ಗುಬ್ಬಿ:


ತಾಲೂಕಿನ ಶಾಸಕರು ಅಸಮರ್ಥರಾಗಿದ್ದು ಕಮಿಟಿಯ ಅಧ್ಯಕ್ಷರಾದವರೇ ಭ್ರಷ್ಟಾಚಾರಿಗಳಾದರೆ ಜನಸಾಮಾನ್ಯರ ಗತಿ ಏನು ಎಂದು ಕಾಂಗ್ರೆಸ್ ಮುಖಂಡ ಹೊನ್ನಗಿರಿಗೌಡ ಅವರು ಶಾಸಕರ ವಿರುದ್ಧ ಕಿಡಿಕಾರಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು 20 ವರ್ಷಗಳಿಂದ ಅಧಿಕಾರದ ಚುಕ್ಕಾಣಿ ಹಿಡಿದಿರುವ ಶಾಸಕ ತನ್ನ ಹಿಂಬಾಲಕರ ಟೀಮ್ ಕಟ್ಟಿಕೊಂಡು ತಾಲೂಕಿನಾದ್ಯಂತ ಭ್ರಷ್ಟಾಚಾರ ವೆಸಿಗಿದ್ದು ಇದನ್ನು ಪ್ರಶ್ನೆಸಲು ಹೋದ ಸಾರ್ವಜನಿಕರಿಗೆ ಧಮ್ಕಿ ಹಾಕುವಂತಹ ಈ ಶಾಸಕರ ಸ್ಥಾನದಲ್ಲಿರಲು ಅರ್ಹರಲ್ಲ. ಭೂ ಹಗರಣದ ರೂವಾರಿ ನೀವೇ ಅಲ್ಲವೇ ಎಂದು ಪ್ರಶ್ನಿಸಿದರು.
ಇದೇ ತಿಂಗಳ 25 ಸೋಮವಾರದಂದು ಕಾಂಗ್ರೆಸ್ ಪಕ್ಷದ ವತಿಯಿಂದ ಕಾರ್ಯಕರ್ತರುಗಳು ಹಾಗೂ ನೋಂದ ರೈತರಗಳ ಜೊತೆ ಬೃಹತ್ ಪ್ರತಿಭಟನೆ ಯೊಂದಿಗೆ ನ್ಯಾಯ ಒದಗಿಸುವಂತೆ ಹಾಗೂ ಸಿ ಓಡಿ ತನಿಖೆಗೆ ಒಳಪಡಿಸುವಂತೆ ಆಗ್ರಹಿಸಿ ಜಿಲ್ಲಾ ಮುಖಂಡರು ಹಾಗೂ ತಾಲೂಕು ಮುಖಂಡರುಗಳ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದ ಅವರು ಪಕ್ಷದಿಂದ ಹುಚ್ಚಾಟಿತರಾದ ವಾಸು ರವರು ಶಾಸಕ ಗಿರಿಯನ್ನು ನಿಭಾಯಿಸಲು ಅಸಮರ್ಥರಾಗಿದ್ದಾರೆ. ಭೂ ನ್ಯಾಯ ಮಂಡಳಿಯ ಅಧ್ಯಕ್ಷ ಗಿರಿಯಲ್ಲಿದ್ದು ಕಮಿಟಿಯ ಸದಸ್ಯರುಗಳು ಹಾಗೂ ಅಧಿಕಾರಿಗಳನ್ನು ತನ್ನ ಅಧಿಕಾರ ದರ್ಪದಿಂದ ಈ ಭ್ರಷ್ಟಾಚಾರಕ್ಕೆ ಅನುವು ಮಾಡಿಕೊಟ್ಟು ತಾಲೂಕಿನ ರೈತರ ಕಣ್ಣಲ್ಲಿ ರಕ್ತಹರಿಸುವಂತೆ ಮಾಡಿರುವುದು ಎಷ್ಟು ಸಮಂಜಸ ಎಂದು ತಿಳಿಸಿದರು.
