ಗುಬ್ಬಿ:


ತಾಲೂಕಿನ ಜನತೆಯನ್ನು ತಾನು ಗೆದ್ದಂತ ಪಕ್ಷದಿಂದ ಬೇರೆ ಪಕ್ಷಕ್ಕೆ ಅಡವಿಡುತ್ತಿದ್ದಾರೆ ಎಂದು ವಕೀಲ ಹಾಗೂ ಕಾಂಗ್ರೆಸ್ ಮುಖಂಡ ಜಿ.ಎಸ್.ಪ್ರಸನ್ನ ಕುಮಾರ್ ಶಾಸಕರ ವಿರುದ್ಧ ಕಿಡಿಕಾರಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಿಂದ ಪ್ರತಿಭಟನೆ ನಡೆಸಿ ತಾಲೂಕು ದಂಡಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ನಂತರ ಮಾತನಾಡಿದ ಅವರು ಜೆಡಿಎಸ್ ಪಕ್ಷದ ಚಿನ್ನೆ ಮೇಲೆ ಗೆದ್ದಂತ ಶಾಸಕ ತನ್ನ ಮತವನ್ನು ಬಿಜೆಪಿಗೆ ಮಾರಿಕೊಂಡ ನಂತರ ಜೆಡಿಎಸ್ ಪಕ್ಷದಿಂದ ಹೊರ ಹಾಕಿದ ನಂತರ ದಿ. 5- 7- 2022 ರಂದು ತನ್ನ ಲೆಟರ್ ಹೆಡ್ಡಿನಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ತೀರ ಹಿಂದುಳಿದ ಪ್ರದೇಶ ಹಾಗಾಗಿ 100 ಕೋಟಿ ರೂಗಳನ್ನು ತನ್ನ ತಾಲೂಕಿನ ಅಭಿವೃದ್ಧಿಗೆ ಬಿಡುಗಡೆ ಮಾಡಬೇಕೆಂದು ಪತ್ರ ಬರೆದಿರುವುದು ಪಕ್ಷದಿಂದ ಹುಚ್ಚಾಟಿಸಿದ ನಂತರ ಇದರಿಂದ ಗುಬ್ಬಿ ತಾಲೂಕಿನ ಜನತೆಯ ಕಣ್ಣಿಗೆ ಮಣ್ಣು ಎರಚುವಂತಹ ಹುನ್ನಾರಿನಲ್ಲಿದ್ದಾರೆ. ಕೇವಲ ಚುನಾವಣೆಯು ಎಂಟು ತಿಂಗಳಲ್ಲಿ ಇರುವುದು ಸರಿ ಅಷ್ಟೇ. 20 ವರ್ಷಗಳಿಂದ ಆಡಳಿತ ನಡೆಸಿದಂತಹ ಗುಬ್ಬಿಯ ಶಾಸಕ ಹಿಂದುಳಿದ ಪ್ರದೇಶವೆಂದು ಈಗ ಅರಿವಾಗಿದೆಯೇ. ಇದರಿಂದ ಮುಂದಿನ ದಿನಗಳಲ್ಲಿ ಮತದಾರರು ಪ್ರಭುವು ಈ ನಾಟಕಕ್ಕೆ ತೆರೆ ಎಳೆಯುತ್ತಾರೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ರಾಮಕೃಷ್ಣಯ್ಯ ಮಾತನಾಡಿ ತಾಲೂಕಿನ ರೈತರಿಗೆ ಆದ ಅನ್ಯಾಯವನ್ನು ಕಾಂಗ್ರೆಸ್ ಪಕ್ಷವು ಪ್ರತಿಭಟಿಸುತ್ತಿದ್ದು ಅನ್ಯಾಯಕ್ಕೆ ಒಳಗಾದ ರೈತರಿಗೆ ನ್ಯಾಯ ಒದಗಿಸಿಕೊಡಲು ಕಾಂಗ್ರೆಸ್ ಪಕ್ಷವು ಸದಾ ಸಿದ್ಧವಿರುತ್ತದೆ. 