ಗುಬ್ಬಿ:
ತಾಲೂಕಿನ ಭೂ ಹಗರಣದಲ್ಲಿ ನನ್ನ ಹಿಂಬಾಲಕರಾಗಲಿ ಅಥವಾ ನನ್ನ ಒಡಹುಟ್ಟಿದವರು ಆಗಲಿ ಎಲ್ಲರನ್ನು ಜೈಲಿಗೆ ಕಳಿಸುತ್ತೇನೆ ಎಂದು ಶಾಸಕ ಎಸ್ ಆರ್. ಶ್ರೀನಿವಾಸ್ ತಿಳಿಸಿದರು.
ತಾಲೂಕಿನ ಕಸಬಾ ಹೋಬಳಿಯ ಹಳೇಗುಬ್ಬಿ, ಜ್ಯೋತಿನಗರ ಮತ್ತು ತೊರೇಹಳ್ಳಿ ಗ್ರಾಮದಲ್ಲಿ 39 ಲಕ್ಷ ರೂಗಳ ಸಿ.ಸಿ.ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ನಂತರ ಮಾತನಾಡಿದ ಅವರು ರೈತರಿಂದ ಬಂದ ಅರ್ಜಿಗಳನ್ನು ಪರಿಶೀಲಿಸಿ ತಾಲೂಕಿನಲ್ಲಿ ಎಷ್ಟು ಭೂಮಿ ಲಭ್ಯವಿದೆ ಎಂದು ಹುಡುಕಾಟ ನಡೆಸಿದಾಗ ಈ ಭೂ ದಂಧೆಯ ಅ ವ್ಯವಹಾರ ಬೆಳಕಿಗೆ ಬಂದಿದ್ದು ತಕ್ಷಣವೇ ಉಪ ವಿಭಾಗಾಧಿಕಾರಿ ಹಾಗೂ ತಾಲೂಕು ದಂಡಾಧಿಕಾರಿಗಳನ್ನು ಕರೆಯಿಸಿ ಎಲ್ಲಿ ವ್ಯತ್ಯಾಸವಾಗಿದೆ ಎಂಬುದನ್ನು ಕಂಡು ಹಿಡಿಯಲು ಹೋದಾಗ ಸುಮಾರು 99 ರಿಂದ 2002 ರವರೆಗೆ ಆಗಿನ ತಹಸಿಲ್ದಾರ್ ಅವರೇ ಜಮೀನನ್ನು ರೈತರಿಗೆ ನೀಡುತ್ತಿದ್ದು ಕೈಬರಹದ ಪಹಣಿಗಳನ್ನು ಹಾಗೂ ಎಂ ಆರ್ ಪುಸ್ತಕದಲ್ಲಿ ನೊಂದಣಿ ಮಾಡಿದ ಕಾರಣ ಈ ದಂದೆಗೆ ನಾಂದಿ ಹಾಡಲು ದಾರಿಯಾಗಿದೆ.
ಸುಮಾರು ವರ್ಷಗಳಿಂದ ಯಾವುದೇ ದಾಖಲಾತಿಗಳು ಇಲ್ಲದೆ ಜಮೀನನ್ನು ಉಳುಮೆ ಮಾಡಿ ಅದರಲ್ಲಿ ಫಸಲು ಬಿಡುವಂತಹ ಅಡಿಕೆ ತೆಂಗು ಬೆಳೆದಿದ್ದರು ಈ ಭೂ ಮಾಫಿಯಾ ದೊರೆಗಳು ಆ ರೈತನ ಜಮೀನನ್ನು ಅಧಿಕಾರಿಗಳೊಂದಿಗೆ ಬೆರೆತು ಬೇರೆಯವರಿಗೆ ಹಣ ಪಡೆದು ದಾಖಲೆಗಳನ್ನು ಸೃಷ್ಟಿಸಿದ್ದು, ಇದರಿಂದ ತಾಲೂಕಿನ 137 ರೈತರಿಗೆ ಅನ್ಯಾಯವಾಗಿದ್ದು ಈ ದಂಧೆಯನ್ನು ನಡೆಸಿದಂತಹ ಯಾವ ವ್ಯಕ್ತಿಗಳಾಗಲಿ ಅವರನ್ನು ಕರೆಯಿಸಿ ತನಿಖೆ ನಡೆಸಿ ಜೈಲಿಗೆ ಕಳಿಸಬೇಕು ಹಾಗೂ ಅವರ ಹೆಸರಿನಲ್ಲಿರುವ ಆಸ್ತಿಗಳನ್ನು ಸರ್ಕಾರ ಮುಟ್ಟಗೋಲು ಹಾಕಬೇಕು.
ಇದರಿಂದ ಮುಂದಿನ ದಿನಗಳಲ್ಲಿ ಭೂ ಮಾಫಿಯಾ ದಂದೇ ಕೋರರಿಗೆ ಎಚ್ಚರಿಕೆ ನೀಡಿದಂತಾಗುತ್ತದೆ ಎಂದರು.
ಯಾರೋ ಒಬ್ಬ ವ್ಯಕ್ತಿ ಸರಿಯಾದ ಮಾಹಿತಿಯನ್ನು ತಿಳಿಯದೆ ಪತ್ರಿಕಾಗೋಷ್ಠಿಯಲ್ಲಿ ಬೇಕಾಬಿಟ್ಟಿ ಮಾತನಾಡಿರುವುದು ಅವರ ಘನತೆಗೆ ತಕ್ಕದ್ದಲ್ಲ ಸರಿಯಾದ ಮಾಹಿತಿಯನ್ನು ಪಡೆದು ಹೇಳಿಕೆ ನೀಡಬೇಕು.
