ತುಮಕೂರು:
ನಾವು ನವೀಕರಿಸಬಹುದಾದ ಶಕ್ತಿಯ ಮೂಲದಿಂದ 1,63,000 ಮೆ.ವ್ಯಾ. ವಿದ್ಯುತ್‍ನ್ನು ಉತ್ಪಾದಿಸುತ್ತಿದ್ದೇವೆ. ನಾವು ಪ್ರಪಂಚದಲ್ಲೇ ಅತೀ ವೇಗವಾಗಿ ವಿದ್ಯುತ್ ಉತ್ಪಾದಿಸುವ ಸಲಕರಣೆಗಳನ್ನು ಸ್ಥಾಪಿಸುತ್ತಿದ್ದೇವೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರಾದ ಬಿ.ಸಿ. ನಾಗೇಶ್ ಅವರು ತಿಳಿಸಿದರು.
2030ಕ್ಕೆ ನವೀಕರಿಸಬಹುದಾದ ಶಕ್ತಿಯ ಮೂಲದಿಂದ ನಮ್ಮ ಉತ್ಪಾದನಾ ಸಾಮಥ್ರ್ಯವು 40% ಆಗಿದ್ದು, ಈ ಗುರಿಯನ್ನು ನಾವು ಈಗಾಗಲೇ ನವೆಂಬರ್ 2021ರಲ್ಲೇ ಸಾಧಿಸಿದ್ದೇವೆ. ಹೀಗಾಗಿ ನಿಗಧಿತ ಸಮಯಕ್ಕಿಂತ 9 ವರ್ಷಗಳ ಮುಂಚಿತವಾಗಿ ಗುರಿಯನ್ನು ಸಾಧಿಸಿದ್ದೇವೆ ಎಂದರು.
‘ಉಜ್ವಲ ಭಾರತ ಉಜ್ವಲ ಭವಿಷ್ಯ’ ವಿದ್ಯುಚ್ಛಕ್ತಿ @ 2047 ವಿದ್ಯುತ್ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಹಿಂದೆ ವಿದ್ಯುತ್ ಸಂಪರ್ಕ ಇಲ್ಲದೆ ರೈತರು ಪರದಾಡುವಂತಾಗಿತ್ತು. ದೇಶದ 36 ಸಾವಿರಕ್ಕಿಂತ ಹೆಚ್ಚು ಹಳ್ಳಿಗಳು ವಿದ್ಯುತ್ ಕಂಡಿರಲಿಲ್ಲ. ಪ್ರಧಾನಿ ಮೋದಿಯವರು ಗ್ರಾಮೀಣ ವಿದ್ಯುಧೀಕರಣ ಸಭೆಗಳನ್ನು ಕಾಲಕಾಲಕ್ಕೆ ನಡೆಸಿದ ಕಾರಣ ಇಂದು ಹಲವಾರು ಯೋಜನೆಗಳ ಮೂಲಕ 5 ವರ್ಷಗಳಲ್ಲಿ ದೇಶದ ಎಲ್ಲ ಹಳ್ಳಿಗಳಿಗೂ ವಿದ್ಯುತ್ ಸಂಪರ್ಕ ಒದಗಿಸಲಾಗಿದೆ.
ಇದೀಗ ದೇಶದ ಎಲ್ಲ ಹಳ್ಳಿಗಳಲ್ಲಿ ವಿದ್ಯುತ್ ಸರಬರಾಜು ಆಗಿರುವುದು ಹೆಮ್ಮೆಯ ವಿಷಯ ಎಂದರು.
ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಎಲ್ಲೇ ವಿದ್ಯುತ್ ಉತ್ಪಾದನೆ ಮಾಡಿದರೂ ವಿದ್ಯುತ್ ಕೊರತೆ ಇರುವ ರಾಜ್ಯಗಳಿಗೆ ವಿತರಣೆ ಮಾಡಲಾಗುತ್ತಿದೆ. ದೇಶದಲ್ಲಿ ವಿದ್ಯುತ್ ಲಭ್ಯತೆ ಹೆಚ್ಚಿರುವ ಕಾರಣ ಜಗತ್ತಿನ ಹಲವು ಸಂಸ್ಥೆಗಳು ದೇಶದಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರುತ್ತಿವೆ. ಕಳೆದ 65 ವರ್ಷಗಳಲ್ಲಿ ಮಾಡದ ವಿದ್ಯುತ್ ಉತ್ಪಾದನೆಯನ್ನು ನಾವಿಂದು 10 ವರ್ಷಗಳಲ್ಲಿ ಸಾಧಿಸಿದ್ದೇವೆ ಎಂದರು.