20 ವರ್ಷಗಳಿಂದ ಶಾಸನಬದ್ಧ ಅಧಿಕಾರ ವನ್ನು ಚಲಾಯಿಸಲು ಇಲ್ಲಿನ ಶಾಸಕ ವಿಫಲರಾಗಿದ್ದಾರೆ. ಗುಬ್ಬಿ ತಾಲೂಕು ಅತ್ಯಂತ ಹಿಂದುಳಿದ ತಾಲೂಕು ಎಂದು ತೀರ್ಮಾನಿಸಲು 20 ವರ್ಷ ಗಳು ಬೇಕಾಯಿತೆ ಎಂದು ಪ್ರಶ್ನಿಸಿದ ಅ ವರು. ಯಾವುದೇ ರಾಜಕಾರಣಿಗಳಾಗಲಿ, ಅಧಿಕಾರಿಗಳಾಗಲಿ, ಸಿಓಡಿ ತನಿಖೆಗೆ ಒಳಪಡಿಸಬೇಕು ಮುಂದಿನ ದಿನಗಳಲ್ಲಿ ಅನ್ಯಾಯಕ್ಕೊಳ್ಳಗಾದ ರೈತರುಗಳು ಮುಂದಿನ ದಿನಗಳಲ್ಲಿ ಉಪವಾಸ ಸತ್ಯಾಗ್ರಹ ವ ನ್ನು ಕಾಂಗ್ರೆಸ್ ಪಕ್ಷದಿಂದ ಹಮ್ಮಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.
ತಾಲೂಕು ಕಾಂಗ್ರೆಸ್ ಮುಖಂಡ ಹೊನ್ನಗಿರಿ ಗೌಡ ಮಾತನಾಡಿ ಸ್ಥಳೀಯ ಶಾಸಕರ ನಿರ್ಲಕ್ಷ್ಯದಿಂದ ತಾಲೂಕಿನ ರೈತರು ಕಣ್ಣೀರಿಡುವಂತಾಗಿದೆ ಬೇನಾಮಿ ಆಸ್ತಿಗೊಳಿಸಲು ಶಾಸಕರ ಕುಮ್ಮಕ್ಕು ಹೆಚ್ಚಾಗಿದ್ದು ಇದನ್ನು ಒಳಪಡಿಸಬೇಕು. ಎಂದ ಅವರು ತಾಲೂಕಿನ ಶಾಸಕರ ಗೋಸುಂಬೆ ಅವತಾರವನ್ನು ಬಿಜೆಪಿ ಮುಖಂಡರು ಹಾಗೂ ಕಾಂಗ್ರೆಸ್ ಮುಖಂಡರು ನೋಡುತ್ತಿದ್ದು ಕಾಂಗ್ರೆಸ್ಸಿನಲ್ಲಿ ಯಾವುದೇ ಜವಾಬ್ದಾರಿಯನ್ನು ನೀಡದಿರಲು ತೀರ್ಮಾನಿಸಿದೆ.
ಇವರಿಗೆ ಕಾಂಗ್ರೆಸ್ಸಿನ ಟಿಕೆಟ್ ಕನಸಿನ ಮಾತಾಗಿದೆ. ಭೂ ಕಬಳಿಕೆ ಬಗ್ಗೆ ಸಾಕಷ್ಟು ಚರ್ಚೆಯಾಗಿದ್ದರು ಇಲ್ಲಿಯವರೆಗೂ ತನಿಖೆಗೆ ಒಳಪಡಿಸದೇ ಇರುವುದು ಕಾರಣವೇನು ಎಂದು ಪ್ರಶ್ನಿಸಿದವರು ಅವರು ಗುಬ್ಬಿಯ ಒಳಚರಂಡಿ ವ್ಯವಸ್ಥೆಗೆ 28 ಕೋಟಿ ಹಣ ನೀಡಿದರು. ಈ ಕಾಮಗಾರಿಯು ಹಳ್ಳಹಿಡಿಯಲು ಶಾಸಕರೇ ಕಾರಣ ಎಂದು ಕಿಡಿ ಕಾರಿದ ಅವರು ತಾಲೂಕಿನಲ್ಲಿ ಅಭಿವೃದ್ಧಿ ಕುಂಠಿತವಾಗಿದ್ದು ಕೇವಲ ಬೂಟಾಟಿಕೆಯ ಮಾತುಗಳಿಗೆ ಮರುಳಾಗದೆ ಮುಂದಿನ ದಿನಗಳಲ್ಲಿ ಸರಿಯಾದ ಪಾಠ ಕಲಿಸಬೇಕು ಎಂದು ತಿಳಿಸಿದರು.
