ತುಮಕೂರು:
ಪ್ರಸ್ತುತ ಸಮಾಜದಲ್ಲಿ ಆದರ್ಶಗಳ ಕೊರತೆ ಕಾಡುತ್ತಿರುವ ನಡುವೆ ದೊಡ್ಡಲಿಂಗಪ್ಪನವರ ಸೇವೆ, ಆದರ್ಶ ಅನುಕರಣೀಯವಾದದ್ದು. ಸಾಧಕರ ಜೀವನ ಚರಿತ್ರೆ ಓದುವ ಮೂಲಕ ಮುಂದಿನ ಪೀಳಿಗೆಗೆ ದಿಶೆ ದೊರಕುತ್ತದೆ. ಸರಳತೆ ಹಾಗೂ ಸ್ನೇಹ ಜೀವ ತುಂಬ ಮುಖ್ಯವಾಗುತ್ತದೆ. ಒಳಿತು ಕೆಡಕು ಮಾಡಿಸುವುದು ಮನಸ್ಸು. ಆತ್ಮದ ಸ್ಥಿತಿಯಲ್ಲಿ ಎಲ್ಲರೂ ಒಂದೇ ಆದರೂ ವ್ಯಕ್ತಿತ್ವದಲ್ಲಿ ಭಿನ್ನತೆಯಿರುತ್ತದೆ. ಅದಕ್ಕೆ ಕಾರಣ ಮನಸ್ಸು. ವ್ಯಕ್ತಿ ಮನಸ್ಸು ಸರಿಯಾದ ರೀತಿಯಲ್ಲಿ ಕೆಲಸ ಮಾಡಿದರೆ ಉತ್ತಮ ಕಾರ್ಯಗಳು ಆಗುತ್ತವೆ. ಜ್ಞಾನೇಂದ್ರಿಯಗಳು, ಕಣೇರ್ಂದ್ರಗಳು ಕೆಲಸ ಮಾಡಬೇಕಾದರೆ ಅದಕ್ಕೆ ಮನಸ್ಸು ಎದ್ದಿರಬೇಕು. ಆಗ ಮಾತ್ರ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಾಲಾನಂದ ಸ್ವಾಮೀಜಿ ತಿಳಿಸಿದರು.
ಅವರು ಒಕ್ಕಲಿಗರ ವಿಕಾಸ ವೇದಿಕೆ ತುಮಕೂರು, ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ ಮತ್ತು ಶಿಂಷಾ ಲಿಟರರಿ ಅಕಾಡೆಮಿ ಸಹಯೋಗದಲ್ಲಿ ಸಮುದಾಯ ಸೇವೆಯಲ್ಲಿ ಆರ್, ದೊಡ್ಡಲಿಂಗಪ್ಪನವರ ಬದುಕಿನ ಚಿತ್ರಣ “ನೋವುಂಡು ಬೆಳಕು ಬೀರುವ ದೀಪ’’ ಕೃತಿ ಲೋಕಾರ್ಪಣೆಗೊಳಿಸಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡುತ್ತಿದ್ದರು.
ಧನಾತ್ಮಕ ಚಿಂತನೆಯಿಂದ ಮಾತ್ರ ಮನುಳ್ಯ ಉತ್ತಮ ಹಂತಕ್ಕೆ ತಲುಪಲು ಸಾಧ್ಯವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಧನಾತ್ಮಕ ಗುಣಗಳನ್ನು ಬೆಳೆಸಿಕೊಳ್ಳುವುದು ಅವಶ್ಯಕವಾಗಿದೆ. ಅಂತಹ ಗುಣವನ್ನು ದೊಡ್ಡಲಿಂಗಪ್ಪನವರು ಬೆಳೆಸಿಕೊಂಡಿದ್ದು ಇತರರಿಗೆ ಮಾದರಿಯಾಗಿದ್ದಾರೆ. ಸಮಾಜಸೇವೆ ಮಾಡಲು ಮನಸ್ಸು ಇರಬೇಕು, ಒಳ್ಳೆಯ ಮನಸ್ಸಿ£ಂದ ಮಾಡಿದ ಸಮಾಜ ಸೇವೆ ಆತ್ಮತೃಪ್ತಿ ನೀಡುತ್ತದೆ.