ಕಾಂಗ್ರೆಸ್ ಮುಖಂಡರ ಹಾಗೂ ವಕೀಲರಾದ ಜಿ.ಎಸ್ ಪ್ರಸನ್ನ ಕುಮಾರ್ ಮಾತನಾಡಿ ಇತಿಹಾಸ ಪ್ರಸಿದ್ಧ ಗುಬ್ಬಿಯು ಇಂದು ದಲಿತರ ಬೇಟೆ, ತಳಮಟ್ಟದ ಸಾರ್ವಜನಿಕರಲ್ಲಿ ದಾದಾಗಿರಿ ಭೂ ಕಬಳಿಕೆಯ ಹಗರಣ ದಿಂದ ಗುಬ್ಬಿ ಯು ಪ್ರಸಿದ್ಧವಾಗುತ್ತಿದ್ದು ಇದರಿಂದ ಗುಬ್ಬಿಯ ಘನತೆ ಹಾಳಾಗುತ್ತಿದೆ. ತಮ್ಮ ಹಿಂಬಾಲಕರೇ ಭಾಗಿಯಾಗಿರುವುದು ಇವರ ಗಮನಕ್ಕೆ ಬಂದಿಲ್ಲವೇ. ತಾವೇ ಬ್ರಷ್ಟಾಚಾರಿಗಳನ್ನು ಹಿಡಿದು ಕೊಟ್ಟಿದ್ದೇನೆ ಎಂದು ಸಾರ್ವಜನಿಕರ ಎದುರಿನಲ್ಲಿ ಹಾಗೂ ಮಾಧ್ಯಮದವರ ಮುಂದೆ ಹೇಳಿಕೆ ನೀಡಿ ತಮ್ಮ ಕಾಲ ಮೇಲೆ ತಾವೇ ಕಲ್ಲನ್ನು ಎಳೆದುಕೊಂಡಂತಾಗಿರುವುದು ವಿಪರ್ಯಾಸ. 20 ವರ್ಷಗಳ ಶಾಸಕರ ಅಭಿವೃದ್ಧಿಯು ಶೂನ್ಯವಾಗಿದ್ದು ಅಧಿಕಾರಿಗಳನ್ನು ಅಡ್ಡದಾರಿ ಹಿಡಿಸಿ ದಾಖಲಾತಿಗಳನ್ನು ತಿದ್ದಿಸಿರುವುದು ಒಂದೆಡೆಯಾದರೆ ತಾಲೂಕಿನಾದ್ಯಂತ ಗುರುತಿಸುವಂತಹ ಯಾವುದೇ ಕೆಲಸಗಳನ್ನು ಮಾಡದೇ ಇರುವುದು ಈ ತಾಲೂಕಿನ ಜನತೆಯ ದುರಾದೃಷ್ಟವೇ ಸರಿ ಎಂದು ಆರೋಪಿಸಿದರು.
ತಾಲೂಕು ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿಯ ಅಧ್ಯಕ್ಷ ಸಲಿಂ ಪಾಷಾ ಮಾತನಾಡಿ 15 ವರ್ಷಗಳಿಂದ ಈ ತಾಲೂಕಿನಲ್ಲಿ ಶಾಸನಬದ್ಧ ಶಾಸಕರಿಲ್ಲ. ಕೇವಲ ವಾಸಣ್ಣ ಎಂಬ ವ್ಯಕ್ತಿ ಮಾತ್ರ ಅಧಿಕಾರ ನಡೆಸುತ್ತಿದ್ದು ಅಧಿಕಾರ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯದೆ ಕೇವಲ ಭ್ರಷ್ಟಾಚಾರ ಹಿಂಬಾಲಕರ ದೌರ್ಜನ್ಯ ಇವುಗಳನ್ನು ಬೆಳೆಸಿದಂತಹ ಶಾಸಕರು ತಾನು ಬೆಳೆಸಿದ ಪಕ್ಷಕ್ಕೆ ಹಾಗೂ ಅಧಿಕಾರ ತಂದು ಕೊಟ್ಟಂತಹ ಪಕ್ಷಕ್ಕೆ ದ್ರೋಹವೆಸಗಿದಂತ ವ್ಯಕ್ತಿ ನಮ್ಮ ಪಕ್ಷಕ್ಕೆ ಅವಶ್ಯಕತೆ ಇಲ್ಲ. ತಾಲೂಕು ಸಮಿತಿಯು ತೀರ್ಮಾನದಂತೆ ಶಾಸಕನ ಆಯ್ಕೆಯನ್ನು ಮಾಡಲಾಗುತ್ತದೆ. ಶಾಸಕರ ವಿರುದ್ಧ ಯಾವುದೇ ಪಕ್ಷದ ವ್ಯಕ್ತಿಗಳು ಪತ್ರಿಕಾ ಹೇಳಿಕೆ ನೀಡಿದರೆ ಆದಿ ಬೀದಿಯಲ್ಲಿ ಹೋಗುವವರ ಹೇಳಿಕೆಗೆ ನಾನು ಉತ್ತರ ನೀಡುವುದಿಲ್ಲ ಎಂಬ ಉಡಾಫೆ ಹೇಳಿಕೆಯನ್ನು ನೀಡುತ್ತಿರುವುದು.
