ತುಮಕೂರು:


ಜ್ಯುವೆಲ್ಲರಿ ಶಾಪ್ ಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಅಂತರ್ ರಾಜ್ಯ ದರೋಡೆ ಕೋರರನ್ನು ತುಮಕೂರು ಪೊಲೀಸರು ಬಂಧಿಸಿದ್ದಾರೆ.
ಓರ್ವ ಅಪ್ರಾಪ್ತ ಬಾಲಕ ಸೇರಿ 4 ಜನ ಆರೋಪಿಗಳನ್ನು ಬಂಧನ ಮಾಡಲಾಗಿದ್ದು, ಮಹಾರಾಷ್ಟ್ರ ಮೂಲದ ದಿಗಂಬರ್ ಕಿರಣ್ ಕುಂಡ್ಲಿಕ್ ಸುಳೆ, ರಾಜಸ್ಥಾನ ಮೂಲದ ಸಿದ್ದನಾಥ ರಾಮಚಂದ್ರ ಪಡಾಲ್ಕರ್, ಹರ್ಷವರ್ಧನ್ ಬಾಳಿರಾಂ ಮಾನೆ, ವಿವೇಕ್ ದೌಲತ್ ರಾವ್ ಮೇಟ್ ಕರಿ ಎಂಬುವರನ್ನು ಬಂಧಿಸಲಾಗಿದೆ.
ಬಂಧಿತರಿಂದ ಸುಮಾರು 53 ಲಕ್ಷದ 33 ಸಾವಿರ ಬೆಲೆಬಾಳುವ 1 ಕೆಜಿ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಇನ್ನು ಜ್ಯುವೆಲ್ಲರಿ ಶಾಪ್ ನಲ್ಲಿ ಕೆಲಸದವನಿಂದಲೇ ಕಳ್ಳತನಕ್ಕೆ ಪ್ಲಾನ್ ರೂಪಿಸಲಾಗಿತ್ತು ಮಬುದು ಮತ್ತೊಂದು ವಿಶೇಷ. ಅದಲ್ಲದೇ ತುಮಕೂರು ನಗರದ ಗೋಲ್ಡ್ ಟೆಸ್ಟಿಂಗ್ ಶಾಪ್ ಒಂದರಲ್ಲಿ ಕೆಲಸಕ್ಕಿದ್ದ ಪ್ರಮುಖ ಆರೋಪಿ ದಿಗಂಬರ್ ಕಿರಣ್ ಎಂಬಾತ ರಜೆ ನಿಮಿತ್ತ ರಾಜಸ್ಥಾನಕ್ಕೆ ಹೋದಾಗ ತನ್ನ ಸ್ನೇಹಿತರಿಗೆ ಸುಲಭವಾಗಿ ಹಣ ಗಳಿಸುವ ಬಗ್ಗೆ ಪ್ಲಾನ್ ನೀಡಿದ್ದ. ಅದರಂತೆ ಬೆಂಗಳೂರಿನಿಂದ ತುಮಕೂರಿಗೆ ಚಿನ್ನಾಭರಣಗಳನ್ನ ಸರಬರಾಜು ಮಾಡುತ್ತಿದ್ದವನನ್ನು ಅಟ್ಯಾಕ್ ಮಾಡಿದ್ರೆ ಸುಲಭವಾಗಿ ಹಣ ಗಳಿಸ್ಬಹುದೆಂದು ದಿಗಂಬರ್ ಕಿರಣ್ ಪ್ಲಾನ್ ರೂಪಿಸಿ ಕೊಟ್ಟಿದ್ದ. ಆತನ ಪ್ಲಾನ್ ನಂತೆ ತುಮಕೂರು ನಗರದಲ್ಲಿ ಲಾಡ್ಜ್ ರೂಂ ಬಾಡಿಗೆ ಪಡೆದು, ಕಳೆದ ಮೇ 5 ರಂದು ನಗರದ ಎಂಜಿ ರೋಡ್ ಬಳಿ ಅಟ್ಯಾಕ್ ಮಾಡಿ ಸುಮಾರು 1 ಕೆಜಿ ಚಿನ್ನಾಭರಣ ದೋಚಿ ಆರೋಪಿಗಳು ಎಸ್ಕೇಪ್ ಆಗಿದ್ದರು ಎನ್ನಲಾಗಿದೆ. ಘಟನೆ ಸಂಬಂಧ ತುಮಕೂರು ನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಡಿವೈಎಸ್ ಪಿ ಶ್ರೀನಿವಾಸ್ ನೇತೃತ್ವದಲ್ಲಿ ಮೂರು ವಿಶೇಷ ತಂಡ ರಚಿಸಿ ಆರೋಪಿಗಳಿಗೆ ಬಲೆ ಬೀಸಲಾಗಿತ್ತು. ಇನ್ನು ಚಿನ್ನಾಭರಣವನ್ನು ಕದ್ದು ಎಸ್ಕೇಪ್ ಆಗಿದ್ದ ಆರೋಪಿಗಳನ್ನು ರಾಜಸ್ಥಾನದಲ್ಲಿ ಬಂಧನ ಮಾಡಿರುವ ತುಮಕೂರು ನಗರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

(Visited 49 times, 1 visits today)