ಕೈಗಾರಿಕೆಗಳಿಗೆ, ರೈತರ ಹೊಲಗಳಿಗೆ, ಮನೆಗಳಿಗೆ, ವಿದ್ಯುತ್ ನೀಡಬೇಕೆಂಬ ಕಾರಣ ಅಸಾಂಪ್ರದಾಯಿಕ ವಿದ್ಯುತ್ ಉತ್ಪಾದನೆಗೆ ಒತ್ತು ನೀಡಲಾಗುತ್ತಿದೆ. ಹೊಸ ಆಧುನಿಕ ತಂತ್ರಜ್ಞಾನ ಬಳಸಿ ವಿದ್ಯುತ್ ಉತ್ಪಾದನೆ ಮಾಡುವುದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೋಟಿಗಟ್ಟಲೆ ಅನುದಾನ ನೀಡುತ್ತಿವೆ ಎಂದರು.
ಮಾಲಿನ್ಯ ರಹಿತ ವಾತಾವರಣ ಸೃಷ್ಟಿಗೆ ವಿದ್ಯುತ್ ಒಂದೇ ಪರಿಹಾರವಾಗಿದೆ. ಮಾಲಿನ್ಯವನ್ನು ಕಡಿಮೆ ಮಾಡಿ ಎಲ್ಲರ ಆರೋಗ್ಯವನ್ನು ಕಾಪಾಡುವ ಧ್ಯೇಯವನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಹೊಂದಿವೆ. ಉಜ್ವಲ ಯೋಜನೆಯ ಮೂಲಕ ಅರ್ಹ ಫಲಾನುಭವಿಗಳ ಮನೆಗಳಿಗೆ ಅನಿಲ ಸಂಪರ್ಕ, ಬೆಳಕು ಯೋಜನೆಯ ಮೂಲಕ ಬಡವರ ಮನೆಗಳಿಗೆ ಉಚಿತ ವಿದ್ಯುತ್ ಸಂಪರ್ಕ ನೀಡಲಾಗಿದೆ. ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚು ಉತ್ತೇಜನ ನೀಡುವ ಮೂಲಕ ಮಾಲಿನ್ಯ ಕಡಿಮೆ ಮಾಡಲು ಮತ್ತು ವಿದ್ಯತ್ ವಾಹನಗಳ ರೀಚಾರ್ಜಿಂಗ್ ಸ್ಟೇಷನ್‍ಗಳ ಸ್ಥಾಪನೆಗೆ ಕ್ರಮ ವಹಿಸಲಾಗುತ್ತಿದೆ ಎಂದು ವಿವರಿಸಿದರು.
ರೂಫ್ ಟಾಪ್ ಸೋಲಾರ್ ಘಟಕವನ್ನು ಎಲ್ಲರೂ ಅಳವಡಿಸಿಕೊಳ್ಳುವಂತಾಗಬೇಕು. ಸೋಲಾರ್ ಹೀಟರ್ ಬಳಸುವ ಮೂಲಕ ವಿದ್ಯುತ್ ಉಳಿಸಿ, ಉಳಿಸಿದ ವಿದ್ಯುತ್‍ನ್ನು ದೇಶದ ಸದ್ಭಳಕೆಗೆ ಬಳಸಲು ಎಲ್ಲರೂ ಕೈ ಜೋಡಿಸಬೇಕು ಎಂದ ಅವರು, ಈ ವರ್ಷದ ಅಕ್ಟೋಬರ್ ವೇಳೆಗೆ ಅರಸೀಕೆರೆವರೆಗೂ ವಿದ್ಯುತ್ ಮಾರ್ಗ ವಿಸ್ತರಣೆ ಆಗಿ ಚಾಲನೆಗೆ ಬರಲಿದೆ ಎಂದರು.
ನಂತರ ಮಾತನಾಡಿದ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು, ಅಸಾಂಪ್ರದಾಯಿಕ ವಿಧಾನಗಳಾದ ಸೌರಶಕ್ತಿ, ಪವನ ಶಕ್ತಿಯಿಂದ ವಿದ್ಯುತ್ ಉತ್ಪಾದನೆ ಮಾಡುವುದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಉದ್ದೇಶವಾಗಿದೆ. 2047ರ ವೇಳೆಗೆ ಈ ನಿಟ್ಟಿನಲ್ಲಿ ಸಂಪೂರ್ಣ ಗುರಿ ಸಾಧಿಸುವುದು ಸರ್ಕಾರಗಳ ಉದ್ದೇಶವಾಗಿದೆ ಎಂದರು.
