ತುಮಕೂರು:


ದಾವಣಗೆರೆಯಲ್ಲಿ ಆಗಸ್ಟ್ 3 ರಂದು ಮಾಜಿ ಮುಖ್ಯಮಂತ್ರಿ, ರಾಜ್ಯ ವಿಧಾನಸಭೆಯ ವಿಪಕ್ಷನಾಯಕ ಸಿದ್ದರಾಮಯ್ಯ ಅವರ ಜನ್ಮದಿನದ ಅಮೃತೋತ್ಸವ (75 ಜನ್ಮದಿನಜೋತ್ಸವ) ಮತ್ತು ಸ್ವಾತಂತ್ರೋತ್ಸವದ ಅಮೃತ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ ಎಂದು ಅಮೃತೋತ್ಸವ ಆಚರಣಾ ಸ್ವಾಗತ ಸಮಿತಿಯ ಅಧ್ಯಕ್ಷರಾದ ಮಾಜಿ ಶಾಸಕ ಹಾಗೂ ತುಮಕೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಕೆ.ಎನ್.ರಾಜಣ್ಣ ತಿಳಿಸಿದರು.
ನಗರದ ಕನ್ನಡಭವನದಲ್ಲಿ ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಸಿದ್ದರಾಮಯ್ಯನವರು ಎಲ್ಲ ಜಾತಿ, ಧರ್ಮ, ವರ್ಗಗಳಲ್ಲಿನ ತುಳಿತಕ್ಕೆ ಒಳಗಾದವರ, ಬಡವರ, ದೀನದಲಿತರ ನಾಯಕ ಅವರು ಆ ವರ್ಗದ ನಾಯಕರು, ಅವರು ಯಾವುದೇ ಜಾತಿ, ವರ್ಗ, ಪಂಗಡಕ್ಕೆ ಸೀಮಿತವಾದವರಲ್ಲ ಎಂದು ಅವರು ಹೇಳಿದರು.
ಅಂತಹ ನಾಯಕನ ಜನ್ಮ ಅಮೃತೋತ್ಸವವನ್ನು ದಾವಣಗೆರೆಯಲ್ಲಿ ಪಕ್ಷತೀತವಾಗಿ ಅವರ ಅಭಿಮಾನಿಗಳು ಆಚರಿಸುತ್ತಿದ್ದಾರೆ ಎಂದರು.
ಈ ಕಾರ್ಯಕ್ರಮ ಅಹಿಂದ ಶಕ್ತಿಯನ್ನು ಜಾಗೃತಗೊಳಿಸುವ ಕಾರ್ಯಕ್ರಮ ಯಾರ ವಿರುದ್ದವೂ ಅಲ್ಲ ಎಂದು ಸ್ಪಷ್ಠಪಡಿಸಿದ ಅವರು ರಾಜ್ಯದೆಲ್ಲೆಡೆಯಿಂದ ಐದು ಲಕ್ಷಕ್ಕೂ ಹೆಚ್ಚಿನ ಸಿದ್ದರಾಮಯ್ಯ ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದು ಸ್ವಾಗತ ಸಮಿತಿ ಅದಕ್ಕೆ ಬೇಕಾದ ಎಲ್ಲ ಸಿದ್ದತೆಗಳನ್ನೂ ಮಾಡಿಕೊಳ್ಳುತ್ತಿದೆ ಎಂದರು.