ಮುರಳೀಧರ ಹಾಲಪ್ಪ ಮಾತನಾಡಿ ರೈತರಿಗೆ ಆದ ಅನ್ಯಾಯವನ್ನು ಸರಿಪಡಿಸಲು ಶಾಸಕರು ವಿಫಲರಾಗಿದ್ದಾರೆ ಅಧಿಕಾರಿಗಳ ಹಾಗೂ ರಾಜಕಾರಣಿಗಳ ತನಿಖೆ ಆಗಬೇಕು ತನಿಖೆಯನ್ನು ವರ್ಗಾಯಿಸಬೇಕು. ಭೂ ಅಗರಣದ ವಿಚಾರವಾಗಿ ಜಿಲ್ಲೆಯ ಸಂಸದರು ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಮೌನವನ್ನು ತಾಳಿರುವುದು ಎಲ್ಲೋ ಒಂದು ಕಡೆ ತನಿಖೆ ಹಳ್ಳ ಹಿಡಿಯುವ ದಾರಿಯನ್ನು ಸಾಗುತ್ತಿದೆ. ಶಾಸಕರು ಹಿಂಬಾಲಕರ ಕುಟುಂಬದವರು ಮತ್ತು ಹಣವಂತರು ಅಕ್ರಮವಾಗಿ ಮಂಜೂರಾತಿಯನ್ನು ಪಡೆದು ಭ್ರಷ್ಟ ಅಧಿಕಾರಿಗಳನ್ನು ಬಳಸಿಕೊಂಡು ಸರ್ಕಾರಿ ದಾಖಲೆಗಳನ್ನು ತಿದ್ದಿ ಮತ್ತು ನಕಲಿ ದಾಖಲೆಗಳನ್ನು ಸೃಷ್ಟಿಸಿ ತಾಲೂಕಿನಲ್ಲಿ 30 ವರ್ಷಗಳಿಂದ ರೈತರು ಉಳುಮೆ ಮಾಡುತ್ತಿರುವ ಜಮೀನುಗಳನ್ನು ನಿಜವಾದ ಉಳುಮೆ ದಾರಿಗೆ ನೀಡುವಂತೆ ಸಭೆಯಲ್ಲಿ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಎಸ್ ಎಲ್ ನರಸಿಂಹಯ್ಯ, ನಗರಾಧ್ಯಕ್ಷ ಶಿವಾನಂದ್, ತಾಲೂಕು ಅಲ್ಪಸಂಖ್ಯಾತರ ಪ್ರಚಾರ ಸಮಿತಿಯ ಅಧ್ಯಕ್ಷರಾದ ಸಲೀಂ ಪಾಷಾ, ಮುಖಂಡರಾದ ಟಿ .ಆರ್ ಚಿಕ್ಕ ರಂಗೇಗೌಡ, ಮಂಜುನಾಥ್ ಜಿ.ವಿ, ಶಂಕರಾ ನಂದ, ಸೌಭಾಗ್ಯಮ್ಮ, ವಿಜಯಮ್ಮ, ನಾಗರತ್ನಮ್ಮ, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ತಾಲೂಕಿನ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.

(Visited 1 times, 1 visits today)