ಒಂದೆಡೆಯಾದರೆ ಈ ಶಾಸಕ ರಾಜ ಮನೆತನದಲ್ಲಿ ಹುಟ್ಟಿದವರಲ್ಲ. ಇವರು ಜನಸಾಮಾನ್ಯರಂತೆ ಇದ್ದ ವ್ಯಕ್ತಿ ಅದೃಷ್ಟವಶ ಶಾಸಕನ ಸ್ಥಾನ ಸಿಕ್ಕಿರುವುದು ನೆತ್ತಿಗೇರಿದೆ. ಶಾಸಕ ಸ್ಥಾನದಲ್ಲಿರಲು ಅರ್ಹರಲ್ಲ. ನೀವೇ ದೊಡ್ಡ ಭ್ರಷ್ಟಾಚಾರಿಗಳು ತಾಲೂಕು ಭೂ ಕಬಳಿಕೆ ಬಗ್ಗೆ ತನಿಖೆ ನಡೆಸಲು ಕೇವಲ ಕಣ್ಣೊರೆಸುವ ತಂತ್ರವಾಗಿದೆ. ಇದರಿಂದ ತಾಲೂಕು 20 ವರ್ಷದಿಂದ ಅಧಿಕಾರ ಕೊಟ್ಟಂತ ಮತದಾರರಿಗೆ ತಕ್ಕ ಉತ್ತರವನ್ನು ನೀಡುವಂತ ಸಮಯ ದೂರವಿಲ್ಲ ಎಂದು ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರಗೇನಹಳ್ಳಿ ನರಸಿಂಹಯ್ಯ ಮಾತನಾಡಿ ಹುಚ್ಚಾಟಿತ ಶಾಸಕರ ವಿರುದ್ಧ ಜೆಡಿಎಸ್ ಪ್ರತಿಭಟನೆ, ಬಿಜೆಪಿಯ ಪತ್ರಿಕಾ ಹೇಳಿಕೆ, ನಮ್ಮ ಪಕ್ಷದಿಂದ ಹೋರಾಟ ಇವೆಲ್ಲವುಗಳ ನಡುವೆ ಸಿ ಓಡಿ ತನಿಖೆಗೆ ಆಗ್ರಹಿಸಿದರೂ ಸರ್ಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರವು ಕಣ್ಮುಚ್ಚಿ ಕುಳಿತಿದೆ ಇಷ್ಟೆಲ್ಲ ಹಗರಣ ವಾದರು ಜಿಲ್ಲೆಯ ಮೂರು ಜನ ಮಂತ್ರಿಗಳಿದ್ದರೂ ಸಹ ಈ ಪ್ರಕರಣದ ಬಗ್ಗೆ ಚಕಾರವೆತ್ತದೆ ಇರುವುದು ಕಾರಣ ಏನು. ಎಲ್ಲೋ ಒಂದು ಕಡೆ ಶಾಸಕ ಶ್ರೀನಿವಾಸ್ ಬಗ್ಗೆ ಮೃದು ಧೋರಣೆ ತಳೆಯುತ್ತಿರುವ ತಾಲೂಕಿನ ಜನತೆಯಲ್ಲಿ ಅನುಮಾನ ಮೂಡಲು ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಭೂಕಬಳಿಕೆಯ ವ್ಯಕ್ತಿಗಳಿಗೆ ಸರಿಯಾದ ಪಾಠ ಕಲಿಸಬೇಕು. ಇದರಿಂದ ತಾಲೂಕಿನಲ್ಲಿ ಯಾವುದೇ ಅನ್ಯಾಯ ಕ್ಕೆ ಬೆಲೆಯಿಲ್ಲ ಎಂದು ಸಾಬೀ ತಾಗುತ್ತದೆ. ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ಟಿ.ಆರ್. ಚಿಕ್ಕ ರಂಗೇಗೌಡ, ಜಿ. ವಿ.ಮಂಜುನಾಥ್, ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ನರಸಿಂಹ ಮೂರ್ತಿ, ಮಾರಯ್ಯ, ನಗರಾಧ್ಯಕ್ಷ ಶಿವಾನಂದ್, ಮಂಜುನಾಥ್, ಮಹಮದ್ ಸಾದಿಕ್, ವಸಂತಮ್ಮ, ರೂಪ, ವಿಜಿಯಮ್ಮ, ಕಮಲಮ್ಮ , ನಾಗರತ್ನಮ್ಮ, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.

(Visited 7 times, 1 visits today)