ತುಮಕೂರು
ನೌಕರರ ವಿರೋಧಿ ನೀತಿಯನ್ನು ಸರ್ಕಾರ ಅನುಸರಿಸುತ್ತಿದೆ.ಇದನ್ನು ಅರಿತು ಸಂಘಟಿತರಾಗಿ ಹೋರಾಟಮಾಡಿದರೆ ಮಾತ್ರ ಹಕ್ಕುಗಳು ಪಡೆದುಕೂಳ್ಳಬಹುದು ಇಲ್ಲದಿದ್ದರೆ ಕೆಲಸದಿಂದ ವಂಚಿತರಾಗಬೇಕಾಗುತ್ತದೆ ಎಂದು ಸಿ.ಐ.ಟಿ.ಯುನ ಜಿಲ್ಲಾಧ್ಯಕ್ಷರಾದ ಸೈಯದ್ ಮುಜಿಬ್ ಎಚ್ಚರಿಸಿದರು.ಕರ್ನಾಟಕ ರಾಜ್ಯ ಗ್ರಾಮ ಪಂಚಾಯಾತಿ ನೌಕರರ ಸಂಘ ಸಿ.ಐ.ಟಿ.ಯು ನಗರದ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಹಮ್ಮಿಕೊಂಡಿದ್ದ ತುಮಕೂರು -ಹಾಸನ ಜಿಲ್ಲಾ ಮಟ್ಟದ ಕಾರ್ಯಗಾರ ಉದ್ಘಾಟಿಸಿ ಮಾತನಾಡುತ್ತಿದ್ದರು.
ಆಳುವ ಸರ್ಕಾರಗಳು ಎಲ್ಲಾ ಹಂತದಲ್ಲೂ ನೌಕರರ ವಿರೋಧಿಯಾಗಿ ನಡೆದುಕೂಳ್ಳುತ್ತದೆ.ನೌಕರರಿಗೆ ವೇತನ ಹೆಚ್ಚಳ ಮಾಡಿ ಎಂದರೆ ಹಣಕಾಸಿಕೂರತೆ ಎಂದು ಹೇಳುತ್ತದೆ ಅದರೆ ಶಾಸಕg Àವೇತನವನ್ನು ಬೆಲೆಏರಿಕೆ ನೆಪ ಹೇಳಿ ಸರ್ವಾನು ಮತದಿಂದ ಹೆಚ್ಚಳಮಾಡಿಕೂಳ್ಳುತ್ತಾರೆ. ಕೆಲವರು ನೌಕರರ ನಡುವೆ ಒಡಕನ್ನು ಉಂಟುಮಾಡುವವರ ಮಾತಿಗೆ ಕೀವಿ ಕೂಡದೆ ಹೋರಾಟ ಮಾಡುವ ಸಂಘಟನೆಯೂಂದಿಗೆ ಮುನ್ನಡೆಯಬೇಕೆಂದು ಕರೆ ನೀಡಿದರು.
ಗ್ರಾಮ ಪಂಚಾಯಾತಿ ನೌಕರರ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ರಾಮಕೃಷ್ಣ ಮಾತಾನಾಡುತ್ತಾ ಸತತ ನಾಲ್ಕು ವರ್ಷಗಳ ಹೋರಾಟದ ಪರಿಣಾಮ ಪಂಚಾಯಾತಿ ನೌಕರರ ವೇತನಕ್ಕಾಗಿ ಸರ್ಕಾರವು ಬಜೆಟ್ ನಲ್ಲಿ ಹಣ ಬಿಡುಗಡೆಮಾಡಿದೆ ಕೆಲ ಬೇಡಿಕೆಗಳನ್ನು ಈಡೇರಿಸಿಕೋಳ್ಳಲು ಸಂಘಟಿತ ಹೋರಾಟ ಕಾರಣ ಎಂದುರು.
ಗ್ರಾಮ ಪಂಚಾಯಾತಿ ನೌಕರರ ಸಂಘಟನೆಯ ಉಪಾಧ್ಯಕ್ಷರಾದ ಗೋಪಾಲಕೃಷ್ಣ ಅರಳಳ್ಳಿ ಮತನಾಡುತ್ತಾ ನೌಕರರಿಗೆ ಪಿಂಚಣಿಯ ಸಂಬಂದ ಚರ್ಚನಡೆದಿದ್ದು ಪಂಚಾಯತಿಯ ಎಲ್ಲಾ 63 ಸಾವಿರ ನೌಕರರಿಗೆ ಕಂಟ್ರಿಬೂಟರಿ ಪಿಂಚಣಿ ಕೂಡಲು ಆರ್ಥಿಕ ಇಲಾಖೆಯು ಅನುಮತಿ ನೀಡಿರುವುದರಿಂದ ತುರ್ತಾಗಿ ಪಿಂಚಣಿಯನ್ನು ಜಾರಿ ಮಾಡಬೇಕೆಂದುರು ಜಿಲ್ಲೆಯಲ್ಲಿರು ನೌಕರರ ಅನೂಮೂದನೆ, ಬಾಕಿ ವೇತನ, ಕನಿಷ್ಟ ವೇತನಜಾರಿಗಾಗಿ ಜುಲೈ 13 ರಂದು ಜಿಲ್ಲಾ ಕಾರ್ಮಿಕ ಕಚೇರಿಗೆ ಮುತ್ತಿಗೆ ಹಾಕಿ ಕನಿಷ್ಟ ವೇತನದನ್ನವಯ ಎಲ್ಲಾ ನೌಕರರಿಗೂ ಸಿಗುವಂತೆ ಕ್ರಮವಹಿಸಲು ಒತ್ತಾಯಿಸಲಾಗುವುದೆಂದರು.
ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ಸಿಬ್ಬಂದಿಗಳಿಗೆ ಅನುಸೂಚಿತ ಉದ್ದಿಮೆಗಳಿಗೆ ಅನ್ವಯವಾಗುವಂತೆ ಸರ್ಕಾರ ದಿನಾಂಕ 5-8-2016 ರಿಂದ ಕನಿಷ್ಟ ವೇತನ ನಿಗದಿ ಮಾಡಿದೆ. ಕಾನೂನುನ್ವಯ ನಿಗದಿಯಾದ 5 ವರ್ಷಕ್ಕೆ ವೇತನ ಪರಿಕ್ಷರಣೆ ಮಾಡಬೇಕು.
ಆದರೆ 6 ವರ್ಷ ಕಳೆದರು ಪರಿಕ್ಷರಣೆ ಮಾಡಿಲ್ಲ ಅದರಂತೆ ಬಿಲ್ಕಲೆಕ್ಟರ್,ಗುಮಾಸ್ತ,ಕ್ಲರ್ಕ ಕಂ ಡಾಟಾ ಎಂಟ್ರಿ ಆಪರೇಟರ್ಗಳಿಗೆ ರೂ 38000,ಜವಾನ,ನೀರಗಂಟಿ/ವಾಟರ್ ಮ್ಯಾನ್ಗಳಿಗೆ ರೂ 33000,ಕಸಗೂಡಿಸುವವರಿಗೆ ರೂ33000 ಕನಿಷ್ಟ ವೇತನ ಈ ರೀತಿ ಪರಿಕ್ಷರಣೆ ಮಾಡಬೇಕೆಂದು ಕಾರ್ಯಗಾರದ ಅಧ್ಯಕ್ಷತೆ ವಹಿಸಿ ಸಂಘದ ಜಿಲ್ಲಾಧ್ಯಕ್ಷ ಎನ್.ಕೆ.ಸುಬ್ರಮಣ್ಯ ಮಾತನಾಡುತ್ತಿದ್ದರರು.
ಸಂಘದ ಜಿಲ್ಲಾ ಕಾಂiÀರ್iದರ್ಶಿ ಹೆಚ್.ಡಿ.ನಾಗೆಶ್ ಪ್ರಸ್ತಾವಿಕ ಮತನಾಡಿ ಜಿಲ್ಲೆಯ ಬಿಲಕಲೆಕ್ಟರ್ಗಳಿಗೆ ಜೆಷ್ಟತೆಯ ಅಧಾರದಲ್ಲಿ ಕಾಲಿ ಇರುವ ಪೋಸ್ಟ್ ಗಳಿಗೆ ಬಡ್ತಿ ನೀಡಬೇಕು.ನಂತರ ಖಾಲಿಯಾದ ಬಿಲ್ ಕಲೆಕ್ಟರ ಸ್ಥಾನಕ್ಕೆ ಸೇವಾಹಿರಿತನದ ಆಧಾರದಲ್ಲಿ ಸಿಬ್ಬಂದಿಯಿಂದಲೆ ಬಡ್ತಿನೀಡಬೇಕೆಂದರು.
ಹಾಸನ ಜಿಲ್ಲಾ ಕಾರ್ಯದರ್ಶಿಹೂನ್ನೆಗೌಡ, ತಿಪಟೂರಿನ ರಾಜು,ಚಿನಾ.ಹಳ್ಳಿಯ ಶಂಕರಪ್ಪ,ಶಿರಾ ಜಗದೀಶ,ಕುಣಿಗಲ್ ಉಮೇಶ್,ಪಾವಗಡ ಸಿದೇಶ ಮುತಾಂದವರು ಮತನಾಡಿದರು.ವೇದಿಕೆಯಲ್ಲಿ ಸಿ.ಐ.ಟಿ.ಯುನ ತುಮಕೂರು ತಾಲ್ಲೂಕು ಅಧ್ಯಕ್ಷ ಷಣ್ಮಖಪ್ಪ ,ತುರುವೇಕೆರೆಯ ತಾಲ್ಲೂಕು ಮುಖಂಡ ರಮೇಶ್ ಉಪಸ್ಥಿತರಿದ್ದರು.ಪ್ರಾರಂಬದಲ್ಲಿ ಪಂಚಾಕ್ಷಾರಿ ಸ್ವಾಗತಿಸಿ, ಬಷೀರ್ ವಂದಿಸಿದರು.