ಮಾಝಿ ಸಚಿವ ಆರ್.ವಿ.ದೇಶಪಾಂಡೆ ಅವರ ಗೌರವಾಧ್ಯಕ್ಷತೆಯಲ್ಲಿ, ಕೆ. ಎನ್ ರಾಜಣ್ಣ ಅವರ ಅಧ್ಯಕ್ಷತೆಯಲ್ಲಿ ಸ್ವಾಗತ ಸಮಿತಿ ರಚನೆಯಾಗಿದ್ದು ಆ ಸಮಿತಿಯಲ್ಲಿ ಹಲವು ನಾಯಕರು ಸದಸ್ಯರಾಗಿದ್ದರೆ ಆ ಪೈಕಿ ತುಮಕೂರು ಜಿಲ್ಲೆಯ ಉಸ್ತುವಾರಿಗಳಾದ ಶಾಸಕ ರಘುಮೂರ್ತಿ, ಮಾಜಿ ಸಂಸದ ಚಂಧ್ರಪ್ಪ ಇಂದಿನ ಸಭೆಯಲ್ಲಿ ಭಾಗವಹಿಸಿದ್ದಾರೆ ಎಂದರು.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿದ್ದಾಗ ಮಾಡಿದ ಜನಪರವಾದ ಕಾರ್ಯಕ್ರಮಗಳನ್ನು ಹಾಗೂ ಅವರ ಜನಪರವಾದ ಆಡಳಿತವನ್ನು ಮತ್ತು ಅವರ ಅವಧಿಯಲ್ಲಿ ಆರಂಭಿಸಿದ ಜನಪರವಾಧ ಕಾರ್ಯಕ್ರಮಗಳನ್ನು ಈ ಸಮಾವೇಶದಲ್ಲಿ ಜನರಿಗೆ ಮತ್ತೊಮ್ಮೆ ಪರಿಚಯಿಸಲಾಗುವುದು ಎಂದರು.
ಕೆಲವರು ಈ ಕಾರ್ಯಕ್ರವನ್ನು ಸಿದ್ದರಾಮೋತ್ಸವ ಎಂದು ಹೇಳುತ್ತಿದ್ದಾರೆ ಆದರೆ ಈ ಕಾರ್ಯಕ್ರಮ ಸಿದ್ದರಾಮಯ್ಯ ಅವರು ಜನಪರವಾದ ಆಡಳಿತವನ್ನು ಜನರಿಗೆ ಪರಿಚಯಿಸುವ ಕಾರ್ಯಕ್ರಮ ಮಾತ್ರ, ಸಿದ್ದರಾಮಯ್ಯ ಅವರು ಎಂದಿಗೆ ತಮ್ಮ ಜನ್ಮದಿವನ್ನು ಆಚರಿಸಿಕೊಳ್ಳುವುದಕ್ಕೆ ಇಚ್ಚಿಸುವುದಿಲ್ಲ ಅವರ ಬೆಂಬಲಿಗರು ಈ ಕಾರ್ಯಕ್ರಮ ಮಾಡುತ್ತಿರುವುದಾಗಿ ರಾಜಣ್ಣ ತಿಳಿಸಿದರು.
ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದು ಕಾಂಗ್ರೆಸ್ ಪಕ್ಷವೇ ವಿನಃ ಬೇರೆ ಪಕ್ಷಗಳು ಅಲ್ಲ, ಆದರೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಅನುಭವವೇ ಇಲ್ಲದ ಬಿಜೆಪಿಯವರು ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟವರು ತಾವು ಎಂದು ಸುಳ್ಳು ಹೇಳುತ್ತಿದ್ದಾರೆ ಎಂದರು.
ಆಗಸ್ಟ್ 15 ರಂದು ಆಗಸ್ಟ್ 15 ರಂದು ಸ್ವಾತಂತ್ರ್ಯೋತ್ಸವದ 75ನೇ ವರ್ಷಾಚರಣೆಯ ಅಂಗವಾಗಿ ಬೆಂಗಳೂರಿನಲ್ಲಿ 75 ಕಿಮಿ ನಡಿಗೆ ಹಮ್ಮಿಕೊಂಡಿರುವುದಾಗಿ ತಿಳಿಸಿದ ಅವರು ಅದೇ ರೀತಿ ರಾಜ್ಯದ ಎಲ್ಲ ವಿಧಾನ ಸಭಾ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಪಕ್ಷವು 75 ಕಿಮಿ ಗಳ ಸ್ವಾತಂತ್ರ್ಯ ನಡಿಗೆಯನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾಜಿ ಶಾಸಕರಾದ ಡಾ.ರಫೀಕ್ ಅಹಮದ್, ಸಾ.ಲಿಂಗಯ್ಯ, ಆಡಿಟರ್ ಆಂಜಿನಪ್ಪ, ಎಸ್.ನಾಗಣ್ಣ ಇತರರು ಹಾಜರಿದ್ದರು.

(Visited 7 times, 1 visits today)