ದೊಡ್ಡಲಿಂಗಪ್ಪನವರು ಇಂತಹ ಕಾರ್ಯಗಳನ್ನು ಮಾಡುತ್ತಿದ್ದು ಇವರ ಸರಳತೆ, ಆದರ್ಶಗಳು ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿ ಎಂದರು. ಯಾವ ವ್ಯಕ್ತಿ ಸಮಾಜಕ್ಕೋಸ್ಕರ ಬದುಕಿರುತ್ತಾನೋ ಅವನು ಸತ್ತ ಮೇಲೂ ಬದುಕಿರುತ್ತಾನೆ. ಯಾವ ವ್ಯಕ್ತಿ ತನಗಾಗಿ ಬದುಕಿರುತ್ತಾನೋ ಆತ ಬದುಕಿರುವಾಗಲೇ ಸತ್ತ ಸ್ಥಿತಿಯಲ್ಲಿರುತ್ತಾನೆ. ಕಳೆ ತರುವ ಕೊಳೆ ತೊಳೆಯುವ ಪುಸ್ತಕಗಳನ್ನು ಓದುವುದರಿಂದ ಬದುಕಿನಲ್ಲಿ ಸಾರ್ಥಕತೆ ತರುತ್ತದೆ ಎಂದು ತಿಳಿಸಿದರು.
ವಿಜ್ಞಾನ ಕೇಂದ್ರದ ಅಧ್ಯಕ್ಷ ಮರುಳಯ್ಯ ಪ್ರಾಸ್ತವಿಕವಾಗಿ ಮಾತನಾಡಿ ಪ್ರಚಾರದ ಸಮಾಜ ಸೇವೆ ಆಗಬಾರದು ಯಾರಿಗೂ ತಿಳಿಯದಂತೆ, ಪರೋಕ್ಷವಾಗಿ ಮಾಡುವುದು ಸೇವೆಯಾಗುತ್ತದೆ. ವಸ್ತು, ಹಣದ ರೂಪದಲ್ಲಿ ದಾನ ಮಾಡುವವರು ಸಮಾಜದಲ್ಲಿ ಸಿಗುತ್ತಾರೆ. ಅಂತಹ ಸೇವೆ ನಮಗೆ ಅವಶ್ಯಕತೆಯಿಲ್ಲ.
ಯಾವುದೇ ಫಲಾಫಲಗಳನ್ನು ಅಪೇಕ್ಷಿಸಿದೆ ಮಾಡುವುದೇ £ಜವಾದ ಸೇವೆಯಾಗುತ್ತದೆ. ಅಂತಹ ಸೇವೆಯನ್ನು ದೊಡ್ಡಲಿಂಗಪ್ಪನವರು ಮಾಡುತ್ತಿದ್ದಾರೆ. ಕುಂಚಿಟಿಗರ ಸಮುದಾಯ ಭವನ, ವಿದ್ಯಾರ್ಥಿ£ಲಯ £ರ್ಮಾಣದಂತಹ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು ಮಾತ್ರವಲ್ಲದೆ ಧಾರ್ಮಿಕ ಕ್ಷೇತ್ರದಲ್ಲಿ ಯೂ ಸಹ ಉತ್ತಮ ಕಾರ್ಯ ಮಾಡಿದ್ದಾರೆ. ಇವರ ಬದುಕು ಇಂದಿನ ಪೀಳಿಗೆಗೆ ಸ್ಪೂರ್ತಿದಾಯಕವಾಗಿದೆ ಎಂದರು.
