸಾಕಷ್ಟು ಕಿರಿದಾದ ಜಾಗದಲ್ಲಿ ಕೆಲಸ ಮಾಡುವುದು ಸಮಸ್ಯೆಯಾಗುತ್ತಿತ್ತು ಹಾಗೂ ಸಾರ್ವಜನಿಕರಿಗೂ ಕುಳಿತುಕೊಳ್ಳಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿತ್ತು ನೂತನವಾಗಿ ಕಟ್ಟಡ ನಿರ್ಮಾಣವಾಗಿರುವುದರಿಂದ ಎಲ್ಲಾ ರೀತಿಯ ಸೌಲಭ್ಯಗಳೂ ದೊರೆಯುತ್ತವೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಅಧ್ಯಕ್ಷ ಅಣ್ಣಪ್ಪಸ್ವಾಮಿ, ತಹಸಿಲ್ದಾರ್ ಬಿ ಆರತಿ ಪಟ್ಟಣ ಪಂಚಾಯತಿಯ ಎಲ್ಲ ಸದಸ್ಯರುಗಳು ಜಿಲ್ಲಾ ಉಪನೋಂದಣಾಧಿಕಾರಿ ನೂರ್ ಪಾಷ, ಹಾಗೂ ಮುಖಂಡರಾದ ಒದಲೂರು ವಿಜಯ್ ಕುಮಾರ್ ಪತ್ರ ಬರಹಗಾರರ ವಿಶ್ವನಾಥ್ ರಾಜು, ಸೇರಿದಂತೆ ಇನ್ನಿತರರು ಹಾಜರಿದ್ದರು.