ಬೆಳಕು ಅಥವಾ ವಿದ್ಯುತ್ ಇಲ್ಲದೆ ಯಾವ ಕಾರ್ಖಾನೆಯೂ, ಯಾವ ದೇಶ, ಯಾವ ರೈತರು ಸಹ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ವಿದ್ಯುತ್ ಇದ್ದಲ್ಲಿ ಮಾತ್ರ ಬೆಳಕು ಮತ್ತು ಜೀವನ ಎಂದರು.
ಹಿಂದಿನ ವರ್ಷಗಳಲ್ಲಿ ಕುಡಿಯುವ ನೀರು ಹಾಗೂ ವಿದ್ಯುತ್ ಸಮಸ್ಯೆ ಹೆಚ್ಚಾಗಿತ್ತು. ಟ್ರಾನ್ಸ್‍ಫಾರ್ಮರ್‍ಗಳು ಮೂರು ನಾಲ್ಕು ತಿಂಗಳಾದರೂ ಸಿಗುತ್ತಿರಲಿಲ್ಲ. ಆದರೆ ಈಗ ಪರಿಸ್ಥಿತಿ ಬದಲಾಗಿದೆ. 24 ಗಂಟೆಯೊಳಗಾಗಿ ಟಿ.ಸಿ ನೀಡುವ ವ್ಯವಸ್ಥೆ ಇದೆ ಎಂದರು.
ಪಾವಗಡ ತಾಲ್ಲೂಕಿನಲ್ಲಿ ಈಗಾಗಲೇ ಸೊಲಾರ್ ಪಾರ್ಕ್ ನಿರ್ಮಾಣ ಮಾಡಲಾಗಿದ್ದು, ಜಿಲ್ಲೆಯಲ್ಲಿ ಅತಿ ಹೆಚ್ಫು ವಿದ್ಯುತ್ ಉತ್ಪಾದನೆ ಮಾಡುವಲ್ಲಿ ಮುಂದಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ತುಮಕೂರು ಬೆಸ್ಕಾಂ ಅಧಿಕ್ಷಕ ಇಂಜಿನಿಯರ್ ಲೋಕೇಶ್ ಅವರು, 2014ರಲ್ಲಿ ಇದ್ದ ವಿದ್ಯುತ್ ಉತ್ಪಾದನೆ 2,48554 ಮೆ.ವ್ಯಾ ಇಂದ 4,00,000 ಒ.W. ವರೆಗೆ ಏರಿಕೆಯಾಗಿದೆ. ಇದು ನಮ್ಮ ಬೇಡಿಕೆಗಿಂತ 1,85,000 ಒ.W. ಹೆಚ್ಚಾಗಿದೆ ಎಂದರು.
ಭಾರತವು ನಮ್ಮ ನೆರೆಯ ರಾಷ್ಟ್ರಗಳಿಗೆ ವಿದ್ಯುತ್‍ನ್ನು ಈಗ ರಫ್ತು ಮಾಡುತ್ತಿದೆ. ದೇಶದ ಎಲ್ಲಾ ಭಾಗಗಳನ್ನು ಸೇರಿಸುವಂತೆ 1,63,000 ಅಏಒ ನಷ್ಟು ಖಿಡಿಚಿಟಿsmissioಟಿ(ಪ್ರಸರಣ) ಲೈನ್‍ಗಳನ್ನು ಅಳವಡಿಸಿ ಒಂದೇ gಡಿiಜ ಸ್ಥಾಪಿಸಿ ಒಂದೇ ಜಿಡಿequeಟಿಛಿಥಿಯಲ್ಲಿ ನಡೆಸಲಾಗುತ್ತಿದೆ. ಲಡಾಕ್‍ನಿಂದ ಕನ್ಯಾಕುಮಾರಿವರೆಗೆ ಮತ್ತು ಕಚ್‍ನಿಂದ ಮ್ಯಾನ್ಮಾರ್ ಗಡಿವರೆಗೆ ಇರುವ gಡಿiಜ ಪ್ರಪಂಚದಲ್ಲಿ ಅತೀ ದೊಡ್ಡ iಟಿಣegಡಿಚಿಣeಜ gಡಿiಜ ಇದಾಗಿದೆ ಎಂದರು.