ಯಾವುದೇ ಒಬ್ಬ ರೈತ ಬಗರ್ ಹುಕ್ಕುಂಗೆ ಅರ್ಜಿ ಸಲ್ಲಿಸಿದರೆ. ಸ್ಥಳ ಪರಿಶೀಲನೆ ನಡೆಸಿ ಗ್ರಾಮಲೆಕ್ಕಿಗ, ರಾಜಸ್ವ ನಿರೀಕ್ಷಕ, ಭೂಮಾಪಕರ ವರದಿಯೊಂದಿಗೆ ತಾಲೂಕು ದಂಡಾಧಿಕಾರಿಗಳ ಸಮಕ್ಷಮದಲ್ಲಿ ಈ ಸಮಿತಿ ಆ ರೈತನಿಗೆ ಜಮೀನನ್ನು ನೀಡುತ್ತದೆ. ಕರ್ನಾಟಕ ರಾಜ್ಯದಲ್ಲಿ ಆತನು ಹೊಂದಿರುವ ಜಮೀನನ್ನು ಸಹ ಗಣನೆಗೆ ತೆಗೆದುಕೊಳ್ಳಲಾಗುತ್ತದೆ.
ಇದನ್ನು ತಿಳಿಯದ ಅವಿವೇಕಿಗಳು ಶಾಸಕರ ಹಾಗೂ ತಾಲೂಕು ದಂಡಾಧಿಕಾರಿಗಳ ಸಹಿಯನ್ನು ನಕಲು ಮಾಡಿದ್ದಾರೆ ಎಂದು ದೂರಿರುವುದು ಸತ್ಯಕ್ಕೆ ದೂರವಾದದ್ದು ಎಂದ ಅವರು ಕೈಬರಹದ ಪಾಣಿಗಳನ್ನು ತೆಗೆದುಕೊಂಡು ಈ ಭೂ ಮಾಫಿಯಾ ಗ್ಯಾಂಗ್ ಈ ರೀತಿ ಬೇನಾಮಿ ಹೆಸರಿನಲ್ಲಿ ಬೇರೆ ಬೇರೆಯವರಿಗೆ ಮಾರಾಟ ಮಾಡಿದ್ದು ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ.
ಇದನ್ನು ಮಾರಾಟ ಮಾಡಿದ ದಂದೆ ಕೋರರು ಒಂದೇ ಕೋಮಿನ ಜನಾಂಗಕ್ಕೆ ಈ ಜಮೀನುಗಳನ್ನು ಮಾರಾಟ ಮಾಡಿರುವುದು ಆಶ್ಚರ್ಯಕರ ಎಂದು ತಿಳಿಸಿದರು.
ಈಗಾಗಲೇ ವಿಚಾರಣೆಗೆ ಒಳಪಡಿಸಿರುವ ಸಂಕಿತರನ್ನು ತೀವ್ರ ವಿಚಾರಣೆಗೆ ಒಳಪಡಿಸಿ ಜೈಲಿಗೆ ಕಳಿಸಬೇಕು ಹಾಗೂ ನನ್ನ ಹಿಂಬಾಲಕರಾಗಲಿ ಯಾರೇ ಆದರೂ ಎಂತಹ ದೊಡ್ಡ ವ್ಯಕ್ತಿಯಾದರು ಅವರನ್ನು ಕಾನೂನಿನ ಚೌಕಟ್ಟಿಗೆ ಒಳಪಡಿಸಬೇಕು ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನಲ್ಲಿ ಎಸ್ಸಿ ಎಸ್ಟಿ ಕಾಲೋನಿಗಳಲ್ಲಿರುವ ಎಲ್ಲಾ ರಸ್ತೆಗಳನ್ನು ಸಿಸಿ ರಸ್ತೆಯನ್ನಾಗಿ ಮಾರ್ಪಡಿಸಿದ್ದು ಮುಂದಿನ ದಿನಗಳಲ್ಲಿ ಸರ್ಕಾರದಿಂದ ಅನುದಾನ ನೀಡಿದ್ದು ತಾಲೂಕಿನ ಎಲ್ಲಾ ರಸ್ತೆಗಳನ್ನು ಸಿಸಿ ರಸ್ತೆಗಳನ್ನಾಗಿ ಮಾರ್ಪಡಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಹೇರೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್.ಎಸ್.ಸೋಮಶೇಖರ್, ಎನ್.ಜಿ.ಬಸವರಾಜು, ಸಿ.ಯು.ರಾಜಣ್ಣ, ಕಾಂತರಾಜು, ಹುಂಡೆ ರಾಮಣ್ಣ, ರೈತ ಸಂಘದ ಸಿ.ಜಿ. ಲೋಕೇಶ್, ಬೀರೇಶ್, ಕೆ.ಎನ್. ಸತ್ಯನಾರಾಯಣ ಗಿರಿಯಪ್ಪ, ಚಂದ್ರಶೇಖರ್, ಮುಖಂಡರು, ಕಾರ್ಯಕರ್ತರು ಹಾಗೂ ಇನ್ನಿತರರು ಹಾಜರಿದ್ದರು.