ಹಿರಿಯ ಲೇಖಕರಾದ ಪೆÇ್ರ. ಎಂ.ಜಿ.ಚಂದ್ರಶೇಖರಯ್ಯ ಮಾತನಾಡಿ, ಈ ಕೃತಿ ರಚನೆ £ಜಕ್ಕೂ ಸಾರ್ಥಕವೆ£ಸುತ್ತದೆ. ಸಾರ್ವಜ£ಕ ಕೆಲಸವನ್ನು ತಮ್ಮ ಮನೆಯ ಕೆಲಸವೆಂದು ಭಾವಿಸುವ ದೊಡ್ಡ ಗುಣ ದೊಡ್ಡಲಿಂಗಪ್ಪನವರದ್ದು. ಅಂತಕರಣದಿಂದ ಸಮಾಜದ ಸಮಸ್ಯೆಗಳಿಗೆ ಮಿಡಿಯುವ ಹೃದಯ ದೊಡ್ಡಲಿಂಗಪ್ಪನವರದ್ದು ಇಂತವರ ಸಮಾಜಮುಖಿ ಚಿಂತಕರ ಸಂಖ್ಯೆ ಸಮಾಜದಲ್ಲಿ ಜಾಸ್ತಿಯಾಗಬೇಕು ಎಂದು ತಿಳಿಸಿದರು.
ಆರ್. ದೊಡ್ಡ ಲಿಂಗಪ್ಪನವರು ಮಾತನಾಡಿ, ಸ್ನೇಹ, ಪ್ರೀತಿ, ನಂಬಿಕೆಯಿಂದ ಯಾವುದೇ ಕಾರ್ಯವನ್ನು ಸಾಧಿಸಬಹುದು. ನಂಬಿಕೆ ಮೂರು ಅಕ್ಷರವೇ ಇರಬಹುದು ಆದರೆ ಅದನ್ನು ಸಂಪಾದಿಸುವುದು ತುಂಬ ಕಷÀ್ಟ. ಶಿಕ್ಷಣ ಎಡವಲು ಬಿಡುವುದಿಲ್ಲ ಸಂಸ್ಕಾರ ಕೆಡಲು ಬಿಡುವುದಿಲ್ಲ ಆದ್ದರಿಂದ ಪ್ರತಿಯೊಬ್ಬರೂ ಶಿಕ್ಷಣವಂತರಾಗಿ ಉತ್ತಮ ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕು ಎಂದರು.
ಕೃತಿ ಸಂಪಾದಕರಾದ ಎಂ.ಎಚ್.ನಾಗರಾಜು ಮಾತನಾಡಿ, ದೊಡ್ಡಲಿಂಗಪ್ಪನವರ ಸಮಾಜ ಸೇವೆ, ಅವರ ಬದುಕನ್ನು ಹತ್ತಿರದಿಂದ ನೋಡಿದವನು ನಾನು ಅವರ ಜೀವನ ಸಾಧನೆಗೆ ನಾನು £ೀಡಿದ ಶೀರ್ಷಿಕೆಯೇ ನೋವುಂಡು ಬೆಳಕು ಬೀರುವ ದೀಪ ಇದು ನನಗೆ ಸಾರ್ಥಕತೆ ತರುತ್ತದೆ ಎಂದು ತಮ್ಮ ಅನಿಸಿಕೆ ಹಂಚಿಕೊಂಡರು.
ವಿದ್ಯಾವಾಚಸ್ಪತಿ ಕವಿತಾಕೃಷÀ್ಣ, ಕಸಾಪ ಜಿಲ್ಲಾ ಅಧ್ಯಕ್ಷ ಸಿದ್ದಲಿಂಗಪ್ಪ ಮಾತನಾಡಿದರು.
ಕವಿವಿ ಸಂಘದ ಕಾ.ಅಧ್ಯಕ್ಷ ಕಾಮರಾಜ್, ಕೇಂದ್ರ ಒಕ್ಕಲಿಗರ ಸಂಘದ ನಿರ್ದೇಶಕ ಹನುಮಂತರಾಯಪ್ಪ, ಡಾ.ಹಾಲಪ್ಪ ಪ್ರತಿಷ್ಟಾನದ ಅಧ್ಯಕ್ಷ ಡಾ. ಮುರಳೀಧರ ಹಾಲಪ್ಪ, ಕೆಂಪೇಗೌಡ ಬ್ಯಾಂಕ್ ಉಪಾಧ್ಯಕ್ಷ ಎಲ್. ಲಿಂಗಣ್ಣ ಸೇರಿದಂತೆ ಮತ್ತಿತರರಿದ್ದರು.