ಈ ಗ್ರಿಡ್‍ನ ಮೂಲಕ ನಾವು 1,12,000 ಒ.W. ವಿದ್ಯುತ್‍ನ್ನು ದೇಶದ ಒಂದು ಮೂಲೆಯಿಂದ ಇನ್ನೊಂದೆಡೆಗೆ ಸಾಗಿಸಬಹುದಾಗಿದೆ. (ಖeಟಿeತಿಚಿbಟe eಟಿeಡಿgಥಿ) ಇಂಧನ ಮೂಲದಿಂದ ವಿದ್ಯುತ್ ಉತ್ಪಾದಿಸುವ ಸಲಕರಣೆಗಳನ್ನು ನಾವು ಸ್ಥಾಪಿಸುತ್ತಿದ್ದೇವೆ. ಹಿಂದಿನ 5 ವರ್ಷಗಳಲ್ಲಿ ಸುಮಾರು ರೂ. 2,01,722 ಕೋಟಿ ಹಣವನ್ನು ಬಳಸಿ 2,921 ಹೊಸ Sub sಣಚಿಣioಟಿs, 3,926 Sub sಣಚಿಣioಟಿಗಳ ಸಾಮಥ್ರ್ಯವನ್ನು ಹೆಚ್ಚಿಸಿರುವುದು, 6,04,645 ಅಏಒ ಐಖಿ ಟiಟಿes, 2,68838 11 ಞv ಊಖಿ ಟiಟಿes ಅಳವಡಿಸಲಾಗಿದೆ. ಮತ್ತು 1,22,123 ಅಏಒ ಜಿeeಜeಡಿ ಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದರು.
2015ರಲ್ಲಿ ಹಳ್ಳಿಗಳಿಗೆ ಸರಬರಾಜು ಆಗುತ್ತಿದ್ದ 12.5 ಗಂಟೆ ವಿದ್ಯುತ್ ಸರಬರಾಜನ್ನು ಈಗ ಸರಾಸರಿ 22.5 ಗಂಟೆಗೆ ಹೆಚ್ಚಿಸಲಾಗಿದೆ. ಶೇ. 100ರಷ್ಟು ಹಳ್ಳಿಗಳಿಗೆ ವಿದ್ಯುದ್ದೀಕರಣ ಸಾಧಿಸಲಾಗಿದೆ (987 ದಿನಗಳೊಳಗಾಗಿ)18 ತಿಂಗಳುಗಳಲ್ಲಿ ಶೇ. 100ರಷ್ಟು ಮನೆಗಳಿಗೆ ವಿದ್ಯುತ್ ಸರಬರಾಜು ಸಾಧಿಸಲಾಗಿದೆ. ರೈತರಿಗೆ Soಟಚಿಡಿ ಠಿumಠಿ ಗಳನ್ನು ಅಳವಡಿಸಲು ಯೋಜನೆ ರೂಪಿಸಿ ಕೇಂದ್ರ ಸರ್ಕಾರದಿಂದ 30% ಸಬ್ಸಿಡಿ, ರಾಜ್ಯ ಸರ್ಕಾರದಿಂದ 30% ಸಬ್ಸಿಡಿ ಜೊತೆಗೆ 30% ಬ್ಯಾಂಕ್‍ಗಳಿಂದ ಸಾಲ ಸೌಲಭ್ಯ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನೊಣವಿನಕೆರೆ ಗಾಮ ಪಂಚಾಯ್ತಿ ಅಧ್ಯಕ್ಷೆ ಭಾಗ್ಯಮ್ಮ ಕುಮಾರ್, ಅಪರ ಜಿಲ್ಲಾಧಿಕಾರಿ ಡಾ. ಕೆ. ಚನ್ನಬಸಪ್ಪ, ಚಿತ್ರದುರ್ಗ ಬೆಸ್ಕಾಂ ಮುಖ್ಯ ಇಂಜಿನಿಯರ್ ಕೆ.ವಿ. ಗೋಂವಿಂದಪ್ಪ, ಎಸ್.ಎಲ್.ಆರ್.ಡಿ.ಸಿ. ಬೆಂಗಳೂರು ಕಾರ್ಯನಿರ್ವಾಹಕ ನಿರ್ದೇಶಕರಾದ ಕುಮಾರ್ ಎಸ್.ಟಿ. ಕುಮಾರ್, ಮುಂತಾದವರು ಉಪಸ್ಥಿತರಿದ್ದರು.